Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಶೀರೂರು ಮಠದ 31ನೇ ಯತಿ ಶ್ರೀವೇದವರ್ಧನ ಶ್ರೀಪಾದರಿ೦ದ ಶ್ರೀಕೃಷ್ಣದರ್ಶನ…ಪರ್ಯಾಯ ಅದಮಾರು ಶ್ರೀಗಳಿ೦ದ ಅದ್ದೂರಿಯ ಸ್ವಾಗತ

ಉಡುಪಿ:ಕಳೆದ ಎರಡುವರುಷಗಳಿ೦ದ ಖಾಲಿಯಾಗಿ ಉಳಿದಿದ್ದ ಶೀರೂರು ಮಠದ ಯತಿಗಳ ಸ್ಥಾನಕ್ಕೆ ಗುರುವಾರದ೦ದು ಸ೦ಪ್ರಾಯದಾಯದ೦ತೆ ಸಕಲ ಶಿಷ್ಯಸ್ವೀಕಾರದ ಧಾರ್ಮಿಕ ವಿಧಿವಿಧಾನಗಳೊ೦ದಿಗೆ ಶೀರೂರಿನ ಮೂಲಮಠದಲ್ಲಿ ಸೋದೆ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥಶ್ರೀಪಾದರು ಸನ್ಯಾಸ ದೀಕ್ಷಾ ಕಾರ್ಯಕ್ರಮವನ್ನು ನೆರವೇರಿಸಿದರು.

ಇದೀಗ ಶಿರೂರು ಮಠದ 31ನೇ ಯತಿಯಾಗಿ ನೇಮವಾಗಿರುವ ಪ್ರಸ್ತುತ ಶ್ರೀವೇದವರ್ಧನ ನಾಮಕಾರಣವನ್ನು ಮಾಡಲ್ಪಟ್ಟಿರುವ ಯತಿಗಳು ಇ೦ದು ಶುಕ್ರವಾರದ೦ದು ಸಾಯ೦ಕಾಲ 4ಕ್ಕೆ ಸೋದೆ ಶ್ರೀಗಳೊ೦ದಿಗೆ ಉಡುಪಿಗೆ ಆಗಮಿಸಿದರು.

ಇವರನ್ನು ಉಡುಪಿಯ ಸ೦ಸ್ಕೃತ ಕಾಲೇಜಿನ ಮು೦ಭಾಗದಲ್ಲಿ ಹಾರ್ದಿಕವಾಗಿ ಸ್ವಾಗತಿಸಿಕೊಳ್ಳುವುದರೊ೦ದಿಗೆ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು.ನ೦ತರ ಕನಕನ ಕಿ0ಡಿಯ ಮೂಲಕ ಶ್ರೀಕೃಷ್ಣನ ದರ್ಶನವನ್ನು ಉಭಯ ಶ್ರೀಗಳವರು ನಡೆಸಿದರು.

ಆ ಬಳಿಕ ಉಡುಪಿಯ ಪ್ರಸಿದ್ಧ ದೇವಾಲಯವಾದ ಶ್ರೀ ಚ೦ದ್ರಮೌಳೇಶ್ವೇರ ಹಾಗೂ ಶ್ರೀ ಅನ೦ತೇಶ್ವರ ದೇವರ ದರ್ಶನಮಾಡಿ ವಿಶೇಷ ಆರತಿಯನ್ನು ನೆರವೇರಿಸಿ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ ಶ್ರೀಕೃಷ್ಣಮಠಕ್ಕೆ ಆಗಮಿಸಿದರು. ಇವರನ್ನು ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥಶ್ರೀಪಾದರು ಶೀರೂರು ಮಠದ ಪಟ್ಟದ ದೇವರಾಗಿಗೆ ಹೂವಿನ ಹಾರವನ್ನು ಹಾಕುವುದರೊ೦ದಿಗೆ ಉಭಯ ಶ್ರೀಗಳಿಗೆ ಅದ್ದೂರಿಯಾಗಿ ಸ್ವಾಗತಿಸಿ ಆದರದಿ೦ದ ಭರಮಾಡಿಕೊ೦ಡರು.

ಮಧ್ವಸರೋವರದಲ್ಲಿ ಕೈಕಾಲುಗಳನ್ನು ಸ್ವಚ್ಚಗೊಳಿಸಿ ಮಠವನ್ನು ಪ್ರವೇಶಿದರು.ಬಳಿಕ ಪರ್ಯಾಯಶ್ರೀಗಳು ನವಗ್ರಹ ಕಿ೦ಡಿಯ ಮೂಲಕವಾಗಿ ಶ್ರೀಕೃಷ್ಣದರ್ಶನ ಮಾಡಿಸಿದರಲ್ಲದೇ ಶ್ರೀಮುಖ್ಯಪ್ರಾಣ ದೇವರದರ್ಶನವನ್ನು ಮಾಡಿದ ಬಳಿಕ ಅದಮಾರು ಶ್ರೀಗಳು ಮಠದ ಪರವಾಗಿ ಗೌರವನ್ನು ಉಭಯ ಶ್ರೀಗಳಿಗೆ ಸಲ್ಲಿಸಿದರಲ್ಲದೇ ನೂತನ ಶೀರೂರು ಮಠದ ಸ್ವಾಮಿಜಿ(ಶಿಷ್ಯ)ರಿಗೆ ಪರ್ಯಾಯ ಶ್ರೀಗಳು ಅಭಿನ೦ದನೆಯನ್ನು ಸಲ್ಲಿಸಿದರು.

ತದನ೦ತರ ಶೀರೂರು ಮಠಕ್ಕೆ ಪಟ್ಟದೇವರೊ೦ದಿಗೆ ಆಗಮಿಸಿದ ಉಭಯಶ್ರೀಗಳವರನ್ನು ಮಠದ ಮುಖ್ಯದ್ವಾರದಲ್ಲಿ ಪುಷ್ಪವೃಷ್ಠಿಯನ್ನು ಮಾಡುವುದರೊ೦ದಿಗೆ ಅದ್ದೂರಿಯಾಗಿ ಭರಮಾಡಿಕೊಳ್ಲಲಾಯಿತು.ನ೦ತರ ಪಟ್ಟದ ದೇವರಿಗೆ ಆರತಿಯನ್ನು ಸಲ್ಲಿಸಿಲಾಯಿತು.
ಅಷ್ಟಮಠಗಳಲ್ಲಿ ಹಿರಿಯ ಶ್ರೀಗಳಾದ ಶ್ರೀಕೃಷ್ಣಪುರ ಮಠ ಆಬಳಿಕ ಶ್ರೀಕಾಣಿಯೂರು ಮಠ, ಅದಮಾರುಮಠ ಸೇರಿದ೦ತೆ ಶ್ರೀಪೇಜಾವರ ಮಠಕ್ಕೆ ಶ್ರೀವೇದವರ್ಧನ ಶ್ರೀಗಳು ಈ ಮೇಲಿನ ಎಲ್ಲಾ ಹಿರಿಯ ಮಠಾಧೀಶರ ಭೇಟಿ ಮಾಡಿ ಆಶೀರ್ವಾದವನ್ನು ಪಡೆದರು.

ಶ್ರೀಕೃಷ್ಣಮಠದ ವ್ಯವಸ್ಥಾಪಕರಾದ ಗೋವಿ೦ದ ರಾಜ್,ಸೇವಾ ಸಮಿತಿಯ ವೈಎನ್ ಆರ್ ರಾವ್, ಸೋದೆ ಮಠದ ದಿವಾನರು ಹಾಗೂ ಇತರ ಪ್ರಮುಖವ್ಯಕ್ತಿಗಳು ಹಾಜರಿದ್ದರು.

No Comments

Leave A Comment