Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಕೋಟಿ ರೂ ಪಡೆದ ಆರೋಪ:ಮುಖ್ಯಮ೦ತ್ರಿ ಬಿ ಎಸ್ ವೈಗೆ ಸೇರಿದ೦ತೆ ನಾಲ್ಕುಮ೦ದಿಗೆ ಇಡಿ ನೋಟಿಸ್-ಮುಳ್ಳಿನ ಬೇಲಿಯ ಮೇಲೆ ಯಡ್ಡಿ ಭವಿಷ್ಯ-ಸಿಎ೦ ಸ್ಥಾನ ಕಳೆದು ಕೊಳ್ಳುವ ಭೀತಿಯಲ್ಲಿ ಬಿವೈಎಸ್

ಹೌದು ಕಳೆದ ಬಾರಿಯ ಲಾಕ್ ಡೌನ್ ಸಮಯದಲ್ಲಿ ರಾಜ್ಯದ ಮುಖ್ಯಮ೦ತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಅವರ ಮಗನಾದ ವಿಜೇ೦ದ್ರ ಸೇರಿದ೦ತೆ ಇತರ ಮೂವರು 7ಕೋಟಿ ರೂಪಾಯಿಯನ್ನು ತಮ್ಮ ಟ್ರಸ್ಟ್ ಗೆ ಪಡೆದು ಕೊ೦ಡು ತಮ್ಮ ಮ೦ತ್ರಿ ಸ್ಥಾನವನ್ನು ದುರುಪಯೋಗ ಪಡಿಸಿಕೊ೦ಡಿದ್ದಾರೆ೦ಬ ಆರೋಪವೊ೦ದನ್ನು ಟಿ.ಜೆ ಅಬ್ರಹಾ೦ ಮಾಡಿರುವ ಹಿನ್ನಲೆಯಲ್ಲಿ ಇದೀಗ ಇಡಿಯು ಇವರುಗಳಿಗೆ ನೋಟಿಸ್ ಜಾರಿ ಮಾಡಿದ್ದು ತನಿಖೆಗೆ ಹಾಜರಾಗುವ೦ತೆ ಆದೇಶವನ್ನು ನೀಡಿದರ ಹಿನ್ನಲೆಯಲ್ಲಿ ಮುಖ್ಯಮ೦ತ್ರಿಯೂ ಸಹ ದೆಹಲಿಯ ಇಡಿ ಕಛೇರಿಗೆ ಹಾಜರಾಗಬೇಕಾದ ಪ್ರಸ೦ಗ ಇದೀಗ ಮುಖ್ಯಮ೦ತ್ರಿಗೆ ದೊಡ್ಡ ಕ೦ಟಕವನ್ನು ತ೦ದೊಡ್ದಿದೆ ಎನ್ನಲಾಗಿದೆ.

ಯಡಿಯೂರಪ್ಪ ಸೇರಿದ೦ತೆ ಅವರ ಪುತ್ರ ಹಾಗೂ ಇತರ ಇಬ್ಬರು 7 ಕೋಟಿ ರೂ ಕಿಕ್ ಬ್ಯಾಕ್ ಪಡೆದ ಈ ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ ಕಳೆದ ಕೆಲವೇ ದಿನದ ಹಿ೦ದೆ ವಿಜೇ೦ದ್ರ ರವರು ದೆಹಲಿಗೆ ತೆರಳಬೇಕಾಯಿತು.ಮಾತ್ರವಲ್ಲದೇ ರಾಜ್ಯದ ರಾಜಕೀಯ ಮಹತ್ವದ ಬೆಳವಣಿಗೆ ಕಾರಣವಾಗಿದೆ.

ಈ ಪ್ರಕರಣವೂ ಇದೀಗ ದೆಹಲಿಯಲ್ಲಿನ ಬಿಜೆಪಿ ಹೈಕಮಾ೦ಡಿಗೂ ಬಿಸಿ ಮುಟ್ಟಿಸಿದೆ. ಮಾತ್ರವಲ್ಲದೇ ಹೈಕಮಾ೦ಡ್ ಈ ಬಗ್ಗೆ ಕರ್ನಾಟಕ ರಾಜ್ಯದ ಬಗ್ಗೆ ಚಿ೦ತನೆಯನ್ನು ನಡೆಸುವ೦ತಾಗಿದೆ. ಮಾತ್ರವಲ್ಲದೇ ನಾಯಕತ್ವದ ಬದಲಾವಣೆಯತ್ತ ಚಿ೦ತನೆಯನ್ನು ನಡೆಸುತ್ತಿದೆ ಎನ್ನಲಾಗಿದೆ.

ಇದಕ್ಕಾಗಿ ಉನ್ನತ ಮಟ್ಟದಲ್ಲಿ ಅ೦ದರೆ ಆರ್ ಎಸ್ ಎಸ್ ಮುಖ೦ಡ ಹಾಗೂ ಇತರ ನಾಯಕರಲ್ಲಿ ಚರ್ಚಿಸಿ ಮಹತ್ವದ ನಿರ್ಧಾರವನ್ನು ಹೊರಹಾಕಲು ಮು೦ದಾಗಿದೆ ಎನ್ನಲಾಗಿದೆ.ಇದರಿ೦ದಾಗಿ ರಾಜ್ಯದ ಬಿಜೆಪಿ ಪಾಳಯದಲ್ಲಿ ಮಿ೦ಚಿನ ಸ೦ಚಲನವನ್ನು೦ಟು ಮಾಡಿದೆ.
ಒ೦ದು ವೇಳೆ ಯಡಿಯೂರಪ್ಪರವರನ್ನು ಮುಖ್ಯಮ೦ತ್ರಿಸ್ಥಾನದಿ೦ದ ಕೆಳಗಿಳಿಸಿದರೆ ರಾಜ್ಯದಲ್ಲಿನ ಮುಖ್ಯಮ೦ತ್ರಿ ಸ್ಥಾನವನ್ನು ಯಾರಿಗೆ ನೀಡಬೇಕೆ೦ಬ ಚರ್ಚೆಯೂ ಬಿಜೆಪಿ ರಾಷ್ಟ್ರೀಯ ನಾಯಕರ ಮಟ್ಟದಲ್ಲಿ ನಡೆಯಿತ್ತಿದೆ.

ಇಡಿ ಇಲಾಖೆಯು ನೊಟೀಸ್ ಜಾರಿಮಾಡಿರುವುದು ಬಿಜೆಪಿಯ ಪಳಯಕ್ಕೆ ಇದೀಗ ನು೦ಗಲಾಗದ ತುತ್ತಾಗಿದೆ ಪರಿಣಮಿಸಿದೆ.
ಯಡಿಯೂರಪ್ಪರವನ್ನು ಬೆ೦ಬಲಿಸುವುದಕ್ಕಾಗಿ ಸಚಿವರು ಸೇರಿದ೦ತೆ ಸುಮಾರು 65 ಶಾಸಕರು ಎದುರುಗಡೆಯಲ್ಲಿ ಬೆ೦ಬಲಿಸುತ್ತಿದ್ದಾರೆ ಆದರೆ ಹೈಕಮಾ೦ಡ್ ಮ೦ತ್ರಿಸ್ಥಾನವನ್ನು ಬಿಟ್ಟುಕೊಡಲು ಹೇಳಿದಲ್ಲಿ ಸಚಿವರಿಗೂ ತಮ್ಮ ಸ್ಥಾನವನ್ನು ಕಳೆದಿಕೊಳ್ಳಬೇಕಾದ೦ತಹ ದೊಡ್ಡ ಗ೦ಡಾ೦ತರ ನಿರ್ಮಾಣವಾಗಲಿದೆ.

ಒಟ್ಟಾರೆ ಮುಖ್ಯಮ೦ತ್ರಿಯವರ ರಾಜಕೀಯ ಹಾಗೂ ಮ೦ತ್ರಿಸ್ಥಾನ ಇದೀಗ ಇಡಿ ಜಾರಿ ಮಾಡಿರುವ ನೊಟೀಸ್ ನಿ೦ದಾಗಿ ಮುಳ್ಳಿನ ಬೇಲಿ ಹಾಸಿದ೦ತಾಗಿದೆ.

ಈ ಘಟನೆಗೆ ಬೆದರಿದ ಬಿಎಸ್ ವೈ ತಾನು ಹೈಕಮಾ೦ಡ್ ಹೇಳಿದರೆ ರಾಜೀನಾಮೆಯನ್ನು ನೀಡಲು ಸಿದ್ದವೆ೦ಬ ಹೊಸ ಬಾ೦ಬ್ ಸಿಡಿಸಿದ್ದಾರೆ.

ಚೆ೦ಡು ಇದೀಗ ಹೈಕಮಾ೦ಡ್ ಅ೦ಗಳದಲಿ.

No Comments

Leave A Comment