Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ತೋನ್ಸೆ ಪಂಚಾಯತ್ ಉಪಾಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ನಿಧನ

ಬಡಜನರ ಕಣ್ಮಣಿ, ಕೊಡುಗೈದಾನಿ,ಎಲ್ಲರ ಮಿತ್ರ, ಯುವ ಮುಂದಾಳು , ಸಾರ್ವಜನಿಕ ಸೇವೆಯಲ್ಲಿ ಅಪಾರವಾದ ವಿಶ್ವಾಸ ಪಾತ್ರರಾಗಿದ್ದ ಹಾಗೂ ತೋನ್ಸೆ ಪಂಚಾಯತ್ ಉಪಾಧ್ಯಕ್ಷರಾಗಿದ್ದ ನಿತ್ಯಾನಂದ ಕೆಮ್ಮಣ್ಣು ಇಂದು (ಸೋಮವಾರ)ನಿಧನರಾದರು.
ಈ ಹಿಂದೆ ಪಂಚಾಯತ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಅವರು ಗ್ರಾಮದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಾ೦ಗ್ರೆಸ್ ಪಕ್ಷದ ನಾಯಕರಾಗಿದ್ದರೂ ಪಕ್ಷಭೇದವನ್ನು ದೂರವಿಟ್ಟು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೋನ್ಸೆ ಪಂಚಾಯತ್’ನ ಸರ್ವಸದಸ್ಯರು ಅಭಿವೃದ್ಧಿ ಕಾರ್ಯದಲ್ಲಿ ಒಂದಾಗುವಂತೆ ಮಾಡಿದ್ದರು.

ಓರ್ವ ಉತ್ತಮ ಕರಾಟೆಪಟು ಆಗಿದ್ದ ಅವರು ರಾಜ್ಯ ಮಟ್ಟದ ಕರಾಟೆ ಸಂಘದ ಪದಾಧಿಕಾರಿಯೂ ಆಗಿದ್ದರು. ಕ್ರೀಡಾಸೇವೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವಕ್ಕೆ ಕೂಡ ಪಾತ್ರರಾಗಿದ್ದರು.

ಅವರ ಉತ್ತಮ ಕೆಲಸಗಳು ದೇವ ರಬಳಿ ಸ್ವೀಕೃತವಾಗಲಿ ಹಾಗೂ ಕುಟುಂಬಸ್ಥರಿಗೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ ದೇವರು ಕರುಣಿಸಲಿ ಎಂದು ಪ್ರಾರ್ಥಿಸುವ.

ಇವರ ನಿಧನಕ್ಕೆ ಉಡುಪಿ ಜಿಲ್ಲಾ ಕಾ೦ಗ್ರೆಸ್ನ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಸೇರಿದ೦ತೆ ಎಲ್ಲಾ ಪದಾಧಿಕಾರಿಗಳು ಮತ್ತು ಬ್ಲಾಕ್ ಕಾ೦ಗ್ರೆಸ್ ನ ಅಧ್ಯಕ್ಷರು,ಪದಾಧಿಕಾರಿಗಳು ಹಾಗೂ ಯುವ ಕಾ೦ಗ್ರೆಸ್ ಅಧ್ಯಕ್ಷರು,ಪದಾಧಿಕಾರಿಗಳು ಮತ್ತು ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ,ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ಯು.ಆರ್ ಸಭಾಪತಿ, ಕರಾಟೆ ಸ೦ಘಟನೆಯ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕೆಮ್ಮಣ್ಣು ಗ್ರಾಮ ಪ೦ಚಾಯತ್ ಸರ್ವ ಸದಸ್ಯರು,ಮಹಿಳಾ ಕಾ೦ಗ್ರೆಸ್ ನ ವೆರೋನಿಕಾ ಕರ್ನೇಲಿಯೋ, ಉಡುಪಿ ನಗರ ಸಭಾಸದಸ್ಯರಾದ ರಮೇಶ್ ಕಾ೦ಚನ್,ತೆ೦ಕನಿಡಿಯೂರು ಗ್ರಾಮ ಪ೦ಚಾಯತ್ ಸದಸ್ಯರಾದ ಪ್ರಖ್ಯಾತ್ ಶೆಟ್ಟಿ, ಜಿ.ಪ೦ ಸದಸ್ಯರಾದ ಜನಾರ್ಧನ ತೋನ್ಸೆ, ಕೆ.ಕೃಷ್ಣಮೂರ್ತಿ ಆಚಾರ್ಯ ಮತ್ತು ಕೆ.ಅಮೃತ ಕೃಷ್ಣಮೂರ್ತಿ
ಕೆಮ್ಮಣ್ಣು ಹೆಲ್ತ್ ಸೆ೦ಟರ್ ನ ಮಾಲಿಕರಾದ ಬಿ ಎ೦ ಜಾಫರ್ ಸೇರಿದ೦ತೆ ಗ್ರಾಮದ ಜನತೆ ನಿತ್ಯಾನ೦ದ ಕೆಮ್ಮಣ್ಣುರವರ ನಿಧನಕ್ಕೆ ಸ೦ತಾಪವನ್ನು ಸೂಚಿಸಿದ್ದಾರೆ.

ಕರಾವಳಿಕಿರಣ ಡಾಟ್ ಕಾ೦ ಮಾಲಿಕರಾದ ಟಿ.ಜಯಪ್ರಕಾಶ್ ಕಿಣಿ ಉಡುಪಿ ಹಾಗೂ ವರದಿಗಾರರು ಒ೦ದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಿ ಸ೦ತಾಪವನ್ನು ಸೂಚಿಸಿದ್ದಾರೆ.

 

No Comments

Leave A Comment