Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಕೇರಳ: ಮಾತೃಭೂಮಿ ನ್ಯೂಸ್ ಚಾನೆಲ್ ವರದಿಗಾರ ವಿಪಿನ್ ಚಂದ್ ಕೋವಿಡ್ ಗೆ ಬಲಿ

ಕೊಚ್ಚಿ: ಕೇರಳದ ಕೊಚ್ಚಿ ಮೂಲದ ಪತ್ರಕರ್ತರೊಬ್ಬರು ಕೋವಿಡ್-19 ಸಾಂಕ್ರಾಮಿಕದಿಂದ ಸಾವನ್ನಪ್ಪಿದ್ದು, ಪತ್ರಕರ್ತರನ್ನು
ಮುಂಚೂಣಿ ಸೇನಾನಿಗಳಾಗಿ ಘೋಷಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಮಲಯಾಳಂ ನ್ಯೂಸ್ ಚಾನೆಲ್ ಮಾತೃಭೂಮಿ ನ್ಯೂಸ್ ಹಿರಿಯ ಮುಖ್ಯ ವರದಿಗಾರ ವಿಪಿನ್ ಚಂದ್ (41) ಶನಿವಾರ
ಕೋವಿಡ್-19 ರೋಗಗಳಿಂದ ಮೃತಪಟ್ಟಿದ್ದಾರೆ.

ನ್ಯೂಮೋನಿಯ ಬಂದ ನಂತರ ವಿಪಿನ್ ಆರೋಗ್ಯ ಕ್ಷಿಣಿಸಿತ್ತು, ನಂತರ ಕೊಚ್ಚಿಯಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ
ದಾಖಲಾಗಿದ್ದರು. ಆದರೆ ಭಾನುವಾರ ಹಠಾತ್ತನೆ ಹೃದಯಾಘಾತ ಕಾಣಿಸಿಕೊಂಡು ಮೃತಪಟ್ಟಿದ್ದಾರೆ ಎಂದು
ವೈದ್ಯರು ಹೇಳಿದ್ದಾರೆ.

ವಿಪಿನ್ ಚಂದ್ 2005ರಲ್ಲಿ ಇಂಡಿಯಾ ವಿಷನ್ ಟಿವಿ ಚಾನೆಲ್ ಮೂಲಕ ವೃತ್ತಿ ಆರಂಭಿಸಿದ್ದರು. 2012ರಲ್ಲಿ ಮಾತೃಭೂಮಿಗೆ
ಸೇರಿಕೊಂಡಿದ್ದರು. ಅವರು ಪತ್ನಿ ಶ್ರೀದೇವಿ ಮತ್ತು ಪುತ್ರ ಮಹೇಶ್ವರ್ ಅವರನ್ನು ಅಗಲಿದ್ದಾರೆ.

ವಿವಿಧ ಸುದ್ದಿ ಮೂಲಗಳ ಪ್ರಕಾರ, ಕಳೆದ  ವರ್ಷ ಸುಮಾರು 200 ಪತ್ರಕರ್ತರು ದೇಶದಲ್ಲಿ ಕೋವಿಡ್-19ಗೆ ಬಲಿಯಾಗಿದ್ದಾರೆ.
ಏಪ್ರಿಲ್ ತಿಂಗಳಲ್ಲೇ 60 ಪತ್ರಕರ್ತರು ಸಾವನ್ನಪ್ಪಿರುವುದಾಗಿ ನೆಟ್ ವರ್ಕ್ ಆಫ್ ವುಮೆನ್ ಇನ್ ಮೀಡಿಯಾ ಹೇಳಿದೆ.

ಕರ್ನಾಟಕ, ಪಂಜಾಬ್, ಓಡಿಶಾ, ಬಿಹಾರ, ಮಧ್ಯಪ್ರದೇಶ ಮತ್ತು ತಮಿಳುನಾಡಿನಲ್ಲಿ ಪತ್ರಕರ್ತರನ್ನು ಮುಂಚೂಣಿ
ಕೊರೋನಾ ಸೇನಾನಿಗಳಾಗಿ ಘೋಷಿಸಲಾಗಿದೆ. ಆದರೆ, ಕೇರಳದಲ್ಲಿ ಇನ್ನೂ ಹೀಗೆ ಘೋಷಿಸಿಲ್ಲ.

No Comments

Leave A Comment