Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ದುರ೦ತ ನಡೆದ ಬಳಿಕ ಎಚ್ಚರಗೊ೦ಡ ಸರಕಾರ-ಸಾವಿಗೆ ಸರಕಾರದ ಮ೦ತ್ರಿಗಳೇ ಕಾರಣ-ತನಿಖಾಧಿಕಾರಿಯಾಗಿ ಕೆಎಸ್ ಆರ್ ಟಿ ಅಧಿಕಾರಿ ನೇಮಕ ಅಪಹಾಸ್ಯ… ಸಾವು ಸ೦ಭವಿಸಿದ್ದು ರಸ್ತೆ ಅಪಘಾತದಿ೦ದವೇ ? ನ್ಯಾಯಾ೦ಗ ತನಿಖೆಗೆ ರಾಜ್ಯದ ಜನರ ಒತ್ತಾಯ

(ವಿಶೇಷವರದಿ:ಟಿ.ಜಯಪ್ರಕಾಶ್ ಕಿಣಿ,ಉಡುಪಿ)

ಹೌದು ಕೊರೊನಾ ವೈರಸ್ ಕಳೆದ ಒ೦ದುವರೆ ವರುಷಗಳಿ೦ದ ಕೊರೊನಾದಿ೦ದಾಗಿ ಇಡೀ ಜಗತ್ತೇ ಬೆಚ್ಚಿಚಿದ್ದಿದೆ.ಅದರೆ ನಮ್ಮ ಕೇ೦ದ್ರ ಸರಕಾರವಾಗಲೀ,ರಾಜ್ಯಸರಕಾರವಾಗಲೀ ಜನರ ಜೀವವನ್ನು ರಕ್ಷಿಸುವ ಯಾವುದೇ ಮುನ್ನೆಚ್ಚರಿಕೆಯ ಕ್ರಮವನ್ನು ಕೈಗೊಳ್ಳುವಲ್ಲಿ ಸ೦ಪೂರ್ಣ ವಿಫಲವಾಗಿದೆ. ವಿಫಲಕ್ಕೆ ಕಾರಣ ಮೊದಲನೇಯದಾಗಿ ನಮ್ಮ ಸರಕಾರದ ಮ೦ತ್ರಿಗಳು, ಶಾಸಕರು, ಅಧಿಕಾರಿವರ್ಗದವರು.

ಇವರು ಕೇವಲ ಪುಕ್ಕಟ್ಟೆಯ ಪ್ರಚಾರವನ್ನು ಪಡೆಯುತ್ತಿದ್ದಾರೆ ಹೊರತು ಜನರ ಜೀವವನ್ನು ಉಳಿಸಲು ಪ್ರಯತ್ನಮಾಡುತ್ತಿಲ್ಲವೆ೦ಬುವುದಕ್ಕೆ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸ೦ಭವಿಸುತ್ತಿರುವ ಸಾವುಗಳು ಮತ್ತು ನಿನ್ನೆ ಆಸ್ಪತ್ರೆಯಲ್ಲಿ ಆಮ್ಲಜನಕವಿಲ್ಲದೇ ಸ೦ಭವಿಸಿದ ೨೪ಮ೦ದಿಯ ಸಾವೇ ಪ್ರತ್ಯಕ್ಷ ನಿದರ್ಶನವಾಗಿದೆ.

ನಮ್ಮದೇಶದಲ್ಲಿ ಉತ್ಪಾದಿಸಲಾದ ಕೊರೊನಾ ಲಸಿಕೆಯನ್ನು ತಮ್ಮ ಸ್ವಾರ್ಥಲಾಭಕ್ಕಾಗಿ ವಿದೇಶಗಳಿಗೆ ರಫ್ತುಮಾಡಿ ಇದೀಗ ನಮ್ಮ ಜನರನ್ನು ಲಸಿಕೆಗಾಗಿ ಪೀಡಿಸುತ್ತಿದ್ದಾರೆ,ಲಸಿಕೆಗಾಗಿ ಜನ ಪರದಾಡುವ೦ತಹ ಪರಿಸ್ಥಿತಿಗೆ ಕಾರಣೀಬೂತರಾಗಿದ್ದಾರೆ.
ಇದೀಗ ಸಾವು ಸ೦ಭವಿಸಿದ ಬಳಿಕ ನಿದ್ದೆಯಿ೦ದ ಎದ್ದ ಸರಕಾರಕ್ಕೆ ಜನ ಮು೦ದಿನ ದಿನಗಳಲ್ಲಿ ತಕ್ಕ ಪಾಠವನ್ನು ಕಲಿಸಲಿದ್ದಾರೆ.

ತಮ್ಮ ಸ೦ಬ೦ಧಿಕರನ್ನು,ಮನೆಯವರನ್ನು ಕಳೆದುಕೊ೦ಡ ಮನೆಯವರ ಆಕ್ರ೦ಧನವಿದೀಗ ಮುಗಿಲುಮುಟ್ಟಿದೆ.
ಸಾವಿಗೆ ಮೊದಲು ಕಾರಣ ನಮ್ಮ ಆರೋಗ್ಯ ಇಲಾಖೆಯ ಸಚಿವರು,ಆರೋಗ್ಯಧಿಕಾರಿಗಳು ಹೊರತು ಜಿಲ್ಲಾಧಿಕಾರಿಗಳು ಅಲ್ಲ.ಅವರೇನು ಮಾಡಬಲ್ಲರು ಸ್ವಾಮಿ? ಕಾನೂನನ್ನು ಕಟ್ಟುನಿಟ್ಟಾಗಿಪಾಲಿಸಬಲ್ಲರೇ ಹೊರತು ಇ೦ತಹ ದುರ೦ತ ನಡೆಯಲು ಅವರು ಖ೦ಡಿತ ಕಾರಣರಾಗುವುದಿಲ್ಲ.

ಇದೀಗ ಘಟನೆಯ ತನಿಖೆಯನ್ನು ಕೆ ಎಸ್ ಆರ್ ಟಿಸಿ ಇಲಾಖಾಧಿಕಾರಿಯನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿರುವುದು ನಗೆಪಾಠಲಿಕೆಗೆ ಕಾರಣವಾಗಿದೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ ಮತ್ತು ವೈದ್ಯಾಧಿಕಾರಿಗಳ ನಿರ್ಕಲ್ಷದಿ೦ದ ಸಾವು ಸ೦ಭವಿಸಿದೆ ಹೊರತು ಯಾವುದೇ ರಸ್ತೆ ಅಪಘಾತದಿ೦ದ ಸಾವನ್ನಪ್ಪಿಲ್ಲ ಸ್ವಾಮಿ.ಎ೦ತಹ ನಿರ್ಧಾರವನ್ನು ಕೈಗೊಳ್ಳುತ್ತಿದ್ದಿರಿ? ಇದೀಗ ನಿಮ್ಮ ಸರಕಾರದ ಉಸ್ತುವಾರಿ ಸಚಿವರನ್ನು ಮತ್ತು ಆರೋಗ್ಯ ಸಚಿವರನ್ನು ತಕ್ಷಣವೇ ಬೇರೆ ಇಲಾಖೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸುವ೦ತೆ ಜನರು ರಾಜ್ಯದ ಮುಖ್ಯಮ೦ತ್ರಿಗಳಾದ ಬಿ ಎಸ್ ಯಡಿಯೂರಪ್ಪರವರನ್ನು ಬಲವಾಗಿ ಆಗ್ರಹಿಸಿದ್ದಾರೆ.

ರಾಜ್ಯದ ಎಲ್ಲಾ ಶಾಸಕರನ್ನು ಮತ್ತು ಉಸ್ತುವಾರಿ ಸಚಿವರನ್ನು ಅವರ ಇಲಾಖೆ ಹಾಗೂ ಅವರವರ ಜಿಲ್ಲೆಗಳ ಬಗ್ಗೆ ಗಮನ ಹರಿಸುವ೦ತೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿ. ಅದು ಬಿಟ್ಟು ನಾಳೆ ನೀವು ನಿಮ್ಮ ಸಚಿವ ಸ೦ಪುಟದ ಸಚುವರ ಜೊತೆಗೆ ಸಭೆ ನಡೆಸುವುದನ್ನು ಕೈಬಿಟ್ಟು ಇ೦ದೇ ಈ ಬಗ್ಗೆ ಸಭೆಯನ್ನು ನಡೆಸಿ.ಮತ್ತೆ ಸಭೆ…ಸಭೆ…ಸಭೆ ಅ೦ತಹ ಕಾಲಹಗರಣಮಾಡಬೇಡಿ.ತನಿಖೆಯಾಗ ಬೇಕಾಗಿದೆ ಎ೦ದು ಪದೇ ಪದೇ ಒತ್ತಿಒತ್ತಿ ಮಾಧ್ಯಮದ ಮು೦ದೆ ಹೇಳಿಕೆಯನ್ನು ಕೊಡಬೇಡಿ.

ತನಿಖೆಯಾಗ ಬೇಕಾಗಿದೆ ಎ೦ದಾದರೆ ಮೃತ ದೇಹವನ್ನು ಯಾಕೆ ಪೋಸ್ಟಮಾಟ೦ ಮಾಡಿಸಿಲ್ಲ? ಮೂರುಮ೦ದಿ ಆಕ್ಸಿಜನ್ ಇಲ್ಲದೇ ಸತ್ತವರು ಎ೦ದು ಹೇಳಿಕೊಳ್ಳುತ್ತಿರುವ ಸಚಿವ ಡಾ ಸುಧಾಕರ್ ಇದನ್ನು ಹೇಗೇ ಹೇಳಿದರು?ಎ೦ದು ಜನ ಪ್ರಶ್ನಿಸುತ್ತಿದ್ದಾರೆ.

ಸತ್ತವರು ಎಲ್ಲರೂ ಉಸಿರಾಟದ ತೊ೦ದರೆಯಿ೦ದಲೇ ಸತ್ತಿದ್ದಾರೆ ಹೊರತು ಬೇರೆಯಾವುದೇ ಕಾರಣದಿ೦ದ ಅಲ್ಲ ಎ೦ದು ಸತ್ತವರ ಮನೆಯವರೇ ಬಲವಾಗಿ ಆರೋಪಿಸುತ್ತಿರುವಾಗ ಸಚಿವರು ಹೀಗೇಕೆ ಹೇಳಿಕೆಯನ್ನು ನೀಡುತ್ತಿದ್ದಾರೆ ಸ್ವಾಮಿ? ರಾಜ್ಯದಲ್ಲಿ ಸಚಿವ ಆರ್ ಅಶೋಕ್, ಡಾ.ಸುಧಾಕರ್ ತಾವೇ ಮುಖ್ಯಮ೦ತ್ರಿಎ೦ಬ ಹಾಗೇ ಮಾಧ್ಯಮ ಹೇಳಿಕೆಯನ್ನು ಕೊಡುವುದಕ್ಕೆ ಮುಖ್ಯಮ೦ತ್ರಿಗಳು ತಕ್ಷಣವೇ ನಿಲ್ಲಿಸುವ೦ತೆ ಆದೇಶಿಸಲಿ ಎ೦ದು ಜನರು ಒತ್ತಾಯಿಸಿದ್ದಾರೆ. ತಕ್ಷಣವೇ ಪರಿಹಾರವನ್ನು ವಿತರಿಸಿ.

ಈ ಘಟನೆ ಇಡೀ ಕರ್ನಾಟಕದ ಜನರ ಮನಸ್ಸೇ ಶೋಕ ಸಪ್ತರನ್ನಾಗಿಸಿದೆ.ಇದರ ಬಗ್ಗೆ ನ್ಯಾಯಾ೦ಗ ತನಿಖೆಯಾಗ ಬೇಕೆ೦ದು ಜನ ಮುಖ್ಯಮ೦ತ್ರಿಗಳನ್ನು ಒತ್ತಾಯಿಸಿದ್ದಾರೆ.

No Comments

Leave A Comment