Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಕೋವಿಡ್-19: ಭಾರತಕ್ಕೆ ಅಮೆರಿಕಾದ ಮೊದಲ ತುರ್ತು ಕೊರೋನಾ ಪರಿಹಾರ ಸಾಮಾಗ್ರಿ ಆಗಮನ

ನವದೆಹಲಿ: ಕೋವಿಡ್‌–19 ಸೋಂಕಿನ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಅಮೆರಿಕಾ ರಾಷ್ಟ್ರವು ತುರ್ತು ಅವಶ್ಯಕತೆಯ ವಸ್ತುಗಳನ್ನು ವಿಮಾನದ ಮೂಲಕ ರವಾನೆ ಮಾಡಿದೆ.

ಅಮೆರಿಕಾದ ತುರ್ತು ಕೊರೋನಾ ಪರಿಹಾರ ಸಾಮಾಗ್ರಿಗಳನ್ನು ಹೊತ್ತ ಮೊದಲ ವಿಮಾನ ಶುಕ್ರವಾರ ಭಾರತಕ್ಕೆ ಆಗಮಿಸಿದೆ.

ಟ್ರಾವಿಸ್‌ ವಾಯುನೆಲೆಯಿಂದ ಪ್ರಯಾಣ ಆರಂಭಿಸಿದ್ದ ವಿಶ್ವದ ಬೃಹತ್‌ ಯುದ್ಧವಿಮಾನವು ರೂ.740 ಕೋಟಿ ಮೌಲ್ಯದ (100 ದಶಲಕ್ಷ ಡಾಲರ್‌) ಪರಿಹಾರ ಸಾಮಗ್ರಿಗಳನ್ನು ಹೊತ್ತು ಇಂದು ಬೆಳಿಗ್ಗೆ ಭಾರತಕ್ಕೆ ಬಂದಿಳಿದಿದೆ.

ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅಮೆರಿಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು, ‘ಅಮೆರಿಕದಿಂದ ಹಲವಾರು ತುರ್ತು ಕೋವಿಡ್‌ ಪರಿಹಾರ ಸಾಮಗ್ರಿಗಳನ್ನು ಹೊತ್ತ ಮೊದಲ ವಿಮಾನ ಭಾರತಕ್ಕೆ ಬಂದಿದೆ. 70 ವರ್ಷಗಳ ಸಹಕಾರವನ್ನು ಆಧರಿಸಿ ನಾವು (ಅಮೆರಿಕ) ಕೋವಿಡ್‌ ಪಿಡುಗಿನ ವಿರುದ್ಧ ಒಟ್ಟಾಗಿ ಹೋರಾಟ ನಡೆಸಲು ಭಾರತದೊಂದಿಗೆ ನಿಂತಿದ್ದೇವೆ’ ಎಂದು ಹೇಳಿದೆ.

ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು 2021ರ ಏಪ್ರಿಲ್ 26ರಂದು ವಾಗ್ದಾನ ಮಾಡಿದಂತೆ, ಅಮೆರಿಕವಾ ಯುಎಸ್ ಏಜೆನ್ಸಿ ಫಾರ್ ಇಂಟರ್ ನ್ಯಾಷನಲ್ ಡೆವಲಪ್ಮೆಂಟ್ ಮೂಲಕ, ಭಾರತೀಯರ ತುರ್ತು ಆರೋಗ್ಯ ಅಗತ್ಯಗಳಿಗೆ ಸ್ಪಂದಿಸಲು, ಜೀವಗಳನ್ನು ಉಳಿಸಲು ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ಸಹಾಯವನ್ನು ಕ್ಷಿಪ್ರವಾಗಿ ಕ್ರೋಢೀಕರಿಸುತ್ತಿದೆ ಎಂದು ಯು.ಎಸ್.ಏಜೆನ್ಸಿ ಫಾರ್ ಇಂಟರ್ ನ್ಯಾಷನಲ್ ಡೆವಲಪ್ಮೆಂಟ್ ತಿಳಿಸಿದೆ.

ಭಾರತದಲ್ಲಿ ಕೊರೋನಾ ವೈರಸ್ ಪರಿಸ್ಥಿತಿ ದಿನ ಕಳೆಯುತ್ತಿದಂತೆ ಭೀಕರವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಮೆರಿಕ, ಫ್ರಾನ್ಸ್‌, ರಷ್ಯಾ, ಜಪಾನ್‌ ಸೇರಿ ಸುಮಾರು 40 ದೇಶಗಳು ಭಾರತಕ್ಕೆ ನಾನಾ ರೀತಿಯ ವೈದ್ಯಕೀಯ ನೆರವು ನೀಡಲು ಮುಂದೆ ಬಂದಿವೆ. ಭಾರತ ಕೂಡ ಈ ನೆರವನ್ನು ಸ್ವೀಕರಿಸಲು ಒಪ್ಪಿಗೆ ನೀಡಿದ್ದು, 16 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನೆರವು ಸಾಮಾಗ್ರಿಗಳನ್ನು ಹೊತ್ತ ವಿಮಾನವೊಂದು ಅಮೆರಿಕಾದಿಂದ ಇಂದು ಭಾರತ ತಲುಪಿದೆ.

No Comments

Leave A Comment