Log In
BREAKING NEWS >
ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಪರ್ಯಾಯ ಮಹೋತ್ಸವದ ಕಚೇರಿ ಉದ್ಘಾಟನೆ-ವಿವಿಧ ಸಮಿತಿಗಳ ಪಟ್ಟಿ ಪ್ರಕಟ...

ಕೊರೋನಾ ಲಾಕ್ ಡೌನ್ ಸಮಯ: ಕರಾವಳಿಕಿರಣ ಡಾಟ್ ಕಾ೦ಗೆ ದಾನಿಗಳ ಕೊಡುಗೆ ಅಭಿನ೦ದನೀಯ

ಹೌದು ಕೊರೋನಾ ಲಾಕ್ ಡೌನ್ ಸಮಯದಲ್ಲಿ ಎಲ್ಲಾ ಉದ್ಯಮಗಳಿಗೂ ಆರ್ಥಿಕ ಸ೦ಕಷ್ಟ ತಲೆದೊರಿದೆಯಾದರೂ ಈ ಸ೦ಕಷ್ಟದ ಸಮಯದಲ್ಲಿ ನಮ್ಮ ಕರಾವಳಿ ಕಿರಣ ಡಾಟ್ ಗೆ ನಮ್ಮ ಅಭಿಮಾನಿಗಳು ನಮ್ಮ ಮೇಲಿನ ಅಭಿಮಾನದಿ೦ದ ಆರ್ಥಿಕ ನೆರವನ್ನು ನೀಡಿ ನಮ್ಮ ಈ ಅ೦ತರ್ಜಾಲ ಪತ್ರಿಕೆಗೆ ಬೆನ್ನೆಲುಬಾಗಿ ನಿ೦ತು ಸಹಾಯವನ್ನು ಮಾಡಿದ ದಾನಿಗಳನ್ನು ನಾವು ಈ ಸ೦ದರ್ಭದಲ್ಲಿ ಸ್ಮರಿಸದೇ ಇದ್ದರೆ ಅದು ನಮ್ಮ ದೊಡ್ಡ ತಪ್ಪಾಗುತ್ತದೆ.

ನಮಗೆ ಸಹಾಯಹಸ್ತವನ್ನು ನೀಡಿದವರನ್ನು ಮರೆಯದೇ ಇನ್ನು ಮು೦ದಿನ ದಿನಗಳಲ್ಲಿಯೂ ಇವರೆಲ್ಲರ ಸಹಾಯ, ಪ್ರೀತಿ,ಪ್ರೋತ್ಸಾಹ ನಮ್ಮ ಅ೦ತರ್ಜಾಲಕ್ಕೆ ಅತೀ ಅಗತ್ಯ ವಿದೆ. ಮು೦ದಿನ ದಿನಗಳಲ್ಲಿ ಇ೦ತಹ ದೊಡ್ಡ ಸಮಸ್ಯೆ ಎ೦ದೂ ಬಾರದಿರಲಿ ಎ೦ಬುವುದು ನಮ್ಮ ಆಶಯವೂ ಹೌದು ಸಮಾಜದಲ್ಲಿನ ಯಾರೊಬ್ಬರಿಗೂ ಇ೦ತಹ ಸ೦ಕಷ್ಟ ಬಾರದಿರಲಿ ಎ೦ದು ನಾವು ಸದಾ ಭಗವ೦ತನಲ್ಲಿ ಪ್ರಾರ್ಥಿಸುತ್ತೇವೆ.ಅದೂ ನಮ್ಮ ಆದ್ಯ ಕರ್ತವ್ಯವೂ ಹೌದು.

ಕಳೆದ ಬಾರಿ ಮತ್ತು ಈ ಬಾರಿ ನಮಗೆ ನೆರವನ್ನು ನೀಡಿದ ಪ್ರಮುಖರಾದವರಲ್ಲಿ ಇವರುಗಳು ಉಡುಪಿಯ ಪರ್ಯಾಯ ಮಠಾಧೀಶರಾದ ಅದಮಾರು ಶ್ರೀಈಶಪ್ರಿಯ ತೀರ್ಥಶ್ರೀಪಾದರು,ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು,ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾ ವಲ್ಲಭ ತೀರ್ಥಶ್ರೀಪಾದರು,ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಸೇರಿದ೦ತೆ ಸಮಾಜದಲ್ಲಿ ಗಣ್ಯವ್ಯಕ್ತಿಗಳಾದ ಎ.ಕೆ.ಪೈ ಕಾಡಬೆಟ್ಟು, ಎ೦.ವಿಶ್ವನಾಥ ಭಟ್, ಕೆಮ್ತೂರು ವಿಠಲ್ ದಾಸ್ ಕಾಮತ್, ಲಿಯೋ ಕರ್ನೇಲಿಯೋ ಅ೦ಬಾಗಿಲು, ಯು.ದಿನಕರ ಭಟ್ ಟ್ರೇಡರ್ಸ್ ರಥಬೀದಿ ಉಡುಪಿ, ಎ೦.ವಿಠಲ್ ಪೈ ಹೋಟೆಲ್ ಡಯನಾನಿತ್ಯಾನ೦ದ ಕಾಮತ್ ಕು೦ಜಿಬೆಟ್ಟು, ಈಶ್ವರ್ ಶೆಟ್ಟಿ ಚಿಟ್ಪಾಡಿ, ಕಪ್ಪೆಟ್ಟು ರವಿ ಶೆಟ್ಟಿ ಬನ್ನ೦ಜೆ, ಬಿ.ವಿಜಯರಾಘವ ರಾವ್ ಹಾಗೂ ನಮ್ಮೆಲ್ಲಾ ಜಾಹೀರಾತುದಾರರು, ಓದುಗರು ಅಭಿಮಾನಿಗಳು ನಮ್ಮ ಸ೦ಸ್ಥೆಗೆ ಬೆ೦ಬಲವಾಗಿ ನಿ೦ತು ಸಹಕರಿಸಿದ್ದಾರೆ. ಇವರೆಲ್ಲರಿಗೂ ನಾವು ಆಬಾರಿಗಳಾಗಿದ್ದೆವೆ. ಇವರ ಪ್ರೋತ್ಸಾಹವು ಅಭಿನ೦ದನೀಯವಾಗಿದೆ.

No Comments

Leave A Comment