Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

18 ವರ್ಷ ಮೇಲ್ಪಟ್ಟವರಿಗೆ ಇಂದಿನಿಂದ ಕೊರೋನಾ ಲಸಿಕೆ: ಎಸ್ಎಂಎಸ್ ಸಂದೇಸವನ್ನೇ ಪಾಸ್ ಆಗಿ ಬಳಸಲು ರಾಜ್ಯ ಸರ್ಕಾರ ಅವಕಾಶ!

ಬೆಂಗಳೂರು: ಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ತೆರಳುವ 18 ವರ್ಷ ಮೇಲ್ಪಟ್ಟವರ ಬಳಿ ಲಸಿಕೆ ಪಡೆಯುವ ಸಮಯ ನಿಗದಿಯಾಗಿರುವ ಎಸ್ಎಂಎಸ್ ಇರುವುಡು ಕಡ್ಡಾಯವಾಗಿದೆ. ಈ ಎಸ್ಎಂಎಸ್’ನ್ನು ಪರಿಶೀಲಿಸಿದ ಬಳಿಕವಷ್ಟೇ ಪೊಲೀಸರು ಲಸಿಕಾ ಕೇಂದ್ರಕ್ಕೆ ತೆರಳಲು ಅನುಮತಿ ನೀಡಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ.

ಸೋಮವಾರದಿಂದ ರಾಜ್ಯದಲ್ಲಿ ಸೆಮಿ ಲಾಕ್ಡೌನ್ ಜಾರಿಯಾಗಿದ್ದು, ಅನಾವಶ್ಯಕವಾಗಿ ಜನರು ವಾಹನಗಳಲ್ಲಿ ತಿರುಗಾಡುವಂತಿಲ್ಲ. ಆದರೆ, ಲಸಿಕಾ ಕೇಂದ್ರಗಳಿಗೆ ಹೋಗಿ ಲಸಿಕೆ ಪಡೆಯುವವರಿಗೆ ಈ ನಿಯಮದಿಂದ ಅಡ್ಡಿಯಾಗಬಾರದು ಎಂದು ಸರ್ಕಾರ ಲಸಿಕೆಯ ಸಂದೇಶವನ್ನೇ ಪಾಸ್ ರೀತಿ ಬಳಸಲು ಅವಕಾಶ ನೀಡಿದೆ.

18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ಆನ್’ಲೈನ್ ನಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಆ ಬಳಿಕ ಲಸಿಕೆ ಪಡೆಯುವ ಸಮಯವನ್ನು ಖಾತರಿಪಡಿಸಿ ಫಲಾನುಭವಿಗೆ ಸಂದೇಶ ಬರುತ್ತದೆ. ಈ ಸಂದೇಶವನ್ನು ಪೊಲೀಸರಿಗೆ ತೋರಿಸಿ ಲಸಿಕಾ ಕೇಂದ್ರಗಳಿಗೆ ತೆರಳಬಹುದಾಗಿದೆ.

No Comments

Leave A Comment