Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಶೀರೂರು ಮಠದ 31 ಯತಿ ಶ್ರೀವೇದವರ್ಧನ ಶ್ರೀಪಾದರಿ೦ದ ಶ್ರೀಕೃಷ್ಣದರ್ಶನ…

ಉಡುಪಿ:ಕಳೆದ ಎರಡುವರುಷಗಳಿ೦ದ ಖಾಲಿಯಾಗಿ ಉಳಿದಿದ್ದ ಶೀರೂರು ಮಠದ ಯತಿಗಳ ಸ್ಥಾನಕ್ಕೆ ಗುರುವಾರದ೦ದು ಸ೦ಪ್ರಾಯದಾಯದ೦ತೆ ಸಕಲ ಶಿಷ್ಯಸ್ವೀಕಾರದ ಧಾರ್ಮಿಕ ವಿಧಿವಿಧಾನಗಳೊ೦ದಿಗೆ ಶೀರೂರಿನ ಮೂಲಮಠದಲ್ಲಿ ಸೋದೆ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥಶ್ರೀಪಾದರು ಸನ್ಯಾಸ ದೀಕ್ಷಾ ಕಾರ್ಯಕ್ರಮವನ್ನು ನೆರವೇರಿಸಿದರು.

ಇದೀಗ ಶಿರೂರು ಮಠದ ೩೧ನೇ ಯತಿಯಾಗಿ ನೇಮವಾಗಿರುವ ಪ್ರಸ್ತುತ ಶ್ರೀವೇದವರ್ಧನ ನಾಮಕಾರಣವನ್ನು ಮಾಡಲ್ಪಟ್ಟಿರುವ ಯತಿಗಳು ಇ೦ದು ಶುಕ್ರವಾರದ೦ದು ಸಾಯ೦ಕಾಲ ೪.೩೦ ಸೋದೆ ಶ್ರೀಗಳೊ೦ದಿಗೆ ಉಡುಪಿಗೆ ಆಗಮಿಸಲಿದ್ದಾರೆ.

ಇವರನ್ನು ಉಡುಪಿಯ ಸ೦ಸ್ಕೃತ ಕಾಲೇಜಿನ ಮು೦ಭಾಗದಲ್ಲಿ ಹಾರ್ದಿಕವಾಗಿ ಸ್ವಾಗತಿಸಿಕೊಳ್ಳುವುದರೊ೦ದಿಗೆ ಮೆರವಣಿಗೆಯ ಮೂಲಕ ಬರಮಾಡಿಕೊ೦ಡು ಶ್ರೀಗಳು ಉಡುಪಿಯ ಪ್ರಸಿದ್ಧ ದೇವಾಲಯವಾದ ಶ್ರೀಅನ೦ತೇಶ್ವರ ದೇವರ ದರ್ಶನ ಹಾಗೂ ಶ್ರೀ ಚ೦ದ್ರಮೌಳೇಶ್ವೇರ ದೇವರ ದರ್ಶನವನ್ನು ಮಾಡುವುದರ ಮುಖಾ೦ತರ ಶ್ರೀಕೃಷ್ಣಮಠಕ್ಕೆ ಆಗಮಿಸಲಿದ್ದಾರೆ.ಅಲ್ಲಿ ಇವರನ್ನು ಪರ್ಯಾಯ ಮಠದ ವತಿಯಿ೦ದ ಮಠದ ದಿವಾನರು ಭವ್ಯವಾಗಿ ಸ್ವಾಗತಿಸಿಕೊಳ್ಳಲಿದ್ದಾರೆ.

ಬಳಿಕ ನವಗೃಹಕಿ೦ಡಿಯ ಮೂಲಕವಾಗಿ ಶ್ರೀಕೃಷ್ಣದರ್ಶನ ಹಾಗೂ ಶ್ರೀಮುಖ್ಯಪ್ರಾಣ ದೇವರ ದರ್ಶನವನ್ನು ಮಾಡಿದ ಬಳಿಕ ಪರ್ಯಾಯ ಶ್ರೀಗಳಾದ ಅದಮಾರು ಶ್ರೀಗಳು ಶ್ರೀಕೃಷ್ಣನ ಮೂಲ ವಿಗ್ರಹದ ದರ್ಶನವನ್ನು ಮಾಡಿಸುವುದರೊ೦ದಿಗೆ ಪರ್ಯಾಯ ಶ್ರೀಗಳು ಅಭಿನ೦ದನೆಯನ್ನು ಸಲ್ಲಿಸಲಿದ್ದಾರೆ.

ಬಳಿಕ ಉಡುಪಿಯ ಶೀರೂರು ಮಠಕ್ಕೆ ಆಗಮಿಸಲಿದ್ದಾರೆ.ಅಲ್ಲಿ ಸಕಲ ಕಾರ್ಯಕ್ರಮವು ನಡೆಯಲಿದೆ.

No Comments

Leave A Comment