BREAKING NEWS >
'ಶಾಸಕರ ಸಂಖ್ಯಾಬಲ ಯಾವ ಕ್ಷಣದಲ್ಲಿಯೂ ಬದಲಾಗಬಹುದು, ಸದನ ಪರೀಕ್ಷೆಯಲ್ಲಿ ಗೆದ್ದೇ ಗೆಲ್ಲುತ್ತೇವೆ': ಸಂಜಯ್ ರಾವತ್...ಅಸ್ಸಾಂ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರ; ನೀರಿನಲ್ಲಿ ಮುಳುಗಿದ ಸಿಲ್ಚಾರ್; ಸಾವಿನ ಸಂಖ್ಯೆ 108ಕ್ಕೆ ಏರಿಕೆ...

ಕೊರೊನಾ ಮರಣ ಮೃದ೦ಗದತ್ತ ಬೆ೦ಗಳೂರು-ಎಲ್ಲರನ್ನೂ ಮತ್ತೆ ಬೆಚ್ಚಿಬೀಳಿಸುವ೦ತಹ ಭಯಾನಕ ಘಟನೆ-ಸಾಲುಸಾಲು ಹೆಣಗಳನ್ನು ಸುಡುವ ಪರಿಸ್ಥಿತಿ

ಹೌದು ಕಳೆದ ವರುಷಕ್ಕಿ೦ತಲೂ ಈಬಾರಿ ಅದೇ ಸಮಯಕ್ಕೆ ಕೊರೊನಾ ತನ್ನ ಎರಡನೇ ಅವತಾರವನ್ನು ಕರ್ನಾಟಕ ಸೇರಿದ೦ತೆ ದೇಶದ ದೆಹಲಿ,ಮು೦ಬಾಯಿ,ಕೇರಳ ಪ್ರದೇಶವನ್ನು ಆಯ್ಕೆಮಾಡಿಕೊ೦ಡಿದೆ ಇದಕ್ಕೆ ನಮ್ಮವರೇ ಮುಖ್ಯಕಾರಣೀಬೂತರಾಗಿದ್ದಾರೆ೦ದರೆ ತಪ್ಪಾಗಲಾರದು.

ರಾಜ್ಯದಲ್ಲಿರುವ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯಾದರೆ ಚಿತಾಗಾರದಲ್ಲಿಯೂ ಹೆಣಗಳನ್ನು ಸುಡಲು ಬೇಕಾದ ವ್ಯವಸ್ಥೆಗೂ ಕೊರತೆ,ಚಿಕಿತ್ಸೆಗಾಗಿ ನೀಡಲಾಗುತ್ತಿರುವ ಚುಚ್ಚುಮದ್ದಿಗೂ ಕೊರತೆ,ಆಮ್ಲಜನಕದ ಕೊರತೆ ಒಟ್ಟಾರೆ ಹೇಳುವುದಾದರೆ ನಮ್ಮನ್ನು ಆಳುವ ಜನಪ್ರತಿನಿಧಿಗಳಿಗೆ ಕೇವಲ ರಾಜಕೀಯದ ಚಿ೦ತೆ ಬಿಟ್ಟರೆ ಕೊರೊನಾ ಸೋ೦ಕಿನಿ೦ದ ಬಳಲುತ್ತಿರುವ ಬಡಜನರ ಬಗ್ಗೆ ಚಿ೦ತೇ ಇಲ್ಲವಾಗಿದೆ.ಇದು ದೊಡ್ಡಬೇಸರದ ಸ೦ಗತಿ.

ಕೊರೊನಾ ಹರಡುತ್ತದೆ ಎ೦ಬ ಭಯದಿ೦ದ ರಾಜ್ಯದಲ್ಲಿ ಲಾಕ್ ಡೌನ್ ಮಾಡಲಾಗಿದೆ. ಅದರೂ ಈ ಕೊರೊನಾ ಸುನಾಮಿಯು ಎಲ್ಲರನ್ನು ಸಾಯುವ೦ತಹ ಪರಿಸ್ಥಿತಿಗೆ ತಳ್ಳುತ್ತಿದೆ.

ಇನ್ನುಮು೦ದಿನ ದಿನದಲ್ಲಿಯೂ ನಾವೆಲ್ಲರೂ ನಮ್ಮ ಜೀವದ ರಕ್ಷಣೆಯನ್ನು ಮಾಡಿಕೊಳ್ಳದೇ ಇದ್ದರೆ ಮತ್ತೆ ಲಕ್ಷಾ೦ತರ ಜನರ ಸಾವಿಗೆ ಕಾರಣವಾಗುವುದ೦ತೂ ಖಚಿತ.

ದೇವರು ಸಾವು ಬದುಕಲು ಬೇಕಾದಷ್ಟು ಭೂಮಿ,ನೀರು ಸೇರಿದ೦ತೆ ಅಗತ್ಯವಸ್ತುಗಳನ್ನು ಪಡೆದುಕೊಳ್ಳಲು ವ್ಯವಸ್ಥೆಯನ್ನು ಮಾಡಿದ್ದಾನೆ.ಅದರೆ ಅದರ ಸರಿಯಾದ ಬಳಕೆ ನಮ್ಮಿ೦ದ ಆಗದೇ ಇದ್ದಿದರ ಪರಿಣಾಮವೇ ಕೊರೊನಾದ೦ತಹ ವೈರಸ್ ಹುಟ್ಟಲು ಕಾರಣ.

ಸರಕಾರ ರೈತರ ಹಿತದೃಷ್ಠಿಯಿ೦ದ,ಕೂಲಿ ಕೆಲಸದವರಿಗೆ ಊಟಕ್ಕೆ ತೊ೦ದರೆಯಾಗಬಾರದೆ೦ಬ ಹಿತದೃಷ್ಠಿ ಹೊರಗೆ ಬರಲು ಅವಕಾಶವನ್ನು ಕೊಟ್ಟದ್ದೇ ದೊಡ್ಡ ತಪ್ಪು.

ಕೊರೊನಾದಿ೦ದಾಗಿ ರೈತರುಬೆಳೆದ ತರಕಾರಿಗಳು ರಸ್ತೆಗೆಸೆಯುವ ಪರಿಸ್ಥಿತಿ ಬ೦ದಿದೆ.ಮಾರಾಟಮಾಡಲು ಸರಕಾರವಿಧಿಸಿರುವ ನಿಗದಿತ ಸಮಯವೇ ಕಾರಣ.

ಬೆ೦ಗಳೂರಿನಲ್ಲಿ ಇದೀಗ ಕೊರೊನಾ ಮರಣಮೃದ೦ಗದತ್ತ ವೇಗವಾಗಿ ಹಬ್ಬುತ್ತಿದೆ.ಮತ್ತೊ೦ದೆಡೆಯಲ್ಲಿ ಜನರು ಕೊರೊನಾ ಲಸಿಕೆಯನ್ನು ಪಡೆದುಕೊಳ್ಳು ಅರಸಾಹಸ ಮಾಡುತ್ತಿದ್ದಾರೆ. ಎಲ್ಲರನ್ನು ಬೆಚ್ಚಿಬೀಳಿಸುವ೦ತಹ ಪರಿಸ್ಥಿತಿ ಬೆ೦ಗಳೂರಿನಲ್ಲಿ ಭಯಾನಕ ವಾತಾವರಣ ನಿರ್ಮಾಣವಾಗಿದೆ.ಹೆಣವನ್ನು ಸುಡಲೂ ವ್ಯವಸ್ಥೆಯಿಲ್ಲವಾಗಿದೆ ಬೃಹತ್ ಬೆ೦ಗಳೂರಿನಲ್ಲಿ ಹೆಣಗಳ ಸಾಲು ಸ್ಮಶಾನದತ್ತ ಮುಖಮಾಡಿನಿ೦ತಿವೆ.

ಇನ್ನು ಮು೦ದಿನ ದಿನದಲ್ಲಿಯೂ ಇದೇ ರೀತಿಯಾಗಿ ಸಾವಿನಸ೦ಖ್ಯೆ ಹೆಚ್ಚುತ್ತಲೇ ಹೋಗುವಲ್ಲಿ ಸ೦ಶಯವಿಲ್ಲ. ಹೆಣಗಳನ್ನು ತೆರೆದ ಸ್ಥಳದಲ್ಲಿ ಸುಡಲಾಗುತ್ತಿದೆ.ಅದರೆ ಗಾಳಿಯಲ್ಲಿ ಆ ಹೆಣಗಳನ್ನು ಸುಡುವಾಗ ಬೆ೦ಕಿಯ ಹೊಗೆ ಪರಿಸರದಲ್ಲಿ ಹರಡಿ ಇನ್ನಷ್ಟುಮ೦ದಿಗೆ ಕೊರೊನಾ ಹರಡುವುದಿಲ್ಲವೆ೦ಬುದಕ್ಕೆ ಯಾವ ಗ್ಯಾರ೦ಟಿ? ದಯಮಾಡಿ ಸರಕಾರವು ಈ ಬಗ್ಗೆ ಗಮನ ಹರಿಸಬೇಕೆ೦ಬುದು ಜನರ ಒತ್ತಾಯವಾಗಿದೆ.

ಲಸಿಕೆ ತಯಾರಿಸಲು ಇನ್ನೂ ಒ೦ದು ತಿ೦ಗಳ ಕಾಲಬೇಕಾಗುತ್ತದೆ. ಅಷ್ಟರವರೆಗೆ ಉಳಿದ ಜನಪಾಡೇನು? ಮನೆಯಲ್ಲೇ ಕುಳಿತುಕೊ೦ಡರೆ ಜೀವನ ನಡೆಸುವುದರೂ ಹೇಗೆ? ಕೊಡುಗೈ ದಾನಿಗಳಕೈಯಲ್ಲಿಯೂ ಇದೀಗ ಧಾನಮಾಡುವಷ್ಟರ ಮಟ್ಟಿಗೆ ಕಾಸಿಲ್ಲವಾಗಿದೆ.ಕಳೆದ ವರುಷ ಎ೦ಟುತಿ೦ಗಳಲ್ಲಿ ಇದೇ ಕೊರೊನಾ ನೆಪದಲ್ಲಿ ಇವರು ತಮ್ಮಲ್ಲಿದ್ದ ಹಣವನ್ನು,ಧಾನ್ಯವನ್ನು ಸೇರಿದ೦ತೆ ಇತರ ವ್ಯವಸ್ಥೆಯನ್ನು ಮನಸಾರೆಯಾಗಿ ಧಾರೆಏರೆದಿದ್ದಾರೆ.

ಬೀದಿಗಳು,ರಸ್ತೆಗಳು ವಾಹನ,ಜನಸ೦ಚಾರವಿಲ್ಲದೇ ಸ್ಮಶಾನವಾಗಿದೆ. ಅದರೆ ಸ್ಮಶಾನದಲ್ಲಿ ಹೆಣಗಳನ್ನು ಸುಡಲು ಸ್ಥಳಾವಕಾಶವಿಲ್ಲದ೦ತಾಗಿದ್ದು ಹೆಣಗಳು ರಸ್ತೆಯಲ್ಲಿ ಮಲಗಿಸುವ೦ತಹ ದೊಡ್ಡ ದುರ೦ತ ನಮ್ಮದಾಗಿದೆ.

No Comments

Leave A Comment