Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಶ್ರೀ ವೇದವರ್ಧನತೀರ್ಥ ಶೀರೂರು ಮಠದ ನೂತನ ಯತಿ

ಉಡುಪಿ: ಇಲ್ಲಿನ ಅಷ್ಟಮಠಗಳಲ್ಲೊಂದಾದ ಶೀರೂರು ಮಠದ 31ನೇ ಯತಿಯಾಗಿ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಶುಕ್ರವಾರ ನಿಯುಕ್ತಿಗೊಂಡರು.

ಅಕ್ಷಯ ತೃತಿಯಾ ಶುಭದಿನದಂದು ದ್ವಂದ್ವ ಮಠಾಧೀಶ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಶೀರೂರು ಮೂಲ ಮಠದಲ್ಲಿ ನೂತನ ಯತಿಗೆ ನಾಮಕರಣ ಮಾಡಿ, ಶೀರೂರು ಮಠದ ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕ ನಡೆಸಿದರು.

ಅದಕ್ಕೂ ಪೂರ್ವದಲ್ಲಿ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನಡೆದವು.

ಇಂದು ಮಧ್ಯಾಹ್ನ 12.35ರ ಸುಮುಹೂರ್ತದಲ್ಲಿ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಶಿರದಲ್ಲಿ ಶೀರೂರು ಮಠದ ಉಪಾಸ್ಯಮೂರ್ತಿ ಸಹಿತ ಸಾಲಿಗ್ರಾಮವನ್ನಿರಿಸಿಕೊಂಡಿದ್ದ ನೂತನ ಯತಿಗೆ ಪಟ್ಟಾಭಿಷೇಕ ಅಂಗವಾಗಿ ಅಭಿಷೇಕ ನಡೆಸಿದರು.

ಬಳಿಕ ನೂತನ ಯತಿಯ ನಾಮಧೇಯವನ್ನು ಘೋಷಿಸಿದರು.

No Comments

Leave A Comment