Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

‘ಕವಿರತ್ನ ಕಾಳಿದಾಸ’, ‘ಕಿಂದರಿ ಜೋಗಿ’ ನಿರ್ದೇಶಕ ರೇಣುಕಾ ಶರ್ಮಾ ಕೊರೋನಾಗೆ ಬಲಿ

ಕವಿರತ್ನ ಕಾಳಿದಾಸ, ಅಂಜದ ಗಂಡು, ಕಿಂದರಿ ಜೋಗಿ ಅಂತಹ ಹಿಟ್, ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ರೇಣುಕಾ ಶರ್ಮಾ ನಿನ್ನೆ ತಡರಾತ್ರಿ ಕೊರೋನಾ ಸೋಂಕಿನಿಂದಾಗಿ ವಿಧಿವಶರಾಗಿದ್ದಾರೆ.

ಕೊರೋನಾ ಸೋಂಕು ಇರುವುದು ದೃಢವಾದ ಬೆನ್ನಲ್ಲೇ ನಿರ್ದೇಶಕ ರೇಣುಕಾ ಶರ್ಮಾ ಅವರ ಕುಟುಂಬದವರು ಅವರನ್ನು ಎರಡು ದಿನಗಳ ಹಿಂದಷ್ಟೆ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಶ್ವಾಸಕೋಶದಲ್ಲಿ ಸೋಂಕು ಹೆಚ್ಚಾಗಿ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ತಡ ರಾತ್ರಿ ರೇಣುಕಾ ಶರ್ಮಾ ಸಾವನ್ನಪ್ಪಿದ್ದಾರೆ.

1981ರಲ್ಲಿ ಅನುಪಮ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ಧರಿಸಿದ ರೇಣುಕಾ ಶರ್ಮಾ ಅವರು ಮತ್ತೆ ಹಿಂದಿರುಗಿ ನೋಡಲಿಲ್ಲ. 1983ರಲ್ಲಿ ಕವಿರತ್ನ ಕಾಳಿದಾಸ, 1985ರಲ್ಲಿ ಶಹಬ್ಬಾಸ್ ವಿಕ್ರಮ್, 1986ರಲ್ಲಿ ಸತ್ಕಾರ ಹಾಗೂ ನಮ್ಮ ಊರು ದೇವತೆ, 1988ರಲ್ಲಿ ಅಂಜದ ಗಂಡು, 1989ರಲ್ಲಿ ಕಿಂದರಿ ಜೋಗಿ, 1990ರಲ್ಲಿ ಶಬರಿ ಮಲೆ ಶ್ರೀ ಅಯ್ಯಪ್ಪ, 1992ರಲ್ಲಿ ಭರ್ಜರಿ ಗಂಡು ಹಾಗೂ ಹಠಮಾರಿ ಹೆಣ್ಣು ಕಿಲಾಡಿ ಗಂಡು, 1993ರಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕೆ ಸಿನಿಮಾಗಳನ್ನು ನಿರ್ದೇಶಿಸಿದ್ದರು.

No Comments

Leave A Comment