Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಪ್ರಸಿದ್ಧ ಸಿತಾರ್ ವಾದಕ ಪ್ರತೀಕ್ ಚೌಧರಿ ಕೋವಿಡ್ ಗೆ ಬಲಿ

ನವದೆಹಲಿ: ಪ್ರಸಿದ್ಧ ಸಿತಾರ್ ವಾದಕ ಪ್ರತೀಕ್ ಚೌಧರಿ ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ.

ಕಳೆದ ವಾರವಷ್ಟೆ ಪ್ರತೀಕ್ ತಂದೆ  ಸಗೀತ ವಿಧ್ವಾಂಸ ದೇವ್ಬ್ರತಾ ಚೌಧರಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದರು.

ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಪ್ರತೀಕ್ ಅವರನ್ನು ಗುರು ತೇಜ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಗುರುವಾರ ಸಾವನ್ನಪ್ಪಿದ್ದಾರೆ ಎಂದು ಸಂಗೀತ ತಜ್ಞ ಪವನ್ ಜಾ ತಿಳಿಸಿದ್ದಾರೆ,

ಪ್ರತಿಭಾವಂತ ಸಿತಾರ್ ವಾದಕರಾಗಿದ್ದ ಪ್ರತೀಕ್ ತಂದೆಯ ಸಂಗೀತದ ಹಾದಿಯಲ್ಲೇ ನಡೆದಿದ್ದರು. ಐಸಿಯು ನಲ್ಲಿದ್ದ ಅವರು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದರು.

ತಂದೆ ಮಗ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಪ್ರತೀಕ್ ಅವರ ಆರೋಗ್ಯ ಸುಧಾರಿಸುತ್ತಿತ್ತು, ಸೋಮವಾರ ನಾನು ಅವರಿಗೆ ಕರೆ ಮಾಡಿ ಮಾತನಾಡಿದ್ದೆ., ಅವರ ತಂದೆಯ ಮರಣದ ವಿಷಯ ಕೇಳಿದ ಕೂಡಲೇ ಅವರು ಕುಸಿದು ಬಿದ್ದರು ಎಂದು ಪವನ್ ಜಾ ಟ್ವೀಟ್ ಮಾಡಿದ್ದಾರೆ..

ಹಿರಿಯ ಸಿತಾರ್ ವಾದಕ ದೇವ್ಬ್ರತಾ ಚೌಧುರಿ, ಡೆಬು ಚೌಧುರಿ ಎಂದೇ ಖ್ಯಾತರಾಗಿದ್ದರು, ಕಳೆದ  ಶನಿವಾರ  ಅವರು ಕೋವಿಡ್ ನಿಂದ ನಿಧನರಾದರು.

No Comments

Leave A Comment