Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ, ಮಕ್ಕಳಿಗೆ ಕೋವಿಡ್-19 ಪಾಸಿಟಿವ್!

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ  ಪತಿ ರಾಜ್ ಕುಂದ್ರಾ, ಪುತ್ರ ವಿಯಾನ್ -ರಾಜ್ , ಪುತ್ರಿ ಸಮಿಶಾ ಸೇರಿದಂತೆ
ಕುಟುಂಬದ ಆರು ಸದಸ್ಯರಿಗೆ ಕೋವಿಡ್-19 ಸೋಂಕು ತಗುಲಿದೆ.

ಶಿಲ್ಪಾ ಶೆಟ್ಟಿ ಶುಕ್ರವಾರ ಈ ವಿಷಯವನ್ನು ತನ್ನ ಅಧಿಕೃತ ಇನ್ಸಾಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತನ್ನ ತಾಯಿ ಹಾಗೂ
ಅತ್ತೆಗೂ ಸೋಂಕು ತಗುಲಿರುವುದಾಗಿ 45 ವರ್ಷದ ನಟಿ ಹೇಳಿದ್ದಾರೆ.

ಕಳೆದ 10 ದಿನಗಳು ತಮ್ಮ ಕುಟುಂಬಕ್ಕೆ ಸಂಕಷ್ಟದ ದಿನಗಳು. ನನ್ನ ಅತ್ತೆಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ನಂತರ ಸಮಿಶಾ, ವಿಯಾನ್ ರಾಜ್ ಹಾಗೂ ನನ್ನ ತಾಯಿ ಹಾಗೂ ರಾಜ್ ಕುಂದ್ರಾ ಅವರಿಗೂ ಸೋಂಕು ತಗುಲಿದೆ. ಅಧಿಕಾರಿಗಳು ಹಾಗೂ ವೈದ್ಯರು ನೀಡಿದ ಮಾರ್ಗಸೂಚಿ ಅನ್ವಯ ಅವರೆಲ್ಲರೂ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದಾರೆ ಎಂದು ಶಿಲ್ಪಾಶೆಟ್ಟಿ ತಿಳಿಸಿದ್ದಾರೆ.

ತನ್ನ ಕುಟುಂಬ ಸದಸ್ಯರಲ್ಲದೆ, ಇಬ್ಬರು ಮನೆ ಕೆಲಸದವರಿಗೂ ಪಾಸಿಟಿವ್ ಆಗಿದೆ. ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುತ್ತಿದ್ದಾರೆ. ತನ್ನ ಕುಟುಂಬದವರು ಚೇತರಿಸಿಕೊಳ್ಳುತ್ತಿದ್ದು, ತನಗೆ ಕೋವಿಡ್- ನೆಗೆಟಿವ್ ವರದಿ ಬಂದಿರುವುದಾಗಿ
ಶಿಲ್ಪಾ ಶೆಟ್ಟಿ ಹೇಳಿದ್ದಾರೆ.

ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದಗಳು, ದಯವಿಟ್ಟು ಎಲ್ಲರೂ ಮಾಸ್ಕ್ ಧರಿಸಿ, ಸ್ಯಾನಿಟೈಸರ್ಸ್ ಬಳಸಿ, ಸುರಕ್ಷಿತವಾಗಿ
ಇರಿ. ಕೋವಿಡ್ ಪಾಸಿಟಿವ್ ಇರಲಿ ಅಥವಾ ಇಲ್ಲದೇ ಇರಲಿ, ಮಾನಸಿಕವಾಗಿ ಸಕರಾತ್ಮಕವಾಗಿ ಇರಿ ಎಂದು ಶಿಲ್ಪಾಶೆಟ್ಟಿ ಕೋರಿದ್ದಾರೆ.

No Comments

Leave A Comment