Log In
BREAKING NEWS >
ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಪರ್ಯಾಯ ಮಹೋತ್ಸವದ ಕಚೇರಿ ಉದ್ಘಾಟನೆ-ವಿವಿಧ ಸಮಿತಿಗಳ ಪಟ್ಟಿ ಪ್ರಕಟ...

ಮಂಗಳೂರು: ಎಲ್‌ಎಸ್‌ಡಿ ಡ್ರಗ್ ಮಾರಾಟ – ಓರ್ವನ ಬಂಧನ, 16 ಲಕ್ಷಕ್ಕೂ ಹೆಚ್ಚು ಮೌಲ್ಯದ 840 ಸ್ಟ್ರಿಪ್‌ ವಶ

ಮಂಗಳೂರು, ಜೂ.11: ಎಲ್‌ಎಸ್‌ಡಿ ಡ್ರಗ್ ಸ್ಟ್ರಿಪ್ಸ್‌‌ಗಳನ್ನು ಮಾರಾಟ ಮಾಡುತ್ತಿದ್ದ ಓರ್ವನನ್ನು ಮಂಗಳೂರು ನಗರ ಪೊಲೀಸರು ಕದ್ರಿ ಪೊಲೀಸ್ ಠಾಣೆ ಮಿತಿಯಲ್ಲಿ ಬಂಧಿಸಿದ್ದು, ಆರೋಪಿಯಿಂದ 16,80,000 ಲಕ್ಷಕ್ಕೂ ಹೆಚ್ಚು ಮೌಲ್ಯದ 840 ಸ್ಟ್ರಿಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಕೇರಳ ಕ್ಯಾಲಿಕಟ್‌ನ ಮೊಹಮ್ಮದ್ ಅಜಿನಾಸ್(25) ಎಂದು ಗುರುತಿಸಲಾಗಿದೆ.

ಬಂಧಿತರಿಂದ ಸುಮಾರು 16,80,000 ಲಕ್ಷಕ್ಕೂ ಹೆಚ್ಚು ಮೌಲ್ಯದ 840 ಸ್ಟ್ರಿಪ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಒಂದು ಸ್ಟ್ರಿಪ್‌ಗೆ 2000 ರಿಂದ 6000 ರೂಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಬಂಧಿತ ಪ್ರಮುಖವಾಗಿ ಕೇರಳ, ಗೋವಾ, ಮಂಗಳೂರಿನಲ್ಲಿ ನಡೆಯುವ ಹೈ – ಎಂಡ್ ಪಾರ್ಟಿಗಳಿಗೆ ಮತ್ತು ಗ್ರಾಹಕರಿಗೆ ಎಲ್‌ಎಸ್‌ಡಿ ಡ್ರಗ್ ಅನ್ನು ಸರಬರಾಜು ಮಾಡುತ್ತಿದ್ದ. ಆರೋಪಿಯಿಂದ ವಶಪಡಿಸಿಕೊಂಡಿ ಡ್ರಗ್ಸ್ ಪ್ರಮಾಣ ಅಧಿಕವಾಗಿರುವಾಗ ಆತನ ಸಂಪರ್ಕದಲ್ಲಿ ಪೆಡ್ಲರ್ ಹಾಗೂ ಗ್ರಾಹಕರ ಸಂಪರ್ಕವೂ ದೊಡ್ಡ ಮಟ್ಟದಲ್ಲಿರಬಹುದು. ಹೀಗಾಗಿ ಇದರಲ್ಲಿ ಭಾಗಿಯಾಗಿರುವವರನ್ನು ಎಂದು ನಾವು ತನಿಖೆ ಮಾಡುತ್ತೇವೆ ಎಂದು ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಇನ್ನು ಆರೋಪಿ ಮೊಹಮ್ಮದ ಅಜಿನಾಸ್ ಮಂಗಳೂರು ನಗರದ ಕದ್ರಿ ಮೈದಾನದ ಬಳಿ ಗ್ರಾಹಕರಿಗಾಗಿ ಕಾಯುತ್ತಿದ್ದಾಗ ಖಚಿತ ಮಾಹಿತಿ ಪಡೆದು ಪಿಎಸ್ ಐ ಪ್ರದೀಪ್ ಟಿ.ಆರ್ ಮತ್ತು ಸಿಬ್ಬಂದಿಯವರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಈ ಪ್ರಕರಣವನ್ನು ಭೇದಿಸಿದ್ದಕ್ಕಾಗಿ ಪೊಲೀಸ್ ತಂಡಕ್ಕೆ 10,000 ಬಹುಮಾನ ನೀಡಲಾಗಿದೆ.

No Comments

Leave A Comment