Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಬೆಂಗಳೂರು: ವೀರ್ಯ ತಿಮಿಂಗಲದ ಅಂಬರ್ ಗ್ರೀಸ್ ಮಾರಾಟ-ನಾಲ್ವರ ಬಂಧನ

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ವೀರ್ಯ ತಿಮಿಂಗಲದ ಅಂಬರ್ ಗ್ರೀಸ್ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಸೈಯದ್ ತಜ್ಮುಲ್ (54), ಸಲೀಂ ಪಾಷಾ (48), ರಫೀ ಉಲ್ಲಾ ಶರೀಫ್ (45) ಹಾಗೂ ನಾಸೀರ್ ಪಾಷಾ (34) ಬಂಧಿತ ಆರೋಪಿಗಳು.

ಬಂಧಿತರಿಂದ ಅಂದಾಜು 8 ಕೋಟಿ ರೂ ಬೆಲೆಬಾಳುವ 6ಕೆಜಿ 700 ಗ್ರಾಂ ತೂಕದ ವೀರ್ಯ ತಿಮಿಂಗಲದ ಅಂಬರ್ ಗ್ರೀಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಕೋಲಾರದ ವ್ಯಕ್ತಿಯಿಂದ ಇದನ್ನು ಪಡೆದಿದ್ದರೆಂದು ತಿಳಿದುಬಂದಿದೆ. ಕೆಜಿ ಹಳ್ಳಿ ಪೋಲೀಸ್ ಕಾರ್ಯಾಚರಣೆಯಿಂದಾಗಿ ಈ ಪ್ರಕರಣ ಬೆಳಕು ಕಂಡಿದೆ.

No Comments

Leave A Comment