Log In
BREAKING NEWS >
ಸೋಮವಾರದಿ೦ದ ಚಿನ್ನಾಭರಣದ ಅ೦ಗಡಿ ಅಲ್ ಲಾಕ್ -ಚಿನ್ನ ಖರೀದಿಸಲೊ೦ದು ಅವಕಾಶ...

ರಾಜ್ಯದ ‘6 ಜಿಲ್ಲೆ’ಗಳಿಗೆ ‘ಜಿಲ್ಲಾ ಉಸ್ತುವಾರಿ ಸಚಿವ’ರನ್ನು ನೇಮಿಸಿ, ಸರ್ಕಾರ ಆದೇಶ : ಯಾರಿಗೆ ಯಾವ ಜಿಲ್ಲಾ ಉಸ್ತುವಾರಿ ಹೊಣೆ ಗೊತ್ತಾ.?

 ಬೆಂಗಳೂರು : ರಾಜ್ಯದ 6 ಜಿಲ್ಲೆಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ, ರಾಜ್ಯ ಸರ್ಕಾರ ಆದೇಶಿಸಿದೆ. ಬಾಕಿ ಇದ್ದಂತ ಬೆಳಗಾವಿ, ಬಾಗಲಕೋಟೆ, ಬೀದರ್, ಕೋಲಾರ, ಕಲಬುರ್ಗಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿದೆ. ಹಾಗಾದ್ರೇ.. ಯಾವ ಸಚಿವರಿಗೆ, ಯಾವ ಜಿಲ್ಲೆಯ ಉಸ್ತುವಾರಿ ಹೊಣೆಗಾರಿಕೆ ಅನ್ನೋದನ್ನು ಮುಂದೆ ಓದಿ..

ಈ ಕುರಿತಂತೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ(ಎಸ್-3) ಮಾಲತಿ ಸಿ ಅಧಿಸೂಚನೆ ಹೊರಡಿಸಿದ್ದು, ಉಪ ಮುಖ್ಯಮಂತ್ರಿ ಹಾಗೂ ಸಚಿವರುಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಆದೇಶಿಸಿದ್ದಾರೆ.

6 ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು

  • ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ – ಬೆಳಗಾವಿ

  • ಸಚಿವ ಉಮೇಶ್ ಕತ್ತಿ – ಬಾಗಲಕೋಟೆ

  • ಸಚಿವ ಅರವಿಂದ ಲಿಂಬಾವಳಿ – ಬೀದರ್

  • ಸಚಿವ ಎಂಟಿಬಿ ನಾಗರಾಜ್ – ಕೋಲಾರ

  • ಸಚಿವ ಮುರುಗೇಶ್ ನಿರಾಣಿ – ಕಲಬುರ್ಗಿ

  • ಸಚಿವ ಎಸ್ ಅಂಗಾರ – ಚಿಕ್ಕಮಗಳೂರು

No Comments

Leave A Comment