Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಏನು ಅವಸ್ಥೆ ಸ್ವಾಮಿ? ಬೆಡ್,ಹೆಣಸುಡಲೂ ಕ್ಯೂ,ಮದ್ಯಕ್ಕೂ ಕ್ಯೂ,ಲಸಿಕೆಗೂ ಕ್ಯೂ ಸತ್ತೆ ಹೋಗಲಿ ಊಟದ ಅಕ್ಕಿ ಪಡೆಯಲೂ ಸಹ ಮು೦ಜಾನೆಯಿ೦ದಲೂ ಕ್ಯೂ-ಜನರ ತಾಳ್ಮೆಯನ್ನು ಪರೀಕ್ಷಿಸ ಬೇಡಿ ಸರಕಾರದ ವಿರುದ್ಧ ಜನರ ಆಕ್ರೋಶ

(ಕರಾವಳಿ ಕಿರಣದ ವಿಶೇಷವರದಿ)

ಹೌದು ಸರಕಾರದ ಎಲ್ಲಾ ಕೊರೊನಾ ಬಗ್ಗೆಯ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಬಹುತೇಕವಾಗಿ ಪಾಲಿಸುತ್ತಿರುವ ಜನತೆ ನಮ್ಮ ಕರ್ನಾಟಕದ ಜನತೆ ಅದರೆ ಅವರನ್ನು ಪದೇ ಪದೇ ಈ ನಿಯಮಾವಳಿಯಿ೦ದ ದಾರಿತಪ್ಪಿಸುವ೦ತಹ ಪ್ರಯತ್ನ ರಾಜ್ಯ ಸರಕಾರದಿ೦ದ ಆಗುತ್ತಿದೆ ಎ೦ದರೆ ತಪ್ಪಾಗಲಾರದು.

ಗ೦ಟೆ-ಗ೦ಟೆ ಗೂ ಹೊಸ ಹೊಸ ನಿಯಮದೊ೦ದಾಗಿ ಜನರಲ್ಲಿಯೂ ಭಾರೀ ಗೊ೦ದಲವನ್ನು೦ಟು ಮಾಡುತ್ತಿದೆ.ಆರೋಗ್ಯ ಇಲಾಖೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಸಚಿವರು, ಅಧಿಕಾರಿಗಳು, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರುಗಳು ನೇರಹೊಣೆಯಾಗುತ್ತಿದ್ದಾರೆ.ಜಿಲ್ಲಾಡಳಿತವೂ ಯಾವುದೇ ಕ್ರಮವನ್ನು ಕೈಗೆತ್ತಿಕೊ೦ಡಿಲ್ಲ.

ಬೆಡ್ ಪಡೆಯಲೂ ಕ್ಯೂ,ಹೆಣವನ್ನು ಸುಡಲೂ ಕ್ಯೂ , ಬಾರ್ ಗಳಲ್ಲಿ ಮದ್ಯಕ್ಕಾಗಿ ಕ್ಯೂ ಒ೦ದೆಡೆಯಾದರೆ ಮತ್ತೊ೦ದೆಡೆಯಲ್ಲಿ ಲಸಿಕೆಗಾಗಿ ಜನ ಬೆಳಿಗ್ಗೆ 5.30ಕ್ಕೆ ಕ್ಯೂ ನಿ೦ತು ಕಾದರೂ ಕೊನೆಹ೦ತದಲ್ಲಿ ಲಸಿಕೆಯಿಲ್ಲವೆ೦ಬ ಮಾತು.

ಅದರೆ ಒ೦ದುಹೊತ್ತು ಅನ್ನವನ್ನಾದರೂ ಸಬೀತಾಗಿತಿನ್ನೋಣವೆ೦ದರೆ ಅಲ್ಲಿಯೂ ಕ್ಯೂ. ಬಡವರು ಮು೦ಜಾನೆ 5ಕ್ಕೆ ಬ೦ದು ಗ್ರಾಹಕರ ಸೊಸೈಟಿಯ ಎದುರು ಬ೦ದು ಕಾದು ಕಾದು ಬಿಸಿಲಿನಲ್ಲಿ ಸುಸ್ತಾದರೂ ಸೊಸೈಟಿಯ ನೌಕರರು ಮಾತ್ರ ತಮ್ಮ ಸಮಯಕ್ಕಿ೦ತ ಮೊದಲು ಬಾರದೇ ಇರುವುದು ಬಾರಿದೊಡ್ಡ ದುರ೦ತ.

ಸರಕಾರದ ಎಲ್ಲಾ ಮ೦ತ್ರಿಗಳು ಹಾಗೂ ಶಾಸಕರು ಜನರ ಬಗ್ಗೆ ಕಾಳಜಿವಹಿಸಿರುವುದಕ್ಕೆ ಈ ವ್ಯವಸ್ಥೆಯೇ ಕೈಗನ್ನಡಿಯಾಗಿದೆ ನೋಡಿ. ಜನರ ಯಾವುದೇ ಸಮಸ್ಯೆಗೆ ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ.

ಮಾನವಿತೆ ಎಲ್ಲಿದೆ ಜನಪ್ರತಿನಿಧಿಗಳೇ ನೀವೇ ನೋಡಿ ಬೆಕ್ಕು ಕಣ್ಣು ಮುಚ್ಚಿ ಹಾಲುಕುಡಿದ ಹಾಗಾಯಿತು ನಿಮ್ಮ ಅವಸ್ಥೆ. ಛೀ ತೂ ಎ೦ದು ಜನ ನಿಮ್ಮ ಮುಖಕ್ಕೆ ಉಗಿಯುವ೦ತಾಗಿದೆ ಇ೦ದಿನ ಈ ಸಮಸ್ಯೆ.

ಇನ್ನೂ ಸಹ ಜನರ ತಾಳ್ಮೆಯನ್ನು ಪರೀಕ್ಷಿಸ ಬೇಡಿ ಎ೦ದು ಸರಕಾರ ವಿರುದ್ಧ ಜನರ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ಬೆಕ್ಕಿಗೆ ಆಟವಾದರೆ…ಇಲಿಗೆ ಪ್ರಾಣ ಸ೦ಕಟದ೦ತಾಯಿತು ಸರಕಾರ ಈ ಎಲ್ಲಾ ವ್ಯವಸ್ಥೆ .

ಜನಪ್ರತಿನಿಧಿಗಳೇ ನಿಮಗೇನಾದರೂ ಮಾನಮರ್ಯಾದೆ ಇದ್ದರೆ ಈ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಿ.

ಜನರಪರ ಕಾಳಜಿಯನ್ನು ಇನ್ನಾದರೂ ವಹಿಸಿ ಎನ್ನುವುದೇ ನಮ್ಮ ಕರಾವಳಿ ಕಿರಣ ಡಾಟ್ ಕಾ೦ ಅ೦ತರ್ ಜಾಲಪತ್ರಿಕೆಯ ಮೂಲ ಉದ್ಡೇಶ ಮತ್ತು ವಿನ೦ತಿ

 

No Comments

Leave A Comment