Log In
BREAKING NEWS >
ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಪರ್ಯಾಯ ಮಹೋತ್ಸವದ ಕಚೇರಿ ಉದ್ಘಾಟನೆ-ವಿವಿಧ ಸಮಿತಿಗಳ ಪಟ್ಟಿ ಪ್ರಕಟ...

ಮತ್ತೆ ತೈಲೋತ್ಪನ್ನಗಳ ಬೆಲೆ ಏರಿಕೆ: ದಾಖಲೆ ಮಟ್ಟದಲ್ಲಿ ಪೆಟ್ರೋಲ್, ಡೀಸೆಲ್ ದರ!

ನವದೆಹಲಿ: ದೇಶದಲ್ಲಿ ಮತ್ತೆ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ದಾಖಲೆ ಮಟ್ಟಕ್ಕೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ.

ಹೌದು ಶುಕ್ರವಾರ ಮತ್ತೆ ದೇಶದಲ್ಲಿ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ 28 ರಿಂದ 29 ಪೈಸೆ ಮತ್ತು ಡೀಸೆಲ್ ದರ 34-35 ಪೈಸೆಯಷ್ಟು ಏರಿಕೆಯಾಗಿದೆ. ಆ ಮೂಲಕ ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ದರ 100 ರೂ. ಗಡಿದಾಟಿದೆ. ಸುಮಾರು 18 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಸತತವಾಗಿ ನಾಲ್ಕನೇ ದಿನ ಪರಿಷ್ಕರಿಸಲಾಗಿತ್ತು. ನಂತರ ಎರಡು ದಿನಗಳಿಂದ ದರ ಸ್ಥಿರವಾಗಿತ್ತು. ಈಗ ಸತತವಾಗಿ ಮೂರನೇ ದಿನದಂದು ಮತ್ತೆ ಏರಿಕೆ ಮಾಡಲಾಗಿದೆ.

ಇಂದಿನ ದರ ಏರಿಕೆ ಬಳಿಕ ದೆಹಲಿಯಲ್ಲಿ ಪೆಟ್ರೋಲ್ 92.40 ರೂ. ಮತ್ತು ಡೀಸೆಲ್ 83.01ರೂ. ಗೆ ಏರಿಕೆಯಾಗಿದೆ. ಅಂತೆಯೇ ಕೋಲ್ಕತಾದಲ್ಲಿ ಪೆಟ್ರೋಲ್ 92.49 ರೂ., ಡೀಸೆಲ್ 85.85 ರೂ. ಗೆ ಏರಿಕೆಯಾಗಿದೆ. ಇನ್ನು ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ 98.70ರೂ, ಡೀಸೆಲ್ 90.17 ರೂ. ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ 94.15 ರೂ ಮತ್ತು ಡೀಸೆಲ್ 87.86 ರೂ. ಗೆ ಏರಿಕೆಯಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ 95.47 ರೂ. ಡೀಸೆಲ್ 87.99 ರೂ. ಗೆ ಏರಿಕೆಯಾಗಿದೆ. ಅಂತೆಯೇ ಹೈದರಾಬಾದ್ ನಲ್ಲಿ ಪೆಟ್ರೋಲ್ 96.04 ರೂ. ಡೀಸೆಲ್ 90.49 ರೂ. ಗೆ ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕೊಂಚ ಏರಿಕೆ ಕಂಡಿದ್ದು, ಪ್ರತಿ ಬ್ಯಾರೆಲ್‌ ನ ದರ 68.78 ಅಮೆರಿಕ ಡಾಲರ್ ನಷ್ಟಿದೆ.

No Comments

Leave A Comment