Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಸಿಲಿಕಾನ್ ಸಿಟಿ ಪೋಲೀಸ್ ಕಾರ್ಯಾಚರಣೆ: ರೌಡಿಶೀಟರ್ ಸೂರ್ಯ ಕಾಲಿಗೆ ಗುಂಡಿಟ್ಟು ಸೆರೆ

ಬೆಂಗಳೂರು: ಹಲವು ಪ್ರಕರಣಗಳಲ್ಲಿ ಪೋಲೀಸರಿಗೆ ಬೇಕಾಗಿದ್ದ ರೌಡಿಶೀಟರ್ ಸೂರ್ಯನ ಕಾಲಿಗೆ ಗುಂಡಿಟ್ಟು ಬಂಧಿಸಿರುವ ಘಟನೆ ಬೆಂಗಳೂರಿನ ಹೆಚ್.ಆರ್.ಬಿ.ಆರ್. ಲೇಔಟ್ ನಲ್ಲಿ ನಡೆದಿದೆ.

2015ರ ರಾಮಮೂರ್ತಿ ನಗರದ ಕೊಲೆ ಪ್ರಕರಣ, 2016ರ ಕೊಲೆ, ಕೆಜಿ ಹಳ್ಳಿ ಠಾಣೆಯಲ್ಲಿ ಎರಡು ಕೇಸ್ ಸೇರಿ ಹಲವು ಪ್ರಕರಣಗಳು ಸೂರ್ಯ ವಿರುದ್ಧ ದಾಖಲಾಗಿದ್ದವು.

ಹೆಚ್.ಆರ್.ಬಿ.ಆರ್. ಲೇಔಟ್ ನ ಎರಡನೇ ಕ್ರಾಸ್ ನಲ್ಲಿ ರಾತ್ರಿ ಸುಮಾರು 12.40ರ ವೇಳೆ ಆರೋಪಿಯನ್ನು ಬಂಧಿಸಲು ಹೋಗಿದ್ದಾಗ ಸಿಸಿಬಿ ಹೆಡ್ ಕಾನ್ಸ್ಟೇಬಲ್  ಹನುಮಂತ್ ಅವರ ಮೇಲೆ ಸೂರ್ಯ ಹಲ್ಲೆಗೆ ಮುಂಡಾಗಿದ್ದಾನೆ. ಆ ಸಮಯ ಸಿಸಿಬಿ ಎಸಿಬಿಯಾಗಿದ್ದ ಪರಮೇಶ್ವರ್ ಸೂರ್ಯ ಕಾಲಿಗೆ ಗುಂಡು ಹಾರಿಸಿದ್ದಾರೆ.

ಸಧ್ಯ ಆರೋಪಿಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

No Comments

Leave A Comment