Log In
BREAKING NEWS >
ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಪರ್ಯಾಯ ಮಹೋತ್ಸವದ ಕಚೇರಿ ಉದ್ಘಾಟನೆ-ವಿವಿಧ ಸಮಿತಿಗಳ ಪಟ್ಟಿ ಪ್ರಕಟ...

ರೋಹಿಣಿ ಸಿಂಧೂರಿ ಯಶೋಗಾತೆ ಆಧರಿಸಿ ಚಿತ್ರ ನಿರ್ಮಾಣ

ಮಂಡ್ಯ: ಇತ್ತೀಚೆಗೆ ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡ ರೋಹಿಣಿ ಸಿಂಧೂರಿ ಅವರ ಯಶೋಗಾತೆ ಆಧರಿಸಿ ಭಾರತ ಸಿಂಧೂರಿ ಎಂಬ ಹೆಸರಿನಲ್ಲಿ ಚಲನಚಿತ್ರ ನಿರ್ಮಾಣವಾಗುತ್ತಿದೆ.

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್ ಮಂಡ್ಯ ಇವರ ವತಿಯಿಂದ ಪತ್ರಕರ್ತ, ಸಾಹಿತಿ ಎಸ್.ಕೃಷ್ಣಸ್ವರ್ಣಸಂದ್ರ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಿತ್ರದ ಶೀರ್ಷಿಕೆ ನೋಂದಣಿಯಾಗಿದ್ದು, ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಪೂರ್ಣಗೊಂಡಿದ್ದು, ರಾಜ್ಯದಲ್ಲಿ ಕೊರೋನಾ ಲಾಕ್‍ಡೌನ್ ಮುಗಿದ ಬಳಿಕ ಸಿನಿಮಾ ಸೆಟ್ಟೇರಲಿದೆ.
ರೋಹಿಣಿ ಸಿಂಧೂರಿ ಅವರು 2014, ಜೂನ್ 9ರಂದು ಮಂಡ್ಯ ಜಿಲ್ಲೆಗೆ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಆಗಮಿಸಿ, ಒಂದು ವರ್ಷದ ಅವಧಿಯಲ್ಲಿ ಸ್ವಚ್ಛ ಭಾರತ್ ಅಭಿಯಾನ ಯೋಜನೆಯನ್ನು ಅನುಷ್ಟಾನಗೊಳಿಸಿ, ರಾಜ್ಯಕ್ಕೆ ಪ್ರಥಮ, ರಾಷ್ಟ್ರಕ್ಕೆ ತೃತೀಯ ಸ್ಥಾನವನ್ನು ತಂದುಕೊಟ್ಟು ಸ್ವತಂತ್ರ್ಯ ನಂತರ 67 ವರ್ಷಕ್ಕೆ ಮಹಿಳೆಯರಿಗೆ ಸ್ವಾಭಿಮಾನದ ಸ್ವಾತಂತ್ರ್ಯ ತಂದುಕೊಟ್ಟ ಕಥಾನಕ ಇದಾಗಿದೆ.
ಸಂಸ್ಕøತಿಯ ಜನನಿ ಮಹಿಳೆಯಾಗಿ, ತಾಯಿಯಾಗಿ, ತಂಗಿಯಾಗಿ, ಪತ್ನಿಯಾಗಿ ಎಲ್ಲಾ ಸ್ಥರದಲ್ಲೂ ಹೆಣ್ಣು ಅಗ್ರ ಸ್ಥಾನದಲ್ಲಿ ನಿಂತು ಬದುಕು ರೂಪಿಸುವುದೇ ಕಥೆಯ ಹಂದರವಾಗಿದ್ದು, ಒಂದು ವರ್ಷದಲ್ಲಿ ಸಾಧಿಸಿದ ಕಾಯಕವನ್ನು ಆಧರಿಸಿ, ಪ್ರಥಮ ಆವೃತ್ತಿಯಾಗಿ ಭಾರತ ಸಿಂಧೂರಿ ಚಲನಚಿತ್ರ ಮೂಡಿಬರಲಿದ್ದು, ಎರಡನೇ ಆವೃತ್ತಿಯಾಗಿ ಹಾಸನ ಮತ್ತು ಮೈಸೂರಿನ ಜಿಲ್ಲಾಧಿಕಾರಿಯಾಗಿ ಅವರು ಮಾಡಿದ ಕಾರ್ಯವೈಖರಿ, ಅನುಭವಿಸಿದ ನೋವು, ಐಎಎಸ್ ಅಧಿಕಾರಿಯಾಗಿ ಹೆಸರು ಮಾಡಿದ ಕಥನಕ ಸಿನಿಮಾದಲ್ಲಿ ಅಳವಡಿಸಲಾಗಿದ್ದು, ಚಿತ್ರವನ್ನು ಪತ್ರಕರ್ತ, ಸಾಹಿತಿ ಎಸ್.ಕೃಷ್ಣಸ್ವರ್ಣಸಂದ್ರ ನಿರ್ದೇಶನ ಹಾಗೂ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರದ ಪಾತ್ರ ವರ್ಗ ಹಾಗೂ ತಂತ್ರಜ್ಞ ವರ್ಗದ ಬಗ್ಗೆ ಆಯ್ಕೆ ನಡೆಯುತ್ತಿದೆ.

No Comments

Leave A Comment