Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

‘ದಿ ಲಂಚ್ ಬಾಕ್ಸ್’ ಖ್ಯಾತಿಯ ನಿರ್ಮಾಪಕಿ ಸೆಹರ್ ಅಲಿ ಲತೀಫ್ ಹೃದಯಾಘಾತದಿಂದ ನಿಧನ

ಮುಂಬೈ: ಬಾಲಿವುಡ್‌ನ ನಿರ್ಮಾಪಕಿ ಹಾಗೂ ಕಾಸ್ಟಿಂಗ್‌ ನಿರ್ದೇಶಕಿ ಸೆಹರ್ ಅಲಿ ಲತೀಫ್ ಸೋಮವಾರ ತಡ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರು ಇಲ್ಲಿನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕಳೆದೊಂದು ವಾರದಿಂದ ಚೇತರಿಸಿಕೊಳ್ಳುತ್ತಿದ್ದ ಸೆಹರ್ ನಿಧನ ಹೊಂದಿದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ದಿವಂಗತ ನಟ ಇರ್ಫಾನ್ ಖಾನ್ ನಟನೆಯ ‘ದಿ ಲಂಚ್ ಬಾಕ್ಸ್‘ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ಕಾಸ್ಟಿಂಗ್‌ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದರು. ಸೆಹರ್‌ಗೆ ಈ ಚಿತ್ರ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ಸ್ವರಾ ಭಾಸ್ಕರ್ ಅಭಿನಯದ ಭಾಗ್ ಬೀನಿ ಭಾಗ್ ಹಾಗೂ ಮಸ್ಕಾ ಸಿನಿಮಾ ನಿರ್ಮಿಸುವ ಮೂಲಕ ಸೆಹರ್‌ ಖ್ಯಾತಿಗಳಿಸಿದ್ದರು. ಸೆಹರ್ ಅಲಿ ಲತೀಫ್ ,ಪತಿ ಹಾಗೂ ಪೋಷಕರನ್ನು ಅಗಲಿದ್ದಾರೆ.

No Comments

Leave A Comment