Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಬೆಂಗಳೂರಿನಲ್ಲಿರುವ ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಸೇರಿ 7 ಮಂದಿ ಆಟಗಾರ್ತಿಯರಿಗೆ ಕೊರೋನಾ!

ಬೆಂಗಳೂರು: ತರಬೇತಿ ನಿಮಿತ್ತ ಬೆಂಗಳೂರಿನಲ್ಲಿರುವ ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಸೇರಿದಂತೆ ಏಳು ಮಂದಿ ಆಟಗಾರ್ತಿಯರ ಕೊರೋನಾ ಸೋಂಕು ಒಕ್ಕರಿಸಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಸೇರಿದಂತೆ ಏಳು ಮಂದಿ ಆಟಗಾರ್ತಿಯರಲ್ಲಿ ಸೋಮವಾರ ಕೋವಿಡ್‌-19 ದೃಢಪಟ್ಟಿದೆ. ಸೋಂಕಿತರಲ್ಲಿ ಇಬ್ಬರು ನೆರವು  ಸಿಬ್ಬಂದಿಯೂ ಕೂಡ ಸೇರಿದ್ದಾರೆ ಎಂದು ತಿಳಿದುಬಂದಿದೆ.

ಸೋಂಕಿತರಲ್ಲಿ ರೋಗ ಲಕ್ಷಣಗಳಿಲ್ಲವಾದರೂ, ಅವರನ್ನು ತೀವ್ರ ನಿಗಾದಲ್ಲಿರಿಸಲಾಗಿದೆ. ಸಾಯ್ ಕೇಂದ್ರದಲ್ಲೇ ಅವರನ್ನು ವಿಶೇಷ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗಿದೆ.  ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಾಯ್, ‘ತಮ್ಮ ತವರು ರಾಜ್ಯಗಳಿಂದ ಇಲ್ಲಿಗೆ ಬಂದ ಆಟಗಾರ್ತಿಯರನ್ನು, ಕ್ವಾರಂಟೈನ್ ಮಾಡಿದ ಬಳಿಕ  ಏಪ್ರಿಲ್ 24ರಂದು ನಿಯಮಗಳ ಅನ್ವಯ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು’ ಎಂದು ಸಾಯ್‌ ಹೇಳಿಕೆಯಲ್ಲಿ ತಿಳಿಸಿದೆ.

ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಸೇರಿದಂತೆ ಸಹ ಆಟಗಾರ್ತಿಯರಾದ ಸವಿತಾ ಪುನಿಯಾ, ಶರ್ಮಿಳಾ ದೇವಿ, ರಜನಿ, ನವಜೋತ್ ಕೌರ್‌, ನವನೀತ್ ಕೌರ್‌ ಹಾಗೂ ಸುಶೀಲಾ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅಲ್ಲದೆ ವಿಡಿಯೊ ಅನಾಲಿಸ್ಟ್‌ ಅಮೃತಾ ಪ್ರಕಾಶ್‌ ಮತ್ತು ವೈಜ್ಞಾನಿಕ ಸಲಹೆಗಾರ್ತಿ  ವೇಯ್ನ್‌ ಲೊಂಬಾರ್ಡ್‌ ಕೂಡ ಕೊರೊನಾ ಸೋಂಕು ಒಕ್ಕರಿಸಿದೆ.

ಭಾರತ ಮಹಿಳಾ ತಂಡವು ಟೋಕಿಯೊ ಒಲಿಂಪಿಕ್ಸ್ ಸಿದ್ದತೆಗಾಗಿ ಕಳೆದ ಭಾನುವಾರ ಬೆಂಗಳೂರಿಗೆ ಆಗಮಿಸಿತ್ತು. ಜನವರಿಯಲ್ಲಿ ಭಾರತ ಮಹಿಳಾ ಹಾಕಿ ತಂಡವು ಅರ್ಜೆಂಟೀನಾದಲ್ಲಿ ಪ್ರವಾಸ ಮಾಡಿ ಅಲ್ಲಿ ಏಳು ಪಂದ್ಯಗಳನ್ನು ಆಡಿತ್ತು. ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ ಜರ್ಮನಿ ಪ್ರವಾಸದಲ್ಲಿ, ಭಾರತೀಯ ಮಹಿಳಾ  ತಂಡವು ವಿಶ್ವದ ನಾಲ್ಕನೇ ಕ್ರಮಾಂಕದ ವಿರುದ್ಧದ ಎಲ್ಲಾ ನಾಲ್ಕು ಪಂದ್ಯಗಳನ್ನು ಸೋತಿತ್ತು.

No Comments

Leave A Comment