Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಮಾಜಿ ಕೇಂದ್ರ ಸಚಿವ, ಆರ್‌ಎಲ್‌ಡಿ ಮುಖ್ಯಸ್ಥ ಚೌಧರಿ ಅಜಿತ್ ಸಿಂಗ್ ಕೊರೋನಾದಿಂದ ನಿಧನ

ಗುರುಗ್ರಾಮ್: ಮಾಜಿ ಕೇಂದ್ರ ಸಚಿವ ಮತ್ತು ರಾಷ್ಟ್ರೀಯ ಲೋಕಳಳದ ಮುಖ್ಯಸ್ಥ ಚೌಧರಿ ಅಜಿತ್ ಸಿಂಗ್ (82) ಅವರು ಕೋವಿಡ್ -19 ರಿಂದ ನಿಧನರಾದರು.

ಪಶ್ಚಿಮ ಉತ್ತರ ಪ್ರದೇಶದ ಪ್ರಮುಖ ನಾಯಕರಾಗಿದ್ದ ಆರ್‌ಎಲ್‌ಡಿ ಮುಖ್ಯಸ್ಥ ಚೌಧರಿ ಅಜಿತ್ ಸಿಂಗ್ ಕೊರೋನಾ ಪಾಸಿಟಿವ್ ವರದಿ ಪಡೆದ ಬಳಿಕ ಗುರುಗ್ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಶ್ವಾಸಕೋಶದ ಸೋಂಕಿನಿಂದ ಮಂಗಳವಾರ ರಾತ್ರಿ ಅವರ ಸ್ಥಿತಿ ಗಂಭೀರವಾಗಿತ್ತು,ಚಿಕಿತ್ಸೆ ಓಅಲಿಸದೆ ಅವರು ಗುರುವಾರ ನಿಧನರಾಗಿದ್ದಾರೆ.

ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಪುತ್ರ ಚೌಧರಿ ಅಜಿತ್ ಸಿಂಗ್ ಅವರು ಬಾಗ್‌ಪತ್‌ ಕ್ಷೇತ್ರದಿಂದ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿಯೂ ಸೇವೆ ಸಲ್ಲಿಸಿದರು.

1979-1980ರಲ್ಲಿ ಆರು ತಿಂಗಳು ದೇಶದ ಪ್ರಧಾನಿಯಾಗಿದ್ದ ಚರಣ್ ಸಿಂಗ್ ಅವರ ಪುತ್ರ ಅಜಿತ್ ಸಿಂಗ್ ಅವರು ತಮ್ಮ ತಂದೆಯ ರಾಜಕೀಯ ದ್ಯೇಯವನ್ನು ಮುಂದುವರಿಸುವ ಮುನ್ನ ಯುನೈಟೆಡ್ ಸ್ಟೇಟ್ಸ್ನಲ್ಲಿ ಕಂಪ್ಯೂಟರ್ ಉದ್ಯಮದಲ್ಲಿ 15 ವರ್ಷ ಕೆಲಸ ಮಾಡಿದರು ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಚಿಕಾಗೋದ ಇಲಿನಾಯ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಚಿದ್ಯಾರ್ಥಿಯಾಗಿದ್ದ  ಅಜಿತ್ ಸಿಂಗ್ 1986 ರಲ್ಲಿ ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು.

No Comments

Leave A Comment