Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಮಂಗಳೂರು: ಬಹ್ರೇನ್ ನಿಂದ 40 ಟನ್ ಆಮ್ಲಜನಕ ಹೊತ್ತ ಐಎನ್ಎಸ್ ತಲ್ವಾರ್ ಭಾರತಕ್ಕೆ ಆಗಮನ

ಮಂಗಳೂರು: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ 2ನೇಯಲ್ಲಿ ದೇಶಾದ್ಯಂತ ಆಮ್ಲಜನಕದ ಕೊರತೆ ಸಮಸ್ಯೆ ಮುಂದುವರೆದಿರುವಂತೆಯೇ ಇತ್ತ ಭಾರತೀಯ ನೌಕಾಪಡೆಯ ಐಎನ್ಎಸ್ ತಲ್ವಾರ್ ನೌಕೆ ಸುಮಾರು 40 ಟನ್ ಆಮ್ಲಜನಕ ಹೊತ್ತು ಭಾರತಕ್ಕೆ ಮರಳಿದೆ.

ಕರ್ನಾಟಕದ ಮಂಗಳೂರಿನ ನವಮಂಗಳೂರು ಬಂದರಿಗೆ ಇಂದು ಮಧ್ಯಾಹ್ನ  ಐಎನ್ಎಸ್ ತಲ್ವಾರ್ ನೌಕೆ ಆಗಮಿಸಿದ್ದು, ತನ್ನೊಂದಿಗೆ ಬಹರೇನ್‌ನಿಂದ 40 ಟನ್ ದ್ರವೀಕೃತ ಆಮ್ಲಜನಕ ಹೊತ್ತು ಬಂದಿದೆ. ಬಹರೇನ್‌ನ ಮನಾಮಾದಿಂದ ಎರಡು ಕ್ರಯೋಜೆನಿಕ್ ಐಸೋಕಂಟೈನರ್‌ಗಳಲ್ಲಿ 40 ಟನ್ ಆಮ್ಲಜನಕ  ಹಾಗೂ ವೈದ್ಯಕೀಯ ಉಪಕರಣಗಳನ್ನು ಈ ಹಡಗು ಹೊತ್ತು ತಂದಿದೆ.

ಆಕ್ಸಿಜನ್ ಹಡಗು ಆಗಮನ ಸಂದರ್ಭದಲ್ಲಿ ಎನ್‍ಎಂಪಿಟಿ ಬಳಿ ಸಮುದ್ರದಲ್ಲಿ ಯಾವುದೇ ಹಡಗು ಸಂಚರಿಸದಂತೆ ನಿರ್ಬಂಧಿಸಲಾಗಿತ್ತು. ಶಿಪ್ಪಿಂಗ್ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಕ್ರೇನ್‍ಗಳ ಸಹಾಯದಿಂದ ಬೃಹತ್ ಕಂಟೈನರ್‌ಗಳನ್ನು  ಇಳಿಸಲಾಯಿತು. ಎನ್‍ಎಂಪಿಟಿ ಇದನ್ನು ಉಚಿತವಾಗಿ ನಿರ್ವಹಣೆ ಮಾಡಿದ್ದರೆ, ಗಣೇಶ್ ಶಿಪ್ಪಿಂಗ್‍ನಿಂದ ಉಚಿತವಾಗಿ ಇಳಿಸಿದೆ.

No Comments

Leave A Comment