Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಮ೦ಡ್ಯ ಜಿಲ್ಲೆಯ ಹುಡುಗಿ ಈಗ ರಾಜ್ಯದ ಎಲ್ಲಾ ರೇಡಿಯೋ ಶೋತ್ರಗಳ ಅಭಿಮಾನಿ-ಇವರೇ ಭಾರತದ ನಂ.1 ರೇಡಿಯೊ ನೆಟ್‌ವರ್ಕ್‌ನ ( FM)ರೇಡಿಯೊ ಜಾಕಿಯಾಗಿ ಆರ್ ಜೆ ರಶ್ಮಿ

(ಕರಾವಳಿ ಕಿರಣ ಡಾಟ್ ಕಾ೦ನ ವಿಶೇಷ ಸ೦ದರ್ಶನ )

ಹೌದು ಪ್ರತಿಯೊಬ್ಬರಲ್ಲಿಯೂ ನಾನು ಒಬ್ಬ(ಒಬ್ಬಳು) ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಹೆಸರುಗಳಿಸಿ,ಉತ್ತಮ ಸಮಾಜ ಸೇವೆಯನ್ನು ಮಾಡಬೇಕೆ೦ಬ ಹ೦ಬಲವು ಎಲ್ಲರಲ್ಲಿಯೂ ಇರುವುದು ಸ್ವಾಭಾವಿಕವೇ ಸರಿ. ಅದರೆ ಆಯ್ಕೆ ನಮ್ಮ ನಮ್ಮದಾದರೂ ಕೊನೆಗೆ ತಲುಪುದು ಒ೦ದು ಉತ್ತಮ ಸೇವೆಗೆ ಎನ್ನಬೇಕಾಗುತ್ತದೆ ಎನ್ನುವುದಕ್ಕೆ ಇವರೊ೦ದು ಉತ್ತಮ ಉದಾಹರಣೆಯಾಗಿದ್ದಾರೆ. ಇವರೇ ನಮ್ಮ ಭಾರತದ ರೇಡಿಯೋ ನೆಟ್ ವರ್ಕ್ ನ ನ೦೧ ರೇಡಿಯೋ ಜಾಕಿಯಾಗಿ ರಾಜ್ಯದ ಎಲ್ಲಾ ರೇಡಿಯೋ ಶೋತ್ರುಗಳ ಪಕ್ಕಾ ಅಭಿಮಾನಿಯಾಗಿರುವ ಆರ್ ಜೆ ರಶ್ಮಿಯವರು.

ಮೂಲತಃ ಮಂಡ್ಯ ಜಿಲ್ಲೆ ಹುಡುಗಿ ಹುಟ್ಟಿದು ಬೆಂಗಳೂರಿನಲ್ಲಿ ತಮ್ಮ ತಂದೆಯವರು ಬೆ೦ಗಳೂರಿನಲ್ಲಿ ಟ್ರಾಫಿಕ್ ಪೊಲೀಸ್ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದರು ಇಲಾಖೆ ಎ೦ದ ಮೇಲೆ ವರ್ಗಾವಣೆ ಸಹಜ. ಅದರ೦ತೆ ಮಂಡ್ಯ ಜಿಲ್ಲೆ ಮದ್ದೂರಿಗೆ ವರ್ಗಾವಣೆಯಾದರು.ಅನಂತ ಶೆಟ್ಟಿ- ಯಶೋಧ ದ೦ಪತಿಗಳ ಎರಡನೇ ಮುದ್ದುಮಗವೇ ಎ೦ದರೆ ಇವರೇ ಪ್ರಸಿದ್ಧ ಭಾರತದ ರೇಡಿಯೋ ನೆಟ್ ವರ್ಕ್ ನ ನ೦೧ ರೇಡಿಯೋ ಜಾಕಿಯಾಗಿ ರಾಜ್ಯದ ಎಲ್ಲಾ ರೇಡಿಯೋ ಶೋತ್ರುಗಳ ಪಕ್ಕಾ ಅಭಿಮಾನಿಯಾಗಿರುವ ಆರ್ ಜೆ ರಶ್ಮಿ.

ಬಾಲ್ಯದಲ್ಲಿ ಇವರು ತಮ್ಮ ತಂದೆ ತಾಯಿ ಒಟ್ಟಿಗೆ ಮದ್ದೂರಿನಲ್ಲಿ ನೇಲ್ಸ್ ವಿದ್ಯಾಭ್ಯಾಸವನ್ನಮಾಡಿದರು. ನಂತರ
ಕಾಲೇಜು ವಿದ್ಯಾಭ್ಯಾಸವನ್ನು H K ವೀರಣ್ಣ ಗೌಡ ಮಂಡ್ಯ ಜಿಲ್ಲೆಯ ಕಾಲೇಜಿನಲ್ಲಿ ಮುಗಿಸಿ ಮನಶಾಸ್ತ್ರ ವಿಭಾಗದಲ್ಲಿ
MSC ಮಾಡಿರುತ್ತಾರೆ .

ತಂದೆ ಆಸೆಯಂತೆ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡುವ ಕೆಲಸ ಪ್ರಾರಂಭ ಮಾಡಲು ಶುರು ಮಾಡಿದರು. ಆದರೆ ಕರ್ತವ್ಯ ನಿರ್ವಹಿಸುತ್ತಿರುವಾಗ ಆಕಸ್ಮಿಕವಾಗಿ ತಂದೆಯವರ ರಸ್ತೆ ಅಪಘಾತದಲ್ಲಿ ತೀರಿಕೊ೦ಡರು. ಆಗ ಪ್ರಪಂಚನೇ ತಂದೆಯಾಗಿದೆ ರಶ್ಮಿ ಅವರಿಗೆ ಏನು ದಿಕ್ಕು ಕಾಣದೇ ಇದ್ದಾಗ ಮತ್ತೆ ನೆನಪಾಯಿತು ತಮ್ಮ ತಂದೆ ಅವರ ಮೇಲೆ ಇಟ್ಟಿದ ವಿಶ್ವಾಸ ನಂಬಿಕೆ ಮತ್ತೆ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಯಶಸ್ಸಿನಲ್ಲಿ ತಂದೆ ನೋಡ್ಬೇಕು ಅನ್ನೋ ಹ೦ಬಲತೆ.

ಅನ೦ತರ ತನ್ನ ಬಾಳಿನಲ್ಲಿ ಆರ್ ಜೆ ರಶ್ಮಿ ಮಾತಿನಲ್ಲಿ ಪ್ರೀತಿ ಹೊಸತನ ನಂಬಿಕೆ ಧೈರ್ಯ ಹೊಂದಿರುವ ವ್ಯಕ್ತಿ ಮತ್ತು ಜೀವನವನ್ನ ಬರುವ ರೀತಿಯಲ್ಲಿ ತೆಗೆದುಕೊಳ್ಳಿ ಅನ್ನೋ ಮನೋಭಾವದೊ೦ದಿಗೆ , ನೃತ್ಯ ಮಾಡುತ್ತ ನೃತ್ಯ ಸಂಯೋಜಕಿಯಾಗಿ 3 ವರ್ಷ ಕಾರ್ಯನಿರ್ವಹಿಸಿದ ರಶ್ಮಿ ಯವರು ೨೦೦೮ರಿ೦ದ ಪ್ರಸಿದ್ಧ zee ವಾಹಿನಿಯಲ್ಲಿ ಕುಣಿಯೋಣ ಬಾರಾ ಎ೦ಬ ಕಾರ್ಯಕ್ರಮದಿ೦ದ ಪ್ರಸಿದ್ಧಿಯನ್ನು ಸಾಕಷ್ಟು ವಾಹಿನಿಯಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದರು.ಮತ್ತೆ ಆಯ್ಕೆಯಿಂದ ನೃತ್ಯ ಸಂಯೋಜಕಿಯಾಗಿ ಹೆಚ್ಚು ಕಾಲ ಪ್ರಸಿದ್ಧಿ ಪಡೆದರು.

ಇದೀಗ ಭಾರತದ ನಂ 1 ರೇಡಿಯೊ ನೆಟ್‌ವರ್ಕ್‌ನಲ್ಲಿ ಮೈಸೂರಿನ ನಂಬರ್ 1ರೇಡಿಯೋ ಕೇ೦ದ್ರ(ಸ್ಟೇಷನ್) ಆಗಿರುವ ರೆಡ್ ಎಫ್ ಎಂ ನಲ್ಲೀ ರೇಡಿಯೊ ಜಾಕಿಯಾಗಿ ಆರ್ ಜೆ ರಶ್ಮಿ ಪ್ರತಿದಿನ ಮದ್ಯಾನ 2 ರಿಂದ 5 ಗಂಟೆ ವರಗೆ ಮಂಡ್ಯ ಹುಡುಗಿ ಮೈಸೂರ್ ಬೇಡಗಿ ಅನ್ನೋ ಹೆಸರಿನಲ್ಲಿ ಪ್ರಸಿದ್ದರಾಗಿದಾರೆ.

ಸುಮಾರು 350 ಕು ಹೆಚ್ಚು ಪ್ರಸಿದ್ಧ ನಟ ನಟಿಯರ ಸಂದರ್ಶನ ಮಾಡಿ ಪ್ರತಿ ದಿನ ಹೊಸ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ಕ್ಯಾಂಪಸ್ ನಲ್ಲಿ ರೆಡ್ ಟ್ಯಾಲೆಂಟ್ ಹಂಟ್ ಅನ್ನುವ ಕಾರ್ಯಕ್ರಮ ಮಾಡ್ತಿದಾರೆ,ಸಾಕಷ್ಟು ವಾಯ್ಸ್ ಓವರ್ ಗಳನ್ನ ಕೊಡುತ್ತಾ ತಮ್ಮ ಉತಮ್ಮ ಧ್ವನಿಯ ಮುಕಾಂತರ ಮ್ಯೂಸಿಕ್ ಅಡ್ಡ ಕಾರ್ಯಕ್ರಮ ದ ಮುಕಾಂತರ ಮನೆ ಮಾತಾಗಿದಾರೆ.

ಮಾಧ್ಯಮ ಕ್ಷೇತ್ರದಲ್ಲಿ ಪ್ರತಿಷ್ಠಿತ ರಾಜೋತ್ಸವ ಪ್ರಶಸ್ತಿಯನ್ನು 2017 ರಲ್ಲಿ ಬೆಂಗಳೂರಿನಲ್ಲಿ ನಡೆದ ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಕರ್ನಾಟಕ ವತಿಯಿಂದ ಪಡೆವರಾಗಿದ್ದಾರೆ. 50 ಸಾವಿರಕ್ಕೂ ಹೆಚ್ಚು ಜನ ಸೇರುವ ಮೈಸೂರಿನ ಯುವ ದಸರಾ ಕಾರ್ಯಕ್ರಮದ ನಿರೂಪಕಿ ಯಾಗಿ, ಮೈಸೂರು ಅರಮನೆ ಯಲ್ಲಿ ನಡೆದ ದಸರಾ ಮಹೋತ್ಸವ 2020 ಕ್ಕೂ ಕೂಡ ನಿರೂಪಕಿಯಾಗಿ ಆಯ್ಕೆ ಯಾದರು.2021 ರಾಜಕುಮಾರ್ ಪ್ರಶಸ್ತಿ ಹಾಗೂ ಮಹಿಳಾ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪನಿಯ ವಿಮೆನ್ ಅಚೀವ್ರ್ ಅವಾರ್ಡ್ ಗೆ ಆಯ್ಕೆಯಾಗಿ ಪ್ರಶಸ್ತಿಯನ್ನು ತನ್ನದಾಗಿಸಿಕೊ೦ಡರು.

ಮಂಡ್ಯದ ಮಗಳು ಆರ್ ಜೆ ರಶ್ಮಿ ಮೈಸೂರು ಮಾತ್ರವಲ್ಲದೇ ಇದೀಗ ರಾಜ್ಯದ ಕರಾವಳಿಯ ದಕ್ಷಿಣ ಕರ್ನಾಟಕದಲ್ಲೂ ಕಾರ್ಯಕ್ರಮ ನಡಿಸಿಕೊಡುತ್ತಿದ್ದಾರೆ.

ಆರ್ ಜೆ ರಶ್ಮಿಯವರ ಉದ್ದೇಶ ರಾಜ್ಯದಲಿನ ಎಲ್ಲಾ ಯುವ ಪ್ರತಿಭೆಗಳು ತಮ್ಮ ಕಲೆಯ ಮುಖಾ೦ತರ ತಮ್ಮನ್ನು ಗುರುತಿಸಿಕೊಳ್ಳಬೇಕು ಅವರ ಪ್ರತಿಭೆ ಮುಖಾ೦ತರ ಸಾಧನೆ ಮಾಡಬೇಕು, ಇಂಥ ಪ್ರತಿಭೆಗಳಿಗೆ ಗುರುತಿಸಿ ತಾವು ಅವರ ಬಾಳಿಗೆ (ಬದುಕುವ ಜೀವನಕ್ಕೆ)ಸೇತುವೆ ಆಗಬೇಕು ಎನ್ನುವುದೇ ಇವರ ಮಹತ್ತರದ ಅಸೆ.

ಕರಾವಳಿಯಲ್ಲಿನ ಇತಿಹಾಸ ಪ್ರಸಿದ್ಧ ಧಾರ್ಮಿಕ ಕೇ೦ದ್ರಗಳಲ್ಲಿ ಹೆಸರುವಾಸಿಯಾಗಿ ಧರ್ಮಾಧಿಕಾರಿಗಳಾದ ಡಾ. ಡಿ. ವಿರೇ೦ದ್ರ ಹೆಗ್ಡೆಯವರರಿ೦ದಲೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಮ್ಮ ಭಾರತದ ನಂ 1 ರೇಡಿಯೊ ನೆಟ್‌ವರ್ಕ್‌ನ (ಎಫ್ ಎಂ )ನಲ್ಲೀ ರೇಡಿಯೊ ಜಾಕಿಯಾಗಿ ಆರ್ ಜೆ ರಶ್ಮಿ ಯವರು.

ರಶ್ಮಿ ಯವರ ತ೦ದೆಯವರು ಆರ೦ಭದಲ್ಲಿ ಕೆಲಸ ವಿಲ್ಲದಾಗ ರಾಜಕುಮಾರ್ ಅವರ ಪ್ರೊಡಕ್ಷನ್ ಯೂನಿಟ್ ಸೆಟ್ ನಲ್ಲಿ ಕೆಲ್ಸ ಮಾಡ್ತಿದ್ರು
ರಶ್ಮಿ ಯವರು ತಮ್ಮ ಜೀವನದಲ್ಲಿ ಖ್ಯಾತ ಚಲನ ಚಿತ್ರಹಿರಿಯ ನಟ-ಕಿರಿಯ ನಟನಟಿಯರನ್ನು ತಾವೇ ಸ್ವತ: ಸ೦ದರ್ಶನವನ್ನು ನಡೆಸುವುದರೊ೦ದಿಗೆ ರಾಜ್ಯದ ಚಲನಚಿತ್ರ ಪ್ರೇಮಿಗಳಿಗೆ ನಟ-ನಟಿಯರನ್ನು ಪರಿಚಯಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಮಾತ್ರವಲ್ಲದೇ ದಕ್ಷಣ ಭಾರತ ಖ್ಯಾತ ಪ್ರವಾಸಿತಾಣವಾದ ಮೈಸೂರಿನ ರಾಜ ಮನೆತನದವರಲ್ಲಿ ಉತ್ತಮ ಒಡನಾಟವನ್ನು ಇಟ್ಟುಕೊ೦ಡ ಕೀರ್ತಿ ಇವರಿಗೆ ಸಲ್ಲುತ್ತದೆ.

ಇವರೇ ರೇಡಿಯೋ ಶೋತ್ರುಗಳ ನ೦ಬರ್ ೧ ಅಭಿಮಾನಿ,ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ವ್ಯಕ್ತಿ ನಿಮ್ಮ-ನಮ್ಮ  Super Hits 93.5 RED FM Mast Majaa Maadi-  ಆರ್ ಜೆ ರಶ್ಮಿ.

No Comments

Leave A Comment