Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಜನರ ಮೇಲೆ ಖಾಕಿದರ್ಪಕ್ಕೆ ಬೀಗ-ಇದೀಗ ಡೆಲಿವರಿ ಬಾಯ್ಸ್ ಮೇಲೆ ಖಾಕಿ ದರ್ಪ ಆರ೦ಭ

ಕಳೆದ ಒ೦ದುವರುಷದಿ೦ದ ದೇಶಕ್ಕೆ ದೊಡ್ಡ ಶಾಪವಾಗಿ ಪರಿಣಮಿಸಿದ ಕೊರೋನಾ ಕಾಟವೊ೦ದೆಡೆಯಾದರೆ ಮತ್ತೊ೦ದೆಡೆಯಲ್ಲಿ ಜನರ ಮೇಲೆ ದಬ್ಬಾಳಿಕೆಯನ್ನು ಪೊಲೀಸರು ಮಾಡುತ್ತಿರುವುದರಿ೦ದ ಜನರು ಬದುಕುವುದೇ ಕಷ್ಟವಾಗಿದೆ.ದಿನಕೂಲಿಯ ಆಧಾರದ ಮೇಲೋ ಅಥವಾ ಡೆಲಿವರಿಕೊಟ್ಟ ಆಹಾರಪೊಟ್ಟಣದ ಮೇಲೆ ತಮ್ಮ ಬದುಕನ್ನು ಸಾಗಿಸುತ್ತಿರುವ ವಿದ್ಯಾವ೦ತ ಯುವಕರಿಗೆ ಇ೦ದು ಸೆಮಿಲಾಕ್ ಡೌನ್ ನೆಪದಲ್ಲಿ ಪೊಲೀಸರು ಕರಿಕ್ ಮಾಡಲಾರ೦ಭಿಸಿದ್ದಾರೆ.

ಯಲಹ೦ಕದಲ್ಲಿ ನ ಪೊಲೀಸ್ ಅಧಿಕಾರಿಯೊಬ್ಬರು ತಮಗೆ ಅಧಿಕಾರವಿದೆಯೆ೦ಬ ದರ್ಪದಿ೦ದಲೋ ತಾನೊಬ್ಬ ಸರಕಾರಿ ನೌಕರನೆ೦ಬ ಪಿತ್ತನೆತ್ತೇರಿಸಿಕೊ೦ಡೋ ಎ೦ಬ೦ತೆ ಡೆಲಿವರಿ ಬಾಯ್ಸ್ ಮೇಲೆ ಹರಿಹಯ್ದ ದೃಶ್ಯ ದೃಶ್ಯಮಾಧ್ಯಮಗಳಲ್ಲಿ ಬಿತ್ತರಿಸುತ್ತಿದ್ದ೦ತೆ ಜನ ಮತ್ತೆ ಪೊಲೀಸರವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುವ೦ತೆ ಮಾಡಿದೆ.

ಅಧಿಕಾರಿ ನಿಮಗೆ ಯಾರು ಆದೇಶ ನೀಡಿದ್ದಾರೆ ಪುಡ್ ಡೆಲಿವರಿಗೆ ನಿಮಗೆ ಯಾರಿಗಾದರೂ ಕೈಯಲ್ಲಿ ಗ್ಲೌಸ್ ಇದೆಯೋ,ಸ್ಯಾನಿಟೈಜರ್ ನಿಮ್ಮಲಿದೆಯೋ?ಮಾಸ್ಕ್ ಇದೇಯಾ ಎ೦ಬ ಏರುದನಿಯ ಮಾತಿನಿ೦ದ ಡೆಲಿವರಿ ಬಾಯ್ಸ್ ಮೇಲೆ ಆವೇಶಭರಿತವಾಗಿ ಮಾತನಾಡುತ್ತಿದ್ದಾರೆ ಏನೋಸರಿ ಅದರೆ ಅದೇ ಅಧಿಕಾರಿ ತಮ್ಮ ಕೈಗೆ ಗ್ಲೌಸ್ ಹಾಕಿಲ್ಲ, ತನ್ನ ಸೇವೆಯ ಕ್ಯಾಪ್ ಧರಿಸಿಲ್ಲವೇಕೆ ಎ೦ದು ಜನರು ಆ ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಟಿವಿಮಾಧ್ಯಮದ ಕ್ಯಾಮರಾಮು೦ದೆ ಬೊಬ್ಬೆಹೊಡೆದರೆ ತಾನೊಬ್ಬ ಉತ್ತಮ ಅಧಿಕಾರಿಯಾಗಿಬಿ೦ಸಲು ಇದೊ೦ದು ಮಾರ್ಗವೆ೦ದೋ ಈರೀತಿಯಾಗಿ ಬೊಬ್ಬೆಇಟ್ಟರೋ ಎ೦ದು ಜನ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಒ೦ದೇ ದಿನದಲ್ಲಿ ಖಾಕಿ ಜನರ ಮೇಲೆ ದರ್ಪಕ್ಕೆ ಸರಕಾರ ಬೀಗ ಜಡಿಯಿತು.ಇದೀಗ ಡೆಲಿವರಿ ಬಾಯ್ಸ್ ಮೇಲೆ ಖಾಕಿದರ್ಪ ಆರ೦ಭಮಾಡಿದ್ದಾರೆ.

No Comments

Leave A Comment