Log In
BREAKING NEWS >
ಸೋಮವಾರದಿ೦ದ ಚಿನ್ನಾಭರಣದ ಅ೦ಗಡಿ ಅಲ್ ಲಾಕ್ -ಚಿನ್ನ ಖರೀದಿಸಲೊ೦ದು ಅವಕಾಶ...

ಕಲ್ಸಂಕ ನಿವಾಸಿ ಭಾರತ್ ಪ್ರೆಸ್ ಮಾಲಕ ತೋನ್ಸೆ ದೇವದಾಸ ಪೈ ನಿಧನ

ಉಡುಪಿ: ಇಲ್ಲಿನ ಕಲ್ಸಂಕ ನಿವಾಸಿ, ಭಾರತ್ ಪ್ರೆಸ್ ಮಾಲಕ ಟಿ. ದೇವದಾಸ ಪೈ ಗುರುವಾರ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಮೃತರು ಓರ್ವ ಪುತ್ರ ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ.

ಆರ್.ಎಸ್.ಎಸ್ ಧುರೀಣರಾಗಿದ್ದ ಅವರು, ಜನಸಂಘದಿಂದ ಸ್ಪರ್ಧಿಸಿ ಉಡುಪಿ ಪುರಸಭೆಯ ಮೊದಲ ಅವಧಿಗೆ ಸದಸ್ಯರಾಗಿ ಆಯ್ಕೆಯಾಗಿದ್ದ ದೇವದಾಸ ಪೈ, ಸಾಮಾಜಿಕ ಹಾಗೂ ಧಾರ್ಮಿಕ ಹಿತಚಿಂತಕರಾಗಿದ್ದರು. ಶ್ರೀ ಮಹಾಲಸಾ ನಾರಾಯಣ ದೇವಸ್ಥಾನ ಪೋಂಡ್ ಗೋವಾ, ಶ್ರೀ ವೀರವಿಠಲ ದೇವಸ್ಥಾನ ಭದ್ರಗಿರಿ, ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನ ಶಿರ್ವ, ಶ್ರೀ ವೆಂಕಟರಮಣ ದೇವಸ್ಥಾನ ಕಲ್ಯಾಣಪುರ, ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನ ಬಸ್ರೂರು ಹಾಗೂ ಉಡುಪಿ ಶ್ರೀ ನಿತ್ಯಾನಂದಸ್ವಾಮಿ ಮಠ ಆಡಳಿತ ಮಂಡಳಿ ಸದಸ್ಯರಾಗಿ ಹಲವು ವರ್ಷ ಕಾಲ ಸೇವೆ ಸಲ್ಲಿಸಿದ್ದರು.

ಕಡಿಯಾಳಿಯ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸ್ಥಾಪಕ ಸದಸ್ಯರಾಗಿದ್ದರು. ಜಿ.ಎಸ್.ಬಿ ಸಮಾಜ ಹಾಗೂ ವಿವಿಧ ಸಂಘ ಸಂಸ್ಥೆಗಳ ಗೌರವಗಳಿಗೆ ಪಾತ್ರರಾಗಿದ್ದರು.

ಸಂತಾಪ
ತೋನ್ಸೆ ದೇವದಾಸ ಪೈ ನಿಧನಕ್ಕೆ ಶಾಸಕ ರಘುಪತಿ ಭಟ್, ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

No Comments

Leave A Comment