Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

OxyBus service : ಕೊರೋನಾ ತುರ್ತು ಚಿಕಿತ್ಸೆಗಾಗಿ ‘ಆಕ್ಸಿಬಸ್’ಗೆ ಚಾಲನೆ ನೀಡಿದ ಸಿಎಂ ಬಿಎಸ್‌ವೈ!

ಬೆಂಗಳೂರು : ತುರ್ತು ಸಂದರ್ಭಗಳಲ್ಲಿ ಕೊರೋನಾ ರೋಗಿಗಳ ಚಿಕಿತ್ಸೆಗಾಗಿ ‘ಆಕ್ಸಿಬಸ್’ ಸೇವೆಗೆ ಸಿಎಂ ಬಿಎಸ್ ಯಡಿಯೂರಪ್ಪ  ಚಾಲನೆ ನೀಡಿದ್ದಾರೆ.

‘ಆಕ್ಸಿಬಸ್’ (OxyBus service)ಗೆ ಚಾಲನೆ ನೀಡಿದ ನಂತರ ಮಾತನಾಡಿದ ಸಿಎಂ ಯಡಿಯೂರಪ್ಪ, ತಾತ್ಕಾಲಿಕವಾಗಿ ಆಕ್ಸಿಬಸ್ ಗಳು 8 ರೋಗಿಗಳಿಗೆ ನೆರವಾಗಲಿದೆ. ಅಂತಹ 20 ಬಸ್ ಗಳನ್ನು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳು ಮತ್ತು ಚಿಕಿತ್ಸಾ ಕೇಂದ್ರಗಳ ಬಳಿ ಇರಿಸಲಾಗುವುದು ಅಲ್ಲದೆ ರಾಜ್ಯದಾದ್ಯಂತ ಹೆಚ್ಚಿನ ಸಂಖ್ಯೆಯ ಬಸ್ ಗಳನ್ನು ಇರಿಸಲಾಗುವುದು ಎಂದು ಹೇಳಿದ್ದಾರೆ.

ಗಂಭೀರ ರೋಗಲಕ್ಷಣಗಳಿರುವ ರೋಗಿಗಳಿಗೆ ಚಿಕಿತ್ಸೆ ಪಡೆಯಲು ದಾರಿ ಮಾಡಿಕೊಡಿ ಅನಗತ್ಯವಾಗಿ ಆಸ್ಪತ್ರೆಗಳಲ್ಲಿ ಉಳಿದುಕೊಳ್ಳಬೇಡಿ ಕೋವಿಡ್ ರೋಗಿಗಳು ಮನೆಗೆ ಹೋಗಿ ಎಂದು ಸಿಎಂ(BS Yediyurappa) ಮನವಿ ಮಾಡಿದ್ದಾರೆ.

No Comments

Leave A Comment