Log In
BREAKING NEWS >
ಮಂಗಳೂರು ಕಡಲ ತೀರದಲ್ಲಿ ಟೌಕ್ಟೇ ಚಂಡಮಾರುತ ಅಬ್ಬರಕ್ಕೆ ಸಿಲುಕಿದ್ದ 9 ಮಂದಿಯ ರಕ್ಷಣೆ: ನೌಕಾಪಡೆ ಸಿಬ್ಬಂದಿಗೆ ಮುಖ್ಯಮಂತ್ರಿ ಧನ್ಯವಾದ...

ಬಾಂಗ್ಲಾದೇಶ: ಹಡಗು, ದೋಣಿ ನಡುವೆ ಅಪಘಾತ – 25 ಮಂದಿ ಮೃತ್ಯು

ಬಾಂಗ್ಲಾದೇಶ: “ಮಧ್ಯ ಬಾಂಗ್ಲಾದೇಶದಲ್ಲಿ ಸೋಮವಾರ ಹಡಗು ಹಾಗೂ ದೋಣಿಗಳ ನಡುವೆ ಢಿಕ್ಕಿಯಾದ ಪರಿಣಾಮ ಕನಿಷ್ಠ 25 ಮಂದಿ ಮೃತಪಟ್ಟಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.


ಸಾಂದರ್ಭಿಕ ಚಿತ್ರ

ಸ್ಥಳೀಯ ಪೊಲೀಸ್‌‌ ಮುಖ್ಯಸ್ಥ ಮಿರಾಜ್‌ ಹುಸೇನ್‌ ಈ ಬಗ್ಗೆ ಮಾಹಿತಿ ನೀಡಿದ್ದು, “ನಾವು ಐದು ಮಂದಿಯನ್ನು ರಕ್ಷಿಸಿದ್ದೇವೆ. 25 ಮೃತದೇಹ ಪತ್ತೆ ಮಾಡಲಾಗಿದೆ” ಎಂದು ಹೇಳಿದ್ದಾರೆ.

ಶಿಬ್ಚಾರ್‌‌ ಪಟ್ಟಣದ ಬಳಿ ಇರುವ ಪದ್ಮಾ ನದಿಯಲ್ಲಿ 30 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ, ಮರಳು ಸಾಗಿಸುತ್ತಿದ್ದ ಹಡಗಿಗೆ ಢಿಕ್ಕಿಯಾಗಿದೆ. ಪೊಲೀಸರು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಬಾಂಗ್ಲಾದೇಶದಲ್ಲಿ ಈ ರೀತಿಯ ಅಪಘಾತಗಳು ಸಾಮಾನ್ಯವಾಗಿದ್ದು, ಹಡಗು ಮಾರ್ಗದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಇರುವುದು ಈ ದುರಂಗಳಿಗೆ ಕಾರಣವಾಗಿದೆ.

ಎಪ್ರಿಲ್‌ ತಿಂಗಳ ಆರಂಧದಲ್ಲೂ 50 ಪ್ರಯಾಣಿಕರನ್ನು ಹೊಂದಿದ್ದ ದೋಣಿ ಸರಕು ಹಡಗಿಗೆ ಢಿಕ್ಕಿ ಹೊಡೆದ ಪರಿಣಾಮ 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.

No Comments

Leave A Comment