Log In
BREAKING NEWS >
ಯಶಸ್ವಿಯಾಗಿ ಮುಗಿದ ಎಸ್ಎಸ್ಎಲ್ ಸಿ ಪರೀಕ್ಷೆ: ಆಗಸ್ಟ್ 10 ರಂದು ಫಲಿತಾಂಶ.....ಆಗಸ್ಟ್‌ 29ರಂದು ಆಯೋಧ್ಯೆಯ ರಾಮ ಲಲ್ಲಾಗೆ ರಾಷ್ಟ್ರಪತಿಗಳಿಂದ ಪೂಜೆ...

ಆರ್ಚರಿ ವಿಶ್ವಕಪ್: ಭಾರತೀಯ ಮಹಿಳಾ ತಂಡಕ್ಕೆ ಸ್ವರ್ಣ ಪದಕ

ಗ್ವಾಟೆಮಾಲಾ: ಗ್ವಾಟೆಮಾಲಾದಲ್ಲಿ ಭಾನುವಾರ ನಡೆದ ಅರ್ಚರಿ ವಿಶ್ವಕಪ್‌ನಲ್ಲಿ ದೀಪಿಕಾ ಕುಮಾರಿ, ಅಂಕಿತಾ ಭಕತ್, ಕೋಮಲಿಕಾ ಬಾರಿ ಸೇರಿದಂತೆ ಭಾರತದ ಮಹಿಳಾ ರಿಚ್ಯೂರ್ವ್ ತಂಡ ಚಿನ್ನದ ಪದಕ ಗೆದ್ದಿದೆ.

ಫೈನಲ್‌ನಲ್ಲಿ ಭಾರತ ತಂಡ 5-4 (27-26) ಅಂಕಗಳಿಂದ ಜಯಿಸಿ ದೇಶಕ್ಕೆ ಚಿನ್ನದ ಪದಕ ದಕ್ಕುವಂತೆ ಮಾಡಿದೆ. ಇದಕ್ಕಾಗಿ ಭಾರತೀಯ ತಂಡ ತಮ್ಮ ಮೆಕ್ಸಿಕನ್ ಪ್ರತಿಸ್ಪರ್ಧಿಗಳನ್ನು ಒಂದು ಪಾಯಿಂಟ್‌ನಿಂದ ಮಣಿಸಿದ್ದಾರೆ.

ಇದರೊಡನೆ ಏಳು ವರ್ಷದ ಬಳಿಕ ತಮ್ಮ ಮೊದಲ ವಿಶ್ವಕಪ್ ಟೀಂ ಗೋಲ್ಡ್ ಜಯಿಸಿದಂತಾಗಿದೆ. . ಇದು ದೀಪಿಕಾ ಅವರ ಐದನೇ ವಿಶ್ವಕಪ್ ಟೀಂ ಈವೆಂಟ್ ಚಿನ್ನದ ಪದಕವಾಗಿದೆ.  ಈ ಹಿಂದೆ ಶಾಂಘೈ- 2011, ಮೆಡೆಲಿನ್ -2013, ರೊಕ್ಲಾ -2013 ಮತ್ತು 2014 ರಲ್ಲಿ ಸ್ವರ್ಣ ಪದಕ ಗಳಿಸಿದ್ದರು.

ಮತ್ತೊಂದು ಪಂದ್ಯದಲ್ಲಿ, ಅಟಾನು ದಾಸ್ ಮತ್ತು ಅಂಕಿತಾ ಭಕತ್ ಅವರನ್ನೊಳಗೊಂಡ ಮಿಶ್ರ ರಿಚ್ಯೂರ್ವ್ ತಂಡ ಯುಎಸ್ಎ ವಿರುದ್ಧ 6-2 ಅಂತರದ ಜಯದ ನಂತರ ಕಂಚಿನ ಪದಕ ಗೆದ್ದಿದೆ.

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಭಾರತಕ್ಕೆ ಏಳು ಚಿನ್ನದ ಪದಕ

ಪೋಲೆಂಡ್‌ನ ಕೀಲ್ಸ್‌ನಲ್ಲಿ ನಡೆದ ಇಬಾ ಯೂತ್ ಪುರುಷರ ಮತ್ತು ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ಬಾಕ್ಸರ್ ಅಲ್ಫಿಯಾ ಪಠಾಣ್ (81 ಕೆಜಿ) ಅದ್ಭುತ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದಿದ್ದಾರೆ. ಪಂದ್ಯಾವಳಿಯಲ್ಲಿ ಇದು ಭಾರತದ ಸತತ ಏಳನೇ ಚಿನ್ನದ ಪದಕವಾಗಿದೆ. ಮಹಿಳಾ ವಿಭಾಗದಲ್ಲಿ ಭಾರತ ಏಳು ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.

ಫೈನಲ್‌ನಲ್ಲಿ ಮೊಲ್ಡೊವಾ ಅವರ ಡೇರಿಯಾ ಕೊಜೊರೊವ್‌ರನ್ನು 5–0ರಿಂದ ಏಕಪಕ್ಷೀಯವಾಗಿ ಸೋಲಿಸುವ ಮೂಲಕ ಅಲ್ಫಿಯಾ ಪಠಾಣ್ (81 ಕೆಜಿ) ಚಿನ್ನ ಗೆದ್ದರು.ಇದು ಪಂದ್ಯಾವಳಿಯಲ್ಲಿ ಸತತ ಏಳನೇ ಚಿನ್ನದ ಪದಕವಾಗಿದೆ. ಯುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಇದು ಭಾರತದ ಅತ್ಯುತ್ತಮ ಮತ್ತು ಐತಿಹಾಸಿಕ ಪ್ರದರ್ಶನವಾಗಿದೆ. ಗುವಾಹಟಿಯಲ್ಲಿ ನಡೆದ 2017 ರ ಯುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಈ ಹಿಂದೆ ಐದು ಚಿನ್ನದ ಪದಕಗಳನ್ನು ಗೆದ್ದಿತ್ತು.

ಇದಕ್ಕೂ ಮೊದಲು ಅರುಂಧತಿ ಚೌಧರಿ (69 ಕೆಜಿ), ವಿಂಕಾ (60 ಕೆಜಿ), ವರ್ಷದ ಏಷ್ಯನ್ ಯುವ ಚಾಂಪಿಯನ್ ಬಾಬಿರೋಜಿಸಾನ ಚಾನು (51 ಕೆಜಿ), ಪೂನಂ (57 ಕೆಜಿ) ಮತ್ತು ಗೀತಿಕಾ (48 ಕೆಜಿ) ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

No Comments

Leave A Comment