Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಮೇ 19ಕ್ಕೆ ತರುಣ್ ತೇಜ್‌ಪಾಲ್ ವಿರುದ್ಧದ ಅತ್ಯಾಚಾರ ಪ್ರಕರಣ ತೀರ್ಪು ಪ್ರಕಟ: ಗೋವಾ ಕೋರ್ಟ್

ಪಣಜಿ: ಮಾಜಿ ತೆಹಲ್ಕಾ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ವಿರುದ್ಧ ದಾಖಲಾಗಿರುವ ಮಹಿಳಾ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ  ಪ್ರಕರಣದ ತೀರ್ಪನ್ನು ಮೇ 19 ರಂದು ಪ್ರಕಟಿಸುವುದಾಗಿ ಗೋವಾದ ಸೆಷನ್ಸ್ ನ್ಯಾಯಾಲಯ ಬುಧವಾರ ತಿಳಿಸಿದೆ.

2013 ರಲ್ಲಿ ಗೋವಾದ ಐಷಾರಾಮಿ ಹೋಟೆಲ್‌ನ ಲಿಫ್ಟ್‌ನೊಳಗೆ ಮಹಿಳಾ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ತರುಣ್ ತೇಜ್‌ಪಾಲ್ ಅವರ ಮೇಲಿದೆ.

ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಏಪ್ರಿಲ್ 27 ರಂದು ತೀರ್ಪು ಪ್ರಕಟಿಸಬೇಕಿತ್ತು ಆದರೆ ನ್ಯಾಯಾಧೀಶರಾದ ಶ ಕ್ಷಮಾ ಜೋಶಿ ತೀರ್ಪನ್ನು ಮೇ 12 ಕ್ಕೆ ಮುಂದೂಡಿದ್ದರು. ಕೊರೋನಾವೈರಸ್ ಸಾಂಕ್ರಾಮಿಕದಿಂದಾಗಿ  ಸಿಬ್ಬಂದಿ ಕೊರತೆಯಿಂದಾಗಿ ಇತ್ತೀಚಿನ ಮುಂದೂಡಿಕೆ ಆಗಿದೆ ಎಂದು  ನ್ಯಾಯಾಲಯ ಬುಧವಾರ ತಿಳಿಸಿದೆ. ನ್ಯಾಯಾಲಯವು ಕೇವಲ 15 ಶೇಕಡಾ ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ಹೇಲಿದೆ.

ಗೋವಾ ಪೊಲೀಸರು 2013 ರ ನವೆಂಬರ್‌ನಲ್ಲಿ ತೇಜ್‌ಪಾಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಅವರನ್ನು ಬಂಧಿಸಲಾಗಿತ್ತು. ಆದರೆ ಜಾಮೀನು ಪಡೆದಿದ್ದ ತೇಜ್‌ಪಾಲ್ ಮೇ 2014 ರಿಂದ ಜೈಲಿನಿಂದ ಹೊರಗಿದ್ದಾರೆ. ಗೋವಾ ಅಪರಾಧ ವಿಭಾಗವು ತೇಜ್‌ಪಾಲ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು. ಐಪಿಸಿ ಸೆಕ್ಷನ್ 341, 342, 354, 354-ಎ, , 354-ಬಿ, 376 (2) (ಎಫ್), 376 (2) ಕೆ) ವಿಭಾಗಗಳಡಿ ಪ್ರಕರಣ ದಾಖಲಾಗಿದೆ.

ಈ ಹಿಂದೆ ತೇಜ್‌ಪಾಲ್ ಬಾಂಬೆ ಹೈಕೋರ್ಟ್‌ಗೆ ಮೊರೆ ಹೋಗಿದ್ದು ಅವರ ವಿರುದ್ಧದ ಆರೋಪಕ್ಕೆ ತಡೆ ಕೋರಿದ್ದರು.  ಆದರೆ ಬಾಂಬೆ ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು.

No Comments

Leave A Comment