Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಸಿಬ್ಬಂದಿಗಳಿಗೆ ವೇತನ ಬಾಕಿ : ಉಡುಪಿಯ ಬಿ.ಆರ್ ಶೆಟ್ಟಿ ತಾಯಿ ಮತ್ತು ಮಕ್ಕಳಆಸ್ಪತ್ರೆಯ ಮುಂಭಾಗ ಧರಣಿ-ಮತ್ತೊ೦ದೆಡೆಯಲಿ ಆಸ್ಪತ್ರೆಯ ಮೆಸ್ಕಾ೦ ಬಿಲ್ 11ಲಕ್ಷ ಬಾಕಿ

ಉಡುಪಿ : ಉಡುಪಿ ನಗರದ ಚಿತ್ತರ೦ಜನ್ ಸರ್ಕಲ್ ಬಳಿಯಿರುವ ಬಿ.ಆರ್.ಎಸ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ವೇತನ ಬಾಕಿ ಇರುವ ವಿಚಾರದಲ್ಲಿ ಇಂದು ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ.

ಬಿ.ಆರ್ ಶೆಟ್ಟಿ ಆಸ್ಪತ್ರೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಸಿಬ್ಬಂದಿಗಳಿಗೆ ವೇತನ ಬಾಕಿ ಇರುವ ಕಾರಣ ಇಂದು ಎಲ್ಲಾ ‌ವಿಭಾಗದ ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೇ ಆಸ್ಪತ್ರೆಯ ಮುಂಭಾಗದಲ್ಲಿ ಧರಣಿ ಕುಳಿತ್ತಿದ್ದಾರೆ.

ಆಸ್ಪತ್ರೆಯ ಮುಂಭಾಗ ನಡೆದ ಧರಣಿಯಲ್ಲಿ ವೈದ್ಯರು, ನರ್ಸ್ ಗಳು,ಹಾಗೂ ಎಲ್ಲಾ ಸಿಬ್ಬಂದಿಗಳು ಇದ್ದಾರೆ ಎನ್ನಲಾಗಿದೆ.

“ಕಳೆದ ಮೂರು ತಿಂಗಳಿನಿಂದ ಯಾವುದೇ ವೇತನ ಸಿಗಲಿಲ್ಲ. ಕಳೆದ ವರ್ಷದ ಆಕ್ಟೋಬರ್ ನಿಂದ ಪಿಎಫ್ ಐಯನ್ನೂ ಕೊಡಲಿಲ್ಲ, ಸಂಬಳ ಕೊಡುವ ಬಗ್ಗೆ ಯಾವುದೇ ಮಾಹಿತಿ ಇಲ್ಲಾ,ಇನ್ನೂ ಕೆಲಸ ಮಾಡಿ ಎಂದು ಹೇಳುತ್ತಾರೆ” ಎಂಬ ಆರೋಪವನ್ನು ಆಸ್ಪತ್ರೆಯ ಸಿಬ್ಬಂದಿಗಳು ಮಾಡಿದ್ದಾರೆ.

ಬಿ.ಆರ್ ಶೆಟ್ಟಿ ಆಸ್ಪತ್ರೆಯ ಸಿಬ್ಬಂದಿಗಳ ಪ್ರತಿಭಟನೆಯಿಂದ ಆಸ್ಪತ್ರೆಯ ರೋಗಿಗಳಿಗೆ ತೊಂದರೆಯಾಗಿದೆ.ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳು ಈಗ ಇವರ ಪ್ರತಿಭಟನೆಯಿಂದ ಸಮಸ್ಯೆಯಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ.

ಮತ್ತೊ೦ದೆಡೆಯಲಿ ಆಸ್ಪತ್ರೆಯ ಮೆಸ್ಕಾ೦ ಬಿಲ್ 11ಲಕ್ಷ ಬಾಕಿ:– ಒ೦ದೆಡೆಯಲ್ಲಿ ಸಿಬ್ಬ೦ದಿಗಳ ವೇತನ ನೀಡಿಲ್ಲವೆ೦ಬ ಕೊರಕಾದರೆ ಮತ್ತೊ೦ದೆಡೆಯಲ್ಲಿ ಆಸ್ಪತ್ರೆಯ ವಿದ್ಯುತ್ ಬಿಲ್ ತಿ೦ಗಳಿಗೆ 11ಲಕ್ಷ ರೂಪಾಯಿ ಬರುತ್ತಿದ್ದು ಇದನ್ನು ಇವರೆಗೆ ಪಾವತಿಸುವಲ್ಲಿಯು ಈ ಆಸ್ಪತ್ರೆಯ ಉಸ್ತುವಾರಿಯನ್ನು ನೀಡಿಕೊಳ್ಳುವವರಿಗೆ ದೊಡ್ಡ ಹೊರೆಯಾಗಿದೆ ಎ೦ದು ತಿಳಿದು ಬ೦ದಿದೆ.ಈಗಾಗಲೇ ಎಲ್ಲಾ ಹ೦ತದಲ್ಲಿಯೂ ಈ ಆಸ್ಪತ್ರೆಯು ಭಾರೀ ನಷ್ಟದಲ್ಲಿಯೇ ಸಾಗುತ್ತಿದೆ.

ಹೆರಿಗೆಯ ಎಲ್ಲಾ ಖರ್ಚುವೆಚ್ಚವೂ ಹಾಗೂ ಊಟವೂ ಉಚಿತವಾಗಿಯೇ ಈ ಆಸ್ಪತ್ರೆಯಲ್ಲಿ ನೀಡುವುದರಿ೦ದಾಗಿ ಹೆಚ್ಚಿನವರು ಹೆರಿಗೆಗೆ ಈ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈಗಾಗಲೇ 10,000ಸಾವಿರದಷ್ಟು ಮಕ್ಕಳು ಈ ಹೊಸ ಆಡಳಿತ ವ್ಯವಸ್ಥೆಯಲ್ಲಿ ಜನನವನ್ನು ಪಡೆದುಕೊ೦ಡಿದ್ದಾರೆ.

ಧರಣಿಗೆ ಸ೦ಬ೦ಧಿಸಿದ೦ತೆ ಜಿಲ್ಲಾಧಿಕಾರಿಯವರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದುಕೊ೦ಡು ಪರಿಹಾರ ಕಾರ್ಯಕ್ರಮದತ್ತ ಚಿ೦ತಿಸಿದ್ದಾರೆ೦ದು ಬಲ್ಲ ಮೂಲಗಳಿ೦ದ ತಿಳಿದು ಬ೦ದಿದೆ.

No Comments

Leave A Comment