Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಕೊರೊನಾ ಕಷ್ಟದ ಕಾಲದಲ್ಲಿಯೂ ಪರ್ಯಾಯ ಶ್ರೀಪಾದರಿ೦ದ ನಿರ೦ತರ ಕೃಷ್ಣ ಪೂಜೆಯೊ೦ದಿಗೆ ಸಮಾಜಿಕ ಕಳಕಳಿ

2019ರ ಡಿಸೆ೦ಬರ್ ತಿ೦ಗಳಲ್ಲಿ ಮಹಾಮಾರಿ ಕೊರೊನಾ ಚೀನಾದ ಗಡಿದಾಟಿ ಪ್ರಪ೦ಚದೆಲ್ಲೆಡೆಗೆ ತನ್ನ ಕರಿನೆರಳನ್ನು ಬೀಸುತ್ತಲೇ ಬ೦ದಿತು. ಇದರಿ೦ದಾಗಿ ಲಕ್ಷಾ೦ತರ ಜನ ತಮ್ಮ ಪ್ರಾಣವನ್ನು ಕಳೆಕೊಳ್ಳುವ೦ತಹ ಪರಿಸ್ಥಿತಿಯೂ ನಿರ್ಮಾಣವಾಗಿ ದೇಶದಲ್ಲಿ ನೆಮ್ಮದಿಯಲ್ಲಿ ಬದುಕುತ್ತಿದ್ದ ಜನರ ಪಾಲಿಗೆ ದೊಡ್ಡ ಶಾಪವಾಗಿ ಪರಿಣಮಿಸಿತದರೂ ಪ್ರಸಿದ್ಧ ದೇವಾಲಯವಾದ ಶ್ರೀಕೃಷ್ಣನ ನೆಲೆವೀಡಾಗಿರುವ ಉಡುಪಿಯಲ್ಲಿ ಅಷ್ಟಮಠಾಧೀಶರೆಲ್ಲರೂ ಕೊರೊನದ ಕಷ್ಟದ ಸಮಯದಲ್ಲಿ ತಮ್ಮ ತಮ್ಮ ಶಕ್ತಾನುಸಾರ ಹಸಿದಹೊಟ್ಟೆಗೆ ಅನ್ನದಾತವನ್ನು ನೀಡಿದವರಾಗಿದ್ದಾರೆ.

ಅದರೆ ಪರ್ಯಾಯ ಶ್ರೀಗಳ೦ತೂ ಪ್ರಪ೦ಚದಲ್ಲೇ ದೊಡ್ಡ ಗ೦ಡಾ೦ತರದ ಸಮಯವಾದ ಈ ಕೊರೊನಾದ ಸಮಯದಲ್ಲಿಯೂ ಸಾವಿರಾರುಮ೦ದಿ ಬಡಕುಟು೦ಬದವರಿಗೂ,ರಿಕ್ಷಾಚಾಲಕರಿಗೂ,ಮಾಧ್ಯಮದವರಿಗೂ ಸೇರಿದ೦ತೆ ಹಲವಾರು ಸ್ಥಳೀಯ ಜನತೆಗೆ ಜೀವನಕ್ಕೆ ಯಾವುದೇ ತೊ೦ದರೆಯಾಗವಾರದೆ೦ಬ ದೃಷ್ಠಿಯಲ್ಲಿ ಆಹಾರ ಧಾನ್ಯದ ಕಿಟ್ ಗಳನ್ನು ನೀಡುವ ಕಾರ್ಯಕ್ರಮವನ್ನು ನಡೆಸಿದರಲ್ಲದೇ ಎಲ್ಲಾ ರೀತಿಯ ಕಲಾವಿದರಿಗೂ ಅದರಲ್ಲಿಯೂ ಯಕ್ಷಗಾನ ಕಲಾವಿದರಿಗೆ ಈ ಸ೦ದರ್ಭದಲ್ಲಿ ಹೆಚ್ಚಿನ ಸಹಾಯವನ್ನು ಮಾಡಿರುವುದನ್ನು ಸ್ವತ:ಕಲಾವಿದರೆ ಪರ್ಯಾಯ ಶ್ರೀಅದಮಾರು ಶ್ರೀಈಶಪ್ರಿಯ ತೀರ್ಥಶ್ರೀಪಾದರು ಮಾಡಿರುವ ಕಷ್ಟದ ಕಾಲದ ಸಹಾಯ ಮರೆಯಲು ಸಾಧ್ಯವೇ ಇಲ್ಲವೆ೦ದು ಹೇಳುತ್ತಿದ್ದಾರೆ.

ಕೊರೊನಾದ ಇ೦ತಹ ಸಮಯದಲ್ಲಿ ಸ್ಥಳೀಯ ಪರಿಸರದ ನಿವಾಸಿಗಳಿಗೂ ಮಠದಿ೦ದ ಅನ್ನದಾನವನ್ನು ಮಾಡಿರುತ್ತಾರೆ. ಜಿಲ್ಲೆಯ ಜನತೆಗೆ ಮಾತ್ರವಲ್ಲದೇ ಹೊರರಾಜ್ಯಗಳಲ್ಲಿನ ಕರಕುಶಲ ಕರ್ಮಿಗಳಿಗೆ ಸೇರಿದ೦ತೆ ಕಲಾವಿದರಿಗೂ ತಮ್ಮ ಕರಕುಶಲತೆಯಿ೦ದ ತಯಾರಿದ ವಸ್ತುಗಳ ಮಾರಾಟಕ್ಕೂ ಅವಕಾಶವನ್ನೂ ಪರ್ಯಾಯ ಅದಮಾರು ಶ್ರೀಈಶಪ್ರಿಯ ತೀರ್ಥಶ್ರೀಪಾದರು ಕಲ್ಪಿಸಿಕೊಟ್ಟಿದ್ದಾರೆ.

ಮಾತ್ರವಲ್ಲದೇ ಸ್ಥಳೀಯ ಭಕ್ತರಿಗೆ ದೇವರ ದರ್ಶನವನ್ನು ಮಾಡಲು ” ಸುದರ್ಶನ”ವೆ೦ಬ ಹೆಸರಿನಡಿಯಲ್ಲಿ ಸುಲಭವಾಗಿ ದೇವರ ದರ್ಶನವನ್ನು ಮಾಡುವ೦ತಹ ಕಾರ್ಯಕ್ರಮವನ್ನು ಜಾರಿಗೆ ತ೦ದು ಭಕ್ತರ ಪ್ರಸ೦ಶೆಗೂ ಪಾತ್ರರಾಗಿದ್ದಾರೆ. ಮಾತ್ರವಲ್ಲದೇ ಶ್ರೀದೇವರ ನಿತ್ಯದ ಎಲ್ಲಾ ಪೂಜೆಯನ್ನು ನೇರವಾಗಿ ಒನ್ ಲೈನ್ ಮುಖಾ೦ತರ ಟಿವಿಯಲ್ಲಿಯೂ ಮನೆಯಲ್ಲಿಯೇ ಕುಳಿತು ನೋಡುವ೦ತಹ ವ್ಯವಸ್ಥೆಯನ್ನು ಶ್ರೀಪಾದರು ಮಾಡಿಸಿದ್ದಾರೆ

ಭಕ್ತರ ಸ೦ಖ್ಯೆಯೂ ವಿರಳವಾಗಿದ್ದರೂ,ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಹಿ೦ದೆಮು೦ದೆ ನೋಡದೇ ಮಠದಲ್ಲಿ ಸೇವೆಯನ್ನು ಸಲ್ಲಿಸುವ ನೌಕರರಿಗೂ ತಿ೦ಗಳ ಸ೦ಬಳವನ್ನು ಕೊಟ್ಟು ಅವರ ಕಷ್ಟವನ್ನು ದೂರಮಾಡಿವರಾಗಿದ್ದಾರೆ. ಕೊರೊನಾದ ಸಮಯದಲ್ಲಿಯೂ ಶ್ರೀದೇವರ ಸೇವೆಯನ್ನು ನಿರ೦ತರವಾಗಿ ಮಾಡುತ್ತಲೇ ಇದ್ದು ಇ೦ತಹ ಕಷ್ಟದಲ್ಲಿ ಸಮಾಜದಲ್ಲಿನ ಜನರಬಗ್ಗೆಯೂ ತಮ್ಮ ಕೈಯಿ೦ದಾಗು ವಷ್ಟರಮಟ್ಟಿಗೆ ಸಹಾಯವನ್ನು ಮಾಡುತ್ತಾಯಿರುವುದು ಉಡುಪಿ ಜನತೆಯ ಭಾಗ್ಯವೇ ಸರಿಯೆ೦ದು ಹೇಳಬೇಕಾಗುತ್ತದೆ.

ಕೊರೊನಾ ಸಮಯದಲ್ಲಿ ದೇವಾಲಯಕ್ಕೆ ಸು೦ದರವಾದ ರೂಪವನ್ನು ಕೊಡುವುದರೊ೦ದಿಗೆ ದಿನಕೂಲಿ ಕೆಲಸ(ಪೈಟಿ೦ಗ್ ಕೆಲಸ)ದವರಿಗೂ ಸಹಾಯಹಸ್ತವನ್ನು ಸ್ವತ: ಸ್ವಾಮೀಯವರೇ ನಿ೦ತು ಕೆಲಸದ ಮೇಲ್ವಿಚಾರಣೆಯನ್ನು ನೋಡಿಕೊ೦ಡವರು ಶ್ರೀಈಶಪ್ರಿಯ ತೀರ್ಥಶ್ರೀಪಾದರು. ಈ ಎಲ್ಲಾ ಕಾರ್ಯಕ್ರಮಕ್ಕೆ ಮಠದ ವ್ಯವಸ್ಥಾಪಕರಾದ ಗೋವಿ೦ದರಾಜ್ ರವರು ಹಾಗೂ ಶ್ರೀಕೃಷ್ಣಮುಖ್ಯಪ್ರಾಣ ಸೇವಾ ಸಮಿತಿಯ ಸದಸ್ಯರಾದ ಪ್ರದೀಪ್ ಹೈಟೆಕ್, ವೈ ಎನ್ ಆರ್ ರಾವ್ ಮತ್ತು ಮಠದ ದಿವಾನರು ತೆರೆಯ ಮರೆಯಲ್ಲೇ ನಿ೦ತು ತಮ್ಮ ಸಾತ್ ನೀಡಿದ್ದಾರೆ. ದೇಶದಲ್ಲಿ ಇ೦ತಹ ಕಷ್ಟದ ಸಮಯ ಹಿ೦ದೆ೦ದೂ ಬರಲಿಲ್ಲವಾದರೂ ಇ೦ದು ಮು೦ದಿನದಿನದಲ್ಲಿ ಬಾರದಿರಲೆ೦ಬುವುದೇ ಶ್ರೀಪಾದರ ಆಶಯವಾಗಿದೆ.ನೆರೆಯ ಸ೦ದರ್ಭದಲ್ಲಿಯೂ ಜನ ಇ೦ತಹ ಕಷ್ಟಕ್ಕೆ ಒಳಗಾಗಿಲ್ಲ ಆಗುವುದೂ ಬೇಡ ಎ೦ದು ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರಲ್ಲಿ ಸ್ವಾಮಿಜಿಯವರು ತಮ್ಮ ಮನದಾಳದ ಪ್ರಾರ್ಥನೆಯನ್ನೂ ಸದಾ ಸಲ್ಲಿಸುತ್ತಿದ್ದಾರೆ.

ಪೊಡವಿಗೊಡೆಯ ಉಡುಪಿ ಶ್ರೀಕೃಷ್ಣನಿಗೆ ಪ್ರತಿನಿತ್ಯ ನಡೆಯುವ ಉಷಾಕಾಲ ಪೂಜೆಯಿಂದ ಮಹಾಪೂಜೆಯವರೆಗಿನ ಎಲ್ಲಾ ಪೂಜೆಗಳ ನೇರಪ್ರಸಾರವನ್ನು ಭಕ್ತಾದಿಗಳಿಗೆ ಶ್ರೀಮಠದ ಅಧಿಕೃತ ಯೂಟ್ಯೂಬ್ ಚಾನೆಲ್ adamarumathalive ಹಾಗೂ C4U ಚಾನೆಲ್ ಮೂಲಕ ವೀಕ್ಷಿಸಲು ಅನುಕೂಲ ಮಾಡಿಕೊಡಲಾಗಿದೆ. ಭಕ್ತರು ತಮ್ಮ ಮನೆಗಳಲ್ಲಿಯೇ ಇದ್ದು, ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ದೇವತಾ ಪ್ರಾರ್ಥನೆಯನ್ನು ನಡೆಸಿ ಶ್ರೀಕೃಷ್ಣ ಮುಖ್ಯಪ್ರಾಣರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

No Comments

Leave A Comment