Log In
BREAKING NEWS >
ಅಪಾರ ಭಕ್ತಜನಸ್ತೋಮದ ನಡುವೆ ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಮಹೋತ್ಸವದ "ರ೦ಗಪೂಜೆ" ಸ೦ಪನ್ನ...ಏಕಾದಶಿಯ ಪ್ರಯುಕ್ತ ಸೋಮವಾರದ೦ದು ಸ೦ಜೆ 5ಗ೦ಟೆಗೆ ನಗರಭಜನೆ ಆರ೦ಭ...

ಚೀನಾದ ಅತೀ ದೊಡ್ಡ ರಾಕೆಟ್ ಹಿಂದೂ ಮಹಾಸಾಗರದ ಮೇಲೆ ಪತನ

ಬೀಜಿಂಗ್: ಚೀನಾದ ಅತೀ ದೊಡ್ಡ ರಾಕೆಟ್ ರವಿವಾರ ಬೆಳಗ್ಗೆ ಹಿಂದೂ ಮಹಾ ಸಾಗರದ ಮೇಲೆ ಪತನಗೊಂಡಿದೆ ಎಂದು ಚೀನಾದ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಏಪ್ರಿಲ್ 29 ರಂದು ಚೀನಾದ ಹೊಸ ಟಿಯಾನ್ಹೆ ಬಾಹ್ಯಾಕಾಶ ಕೇಂದ್ರದ ಮೊದಲ ಮೊಡ್ಯೂಲ್ ಅನ್ನು ಭೂಮಿಯ ಕಕ್ಷೆಗೆ ಉಡಾಯಿಸಿದ ಲಾಂಗ್ ಮಾರ್ಚ್ -5 ಬಿ ರಾಕೆಟ್‌ನ ಫ್ರೀಫಾಲಿಂಗ್ ವಿಭಾಗದಿಂದ ಸ್ವಲ್ಪ ಅಪಾಯವಿದೆ ಎಂದು ಬೀಜಿಂಗ್ ಅಧಿಕಾರಿಗಳು ತಿಳಿಸಿದ್ದರು.

ಇನ್ನು ಈ ಕುರಿತು ಮೇಲ್ವಿಚಾರಣೆ ಮತ್ತು ವಿಶ್ಲೇಷಣೆಯ ನಡೆಸಿದ ಬಳಿಕ ಮೇ 9, 2021 ರಂದು 10:24 (0224 ಜಿಎಂಟಿ) ನಲ್ಲಿ, ಲಾಂಗ್ ಮಾರ್ಚ್ 5 ಬಿ ಯಾವೋ -2 ಉಡಾವಣಾ ವಾಹನದ ಕೊನೆಯ ಹಂತದ ಭಗ್ನಾವಶೇಷವು ವಾತಾವರಣಕ್ಕೆ ಮತ್ತೆ ಪ್ರವೇಶಿಸಿದೆ ” ಎಂದು ಚೀನಾ ಮ್ಯಾನ್ಡ್ ಸ್ಪೇಸ್ ಎಂಜಿನಿಯರಿಂಗ್ ಕಚೇರಿಯು ತಿಳಿಸಿದೆ.

ಭೂಮಿಗೆ ಮತ್ತೆ ಪ್ರವೇಶಿಸುವ ಹೊತ್ತಲ್ಲಿ ಅದರ ಬಹುಪಾಲು ಘಟಕಗಳು ಸುಟ್ಟುಹೋಗಿವೆ ಎಂದು ಚೀನಾದ ಬಾಹ್ಯಾಕಾಶ ಸಂಸ್ಥೆಯ ಮಾಹಿತಿ ಉಲ್ಲೇಖಿಸಿ ಚೀನಾದ ಮಾಧ್ಯಮಗಳು ವರದಿ ಮಾಡಿದೆ.

No Comments

Leave A Comment