Log In
BREAKING NEWS >
ಮಂಗಳೂರು ಕಡಲ ತೀರದಲ್ಲಿ ಟೌಕ್ಟೇ ಚಂಡಮಾರುತ ಅಬ್ಬರಕ್ಕೆ ಸಿಲುಕಿದ್ದ 9 ಮಂದಿಯ ರಕ್ಷಣೆ: ನೌಕಾಪಡೆ ಸಿಬ್ಬಂದಿಗೆ ಮುಖ್ಯಮಂತ್ರಿ ಧನ್ಯವಾದ...

ಹೋಟೆಲ್ ಕಟ್ಟಡದಲ್ಲಿ ಬೆಂಕಿ ಅವಘಡ : ಅಗ್ನಿಶಾಮಕ ದಳದಿಂದ ಬೆಂಕಿ ಕಾರ್ಯಚರಣೆ

ಮಣಿಪಾಲ : ಉಡುಪಿ ಜಿಲ್ಲೆಯ ಮಣಿಪಾಲದ ಆಶ್ಲೇಶ್ ಹೋಟೆಲ್ ಕಟ್ಟಡದಲ್ಲಿ ಬೆಂಕಿ ಅವಘಡ ಇಂದು ರಾತ್ರಿ ನಡೆದಿದೆ.ಆಶ್ಲೇಶ್ ಹೋಟೆಲ್ ಕಟ್ಟಡದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದೆ ಎನ್ನಲಾಗಿದೆ.

ಕಟ್ಟಡ ದಲ್ಲಿದ್ದ ಗೋಡೌನ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,ಸ್ಥಳದಲ್ಲಿ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ.

ಮುಂಜಾಗ್ರತೆಯಾಗಿ ಪರಿಸರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.ಎರಡು ಬೆಂಕಿ ನಂದಿಸುವ ಯಂತ್ರಗಳಿಂದ ಕಾರ್ಯಾಚರಣೆ ಮುಂದುವರಿದಿದೆ.ಅಂಗಡಿಯಲ್ಲಿ ಪಟಾಕಿ, ಡಿಯೋಡ್ರೆಂಟ್ ಗ್ಯಾಸ್‌ ಮುಂತಾದ ಸಾಮಾಗ್ರಿ‌ ಇದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಸ್ಪೋಟದಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ.

No Comments

Leave A Comment