Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಸ್ಯಾಂಡಲ್ ವುಡ್ ಮೇಕಪ್‌ ಸೀನಣ್ಣ ಕೊರೋನಾಗೆ ಬಲಿ

ಸ್ಯಾಂಡಲ್ ವುಡ್ ನಲ್ಲಿ ಮೇಕಪ್‌ ಸೀನಣ್ಣ ಎಂದೇ ಗುರುತಿಸಿಕೊಂಡಿದ್ದ ಖ್ಯಾತ ಪ್ರಸಾಧನ ಕಲಾವಿದ ಶ್ರೀನಿವಾಸ್‌ ಕೊರೋನಾಗೆ ಬಲಿಯಾಗಿದ್ದಾರೆ.

ಜ್ವರದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ಸಮಸ್ಯೆ ತೀವ್ರವಾಗಿ ಬುಧವಾರ ಬೆಳಗ್ಗೆ ಅವರು ಮೃತಪಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಳೆದ 25 ವರ್ಷಗಳಿಂದ ಮೇಕಪ್‌ಮ್ಯಾನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀನಿವಾಸ್‌ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಲವು ಸ್ಟಾರ್‌ ನಟರಿಗೆ ಬಣ್ಣ ಹಚ್ಚಿದ್ದಾರೆ.

ಪ್ರಸ್ತುತ ವರ್ಣಾಲಂಕಾರ ಹಾಗೂ ಕೇಶಾಲಂಕಾರ ಕಲಾವಿದ ಸಂಘದ ಉಪಾಧ್ಯಕ್ಷರಾಗಿದ್ದರು. ನಟ ಪುನೀತ್‌ ರಾಜ್‌ಕುಮಾರ್‌ ನಟಿಸುತ್ತಿರುವ ‘ಜೇಮ್ಸ್‌’ನಲ್ಲೂ ಶ್ರೀನಿವಾಸ್‌ ಕಾರ್ಯನಿರ್ವಹಿಸುತ್ತಿದ್ದರು. ಮೇಕಪ್ ಸೀನಣ್ಣ ಅವರ ನಿಧನಕ್ಕೆ ಹಲವು ನಟ, ನಿರ್ದೇಶಕರು ಸಂತಾಪ ಸೂಚಿಸಿದ್ದಾರೆ.

No Comments

Leave A Comment