Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

IPL 2021: ಐಪಿಎಲ್‌ನ ಉಳಿದ ಪಂದ್ಯಗಳನ್ನು ಭಾರತದಲ್ಲೇ ನಡೆಸಬಹುದು!

ನವದೆಹಲಿ: ಐಪಿಎಲ್ 2021ರ ಬಯೋ ಬಬಲ್‌ನಲ್ಲಿ ಕೊರೊನಾವೈರಸ್ ಪ್ರವೇಶಿಸಿದ ನಂತರ ಪಂದ್ಯಾವಳಿಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಯಿತು. ಈ ಮೆಗಾ ಟಿ 20 ಲೀಗ್‌ನ 14 ನೇ ಋತುವಿನ ಉಳಿದ ಪಂದ್ಯಗಳು ಶೀಘ್ರದಲ್ಲೇ ನಡೆಯಲಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಆಶಿಸುತ್ತಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದು ಸಾಧ್ಯವೆಂದು ತೋರುತ್ತಿಲ್ಲ. ಅದಾಗ್ಯೂ, ಈ ಲೀಗ್‌ನ ಉಳಿದ ಪಂದ್ಯಗಳನ್ನು ಭಾರತದಲ್ಲಿಯೂ ಆಡಬಹುದು ಎಂದು ತಿಳಿದುಬಂದಿದೆ.

ಐಪಿಎಲ್‌ನ ಉಳಿದ ಪಂದ್ಯಗಳನ್ನು ಭಾರತದಲ್ಲಿ ನಡೆಸಬಹುದು!
‘ರೆಡಿಫ್ ಡಾಟ್ ಕಾಮ್’ ಜೊತೆ ಮಾತನಾಡಿದ ಬಿಸಿಸಿಐ (BCCI) ಮಾಜಿ ಕಾರ್ಯದರ್ಶಿ ನಿರಂಜನ್ ಷಾ, ‘ಐಪಿಎಲ್ 2021 ರ ಉಳಿದ 31 ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐಗೆ 30 ದಿನಗಳ ವಿಂಡೋ ಅಗತ್ಯವಿದೆ. ಇದಕ್ಕಾಗಿ ಮಂಡಳಿಯು ದೇಶೀಯ ಕ್ರಿಕೆಟ್‌ನಲ್ಲಿ ಐಪಿಎಲ್ 2021 ಗೆ ಅವಕಾಶ ಕಲ್ಪಿಸಬಹುದು. ಈ ವರ್ಷ ನಾವು ಅಲ್ಪಾವಧಿಯಲ್ಲಿಯೇ ದೇಶೀಯ ಪಂದ್ಯಾವಳಿಗಳನ್ನು ಪ್ರಾರಂಭಿಸಿದರೆ ಐಪಿಎಲ್ ಅನ್ನು ಪೂರ್ಣವಾಗಿ ಆಯೋಜಿಸುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

No Comments

Leave A Comment