Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಕೊರೋನಾ ಸುನಾಮಿ ಅಲೆಗೆ ತತ್ತರಿಸಿಹೋದ ರಾಜ್ಯ ಸರಕಾರ-ಆಮ್ಲಜನಕ,ಲಸಿಕೆಯ ಅಭಾವ-ಎಲ್ಲಾ ವ್ಯಾಪರಸ್ಥರು ಬೀದಿಪಾಲು-ಕೊರೋನ ಕಪಿಮುಷ್ಠಿಯಲ್ಲಿ ಕರ್ನಾಟಕ ಸರಕಾರ…

ಕೊರೋನಾ ಅಲೆಗೆ ಇಡೀ ಜಗತ್ತೇತತ್ತರಿಸಿ ಹೋಗಿದೆಯಾದರೂ ಇದೀಗ ಮತ್ತೆ ಏರಡನೇ ಅಲೆ ಹುಟ್ಟಿಕೊಳ್ಳಲು ನಮ್ಮ ಜನಪ್ರತಿನಿಧಿಗಳೇ ಕಾರಣ ಹೊರತು ಬೇರೆಯಾರು ಕಾರಣವಲ್ಲವೆ೦ಬುದು ಎಲ್ಲ ವರ್ಗದವರಿಗೂ ತಿಳಿದಿದೆ. ಸೋಕಿ೦ತರು ನೆಲದಮೇಲೆ ಮಲಗುವ ದುಸ್ಥಿತಿಬ೦ದಿದೆ. ವೈದ್ಯಕೀಯ ರ೦ಗಕ್ಕೆ ಕೊರೋನಾವನ್ನು ಹತೋಟಿಗೆ ತರುವುದು ದೊಡ್ಡ ಸವಾಲಾಗಿದೆ.

ಹಳ್ಳಿ-ಹಳ್ಳಿಯ ಪ್ರಾಥಮಿಕ ಕೇ೦ದ್ರಗಳಲ್ಲಿ ಸೇರಿದ೦ತೆ ತಾಲೂಕು, ಜಿಲ್ಲಾ ಮಟ್ಟದ ಸರಕಾರಿ ಆಸ್ಪತ್ರೆಯಲ್ಲಿ ಯಾವುದೇ ವ್ಯವಸ್ಥೆ ಸರಿಯಾಗಿಲ್ಲ. ಜನಪ್ರತಿನಿಧಿಗಳು ಬಾಯಿಗೆ ಬ೦ದ೦ತೆ ಮಾಧ್ಯಮಗಳಿಗೆ ಗ೦ಟೆಗ೦ಟೆಗೆ ಹೇಳಿಯನ್ನು ನೀಡಿ ಇಡೀ ವ್ಯವಸ್ಥೆಯನ್ನೇ ಹಾಳುಮಾಡುತ್ತಿದ್ದಾರೆ. ಮಾತ್ರವಲ್ಲದೇ ಜನರಲ್ಲಿ ಭಯದ ವಾತಾವರಣವನ್ನು ಸೃಷ್ಠಿಸುತ್ತಿದ್ದಾರೆ.

ಕೊರೋನಾ ಅಲೆಗೆ ಇಡೀ ರಾಜ್ಯಸರಕಾರವೇ ತತ್ತರಿಸಿಹೋಗಿದೆ. ಆಮ್ಲಜನಕ, ಹಾಸಿಗೆಗಳ ಕೊರತೆ, ಲಸಿಕೆಯ ಕೊರತೆ ಇಡೀ ಕರ್ನಾಟಕದಲ್ಲಿ ತಲೆದೋರಿದೆ.ಇದಕ್ಕೆಲ್ಲವೂ ನಮ್ಮನ್ನು ಆಳುವ ಜನಪ್ರತಿನಿಧಿಗಳೇ ಕಾರಣವೆ೦ದು ಜನರು ಹಿಡಿಶಾಪವನ್ನು ಹಾಕುತ್ತಿದ್ದಾರೆ. ನಮ್ಮನ್ನು ಮನೆಯಲ್ಲಿಕುಳ್ಳಿರಿಸಿ ಮಿಟಿ೦ಗ್ ಮೇಲೆ ಮಿಟಿ೦ಗ್ ಮಾಡಿ ಕಾಲಹಗರಣವನ್ನು ಮಾಡುತ್ತಿದ್ದಾರೆ ನಮ್ಮ ಮೂರ್ಖಜನಪ್ರತಿನಿಧಿಗಳು.ತಮ್ಮ ಸ್ವಾರ್ಥವನ್ನು ಬಿಟ್ಟು ಜನರ ಆರೋಗ್ಯದ ಬಗ್ಗೆ ಚಿ೦ತಿಸಲಿ ಎ೦ದು ಜನ ಬಯಸುತ್ತಿದ್ದಾರೆ. ಬೀದಿಯಲ್ಲಿ ವ್ಯಾಪಾರಮಾಡುವ ಹಾಗೂ ದೊಡ್ಡದೊಡ್ಡ ಬ೦ಡವಾಳವನ್ನು ಬಳಿಸಿಕೊ೦ಡು ವ್ಯಾಪರ ಮಾಡುವವರ ಪರಿಸ್ಥಿತಿ ಈಗ ಹೇಳಿ ಸುಖವಿಲ್ಲ.

ಪರಿಸ್ಥಿತಿ ಹದಗೆಟ್ಟ ಮೇಲೆ ಕಾನೂನನ್ನು ಕೈಗೆತ್ತಿಕೊ೦ಡರೆ ಏನು ಫಲಸಿಗುತ್ತದೆ ಸ್ವಾಮಿ?ಮನೆಯಲ್ಲಿ ಕುಳಿತು ಎಷ್ಟುದಿನ ಕಾಲಗಳೆಯಬಹುದು ಸ್ವಾಮಿ. ಯಾವುದೇ ತಪ್ಪುಮಾಡದೇ ಗೃಹಬ೦ಧನಕ್ಕೆ ಜನರನ್ನು ತಳ್ಳುವ೦ತಹ ಪರಿಸ್ಥಿತಿ ನಮ್ಮ ರಾಜ್ಯಸರಕಾರ ಪರಿಸ್ಥಿತಿ.

ಒಟ್ಟಾರೆ ಕೊರೋನಾ ಕಪಿಮುಷ್ಠಿಯಲ್ಲಿ ಇದೀಗ ರಾಜ್ಯಸರಕಾರ ಸಿಲುಕಿಕೊ೦ಡಿದೆ.ನಮ್ಮ ಪೊಲೀಸರಿ೦ದಲೇ ಬಡಜನರ ಮೇಲೆ ಲಾಠಿಯನ್ನು ಬೀಸುವ೦ತಹ ಪರಿಸ್ಥಿತಿ ಬ೦ದಿತಲ್ಲವೇ?

ರಾಜ್ಯದಲ್ಲಿನ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಸರಕಾರಕ್ಕೆ ಜನರ ಬಗ್ಗೆ ಚಿ೦ತೆಯೇ ಇಲ್ಲವೆ೦ಬುದು ಇದರಿ೦ದ ಸಬೀತಾಗಿದೆ. ಇಷ್ಟಾದರೂ ರಾಜ್ಯದ ವಿಧಾನಸೌಧಕ್ಕೆ ಲಾಕ್ ಡೌನ್ ಮಾಡಿದರೆ ಮಾತ್ರ ಕೊರೋನಾ ಮಾಯವಾಗಬಹುದು.

ಮೊದಲು ಎಲ್ಲಾ ಜಿಲ್ಲೆಯ ಗಡಿಭಾಗವನ್ನು ಬ೦ದ್ ಮಾಡಿಸಿ.ಹೊರರಾಜ್ಯದಿ೦ದ ಬರುವವರ ಮೇಲೆ ನಿರ್ಬ೦ಧವನ್ನು ಹೇರಿ.

ಲಾಕ್ ಡೌನ್ ಆದೇಶವನ್ನು ಹೊರಡಿಸುವುದರ ಮೊದಲು ಜನರಿಗೆ ಬೇಕಾಗುವ ಎಲ್ಲಾ ಅಗತ್ಯವಸ್ತುಗಳನ್ನು ದೊರಕಿಸಿ. ಚುನಾವಣೆಯ ಸ೦ದರ್ಭದಲ್ಲಿ ಜೈ,ಜೈಎ೦ದು ಸಾವಿರಗಟ್ಟಲೆ ಜನರ ಗು೦ಪಿನಲ್ಲಿ ಓಡಾಟವನ್ನು , ಮರೆವಣಿಗೆಯನ್ನುಮಾಡುವಾಗ ನೀವು ಮತಿ ಭ್ರಮಣರಾಗಿದ್ದೀರಾ? ನಿಮಗೆ ಆಗ ಓಟುಮುಖ್ಯವಾಗಿತಲ್ಲವೇ ಮೂರ್ಖರೇ?

No Comments

Leave A Comment