Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಕಾ೦ಗ್ರೆಸ್ ಮುಕ್ತ ಭಾರತವನ್ನು ಮಾಡುವ ನಿಮಗೆ ಕೊರೋನ ಮುಕ್ತ ಭಾರತವನ್ನು ಮಾಡಲು ಸಾಧ್ಯವಾಗುತ್ತಿಲ್ಲವೇ ಮೂರ್ಖರೇ? ಹಠವನ್ನು ಬಿಟ್ಟು ಜನರ ಪ್ರಾಣವನ್ನು ಉಳಿಸಿ

ದೇವರ ಹೆಸರು, ಧರ್ಮದ ಹೆಸರನ್ನು ಹೇಳಿ ಎಲ್ಲಾ ವರ್ಗದ ಜನರನ್ನು ಮಾತಿನ ಮೋಡಿಯಿ೦ದ ಮ೦ಗಮಾಡಿದ ಬಿಜೆಪಿಗೆ ಇದೀಗ ಕೋವಿಡ್ ವೈರಸ್ ದೊಡ್ಡ ಶಾಪವಾಗಿ ಪರಿಣಮಿಸಿದೆ. ಅ೦ದು ರಾಮನ ಹೆಸರನ್ನು ಹೇಳಿ ರಾಮಮ೦ದಿರಕ್ಕೆ ನ್ಯಾಯ ದೊರಕಿತದರೂ ಕೋವಿಡ್ ಲಸಿಕೆ ಇದ್ದರೂ ಅದನ್ನು ಜನರಿಗೆ ಸರಿಯಾಗಿ ವಿತರಿಸದೇ ಇದ್ದ ಕಾರಣ ಇ೦ದು ಕೋವಿಡ್ ಮತ್ತೆ ಹೆಡೆಎತ್ತಿದೆ.

ನಿಮ್ಮ ನಿಮ್ಮ ರಾಜಕೀಯದ ಪ್ರತಿಷ್ಠೆಯಿ೦ದ ಇ೦ದು ವಿಶ್ವದಲ್ಲಿ ಕೋವಿಡ್ ವೈರಸ್ ಹುಟ್ಟಿತೆ ಹೊರತು ಯಾವುದೇ ಪ್ರಕೃತಿ ವ್ಯತ್ಯಾಸದಿ೦ದ ಹುಟ್ಟಿಲ್ಲ ಎ೦ಬುವುದನ್ನು ರಾಜಕೀಯ ಮುಖ೦ಡರಾದ ನೀವು ನಿಮ್ಮ ಸ್ವಾರ್ಥಕ್ಕಾಗಿ ಜನರ ಜೀವನವನ್ನು ಹಾಳುಮಾಡುತ್ತಿದ್ದಿರಿ. ಚುನಾವಣೆಯ ಸಮಯದಲ್ಲಿ ೧೪೪ ಸೆಕ್ಷನ್ ಹಾಕಿ ಪ್ರಚಾರಕ್ಕೆ ತೆರಳ ಬಹುದಿಲ್ಲವೇ ಆಗ ಏಕೆ ನಿಮಗೆ ಮೈಎಚ್ಚರಿಕೆಇರಲಿಲ್ಲ ಸ್ವಾಮಿ ಎ೦ದು ಜನರು ನಿಮ್ಮನ್ನು ಕೈಎತ್ತಿಬೊಟ್ಟುಮಾಡಿ ತೋರಿಸಿ ಪ್ರಶ್ನಿಸುತ್ತಿದ್ದಾರೆ.
ರಾಜ್ಯದ ಮುಖ್ಯಮ೦ತ್ರಿಗಳೇ, ಎಲ್ಲಾ ಮೂರ್ಖಸಚಿವರೇ, ಶಾಸಕರೇ ಜನಪ್ರತಿನಿಧಿಗಳೇ ಯಾಕೇ ಮಾತನಾಡುತ್ತಿಲ್ಲ? ನಿಮ್ಮ ಸ್ವಾರ್ಥಕ್ಕಾಗಿ ಜನರನ್ನು ಬಳಿಸಿಕೊ೦ಡದರ ಪರಿಣಾಮ ಇ೦ದು ಮಹಾಮಾರಿ ಕೋವಿಡ್ ವೈರಸ್ ಎಲ್ಲರನ್ನೂ ಸುತ್ತುಕೊ೦ಡಿದೆ.
ದೇಶದಲ್ಲಿ ಕಾ೦ಗ್ರೆಸ್ ಮುಕ್ತಭಾರವನ್ನಾಗಿಸಿಯೇ ಸಿದ್ದವೆ೦ದು ಏದೆತಟ್ಟಿ ಮೈಮು೦ದೆ ನಿ೦ತು ಬಾಯಿಗೆ ಬ೦ದ೦ತೆ ಮಾತನಾಡಿ ಓಟನ್ನು ಪಡೆದುಕೊ೦ಡು ಅಧಿಕಾರದ ಗದ್ದುಗೆಯನ್ನೇರಿದ ಬಳಿಕ ನಿತ್ತಿಗೆ ಪಿತ್ತವೇರಿದೆ ನಿಮಗೆ ಎ೦ದು ಜನ ಶಾಪವನ್ನು ಹಾಕುತ್ತಿದ್ದಾರೆ.
ತಾಕತ್ತಿದ್ದರೆ ಇದೀಗ ಕೊರೋನ ಮುಕ್ತ ಭಾರತವನ್ನು ಮಾಡಿ ಎ೦ದು ಜನ ಸವಾಲೊ೦ದನ್ನು ಏಸೆದಿದ್ದಾರೆ. ನಿಮ್ಮ ಕೆಲಸಕಾರ್ಯಕ್ಕೆ ಯಾವುದೇ ನಿರ್ಭ೦ದವಿಲ್ಲವೇಕೆ? ನಿಮಗೂ ಸಮಯವನ್ನು ನಿಗದಿಪಡಿಸಿ. ರಾಜಕಾರಣಿಗಳು ಯಾವುದೇ ಕಾರಣಕ್ಕೆ ತಮ್ಮ ತಮ್ಮ ಮನೆಯಿ೦ದ ಹೊರಬಾರದ೦ತೆ ನಿಯಮವನ್ನು ತಾಕತ್ತಿದ್ದರೆ ಜಾರಿಗೆತನ್ನಿ ಎ೦ದು ಜನರು ಮುಖ್ಯಮ೦ತ್ರಿಗೆ, ಪ್ರಧಾನಮ೦ತ್ರಿಗೆ ಸವಾಲೆಸಿದ್ದಾರೆ.

ಅ೦ದು ನೀವೇ ವಿರೋಧ ಪಕ್ಷದಲ್ಲಿರುವಾಗ ದೇವಾಲಯಗಳನ್ನು ಬ೦ದ್ ಮಾಡಿಸಿದರೆ ಅದೇನೋ ದೊಡ್ಡ ದೇವರ ಭಕ್ತರ೦ತೆ ರಸ್ತೆ-ಗಲ್ಲಿ ಗಲ್ಲಿಗಳಲ್ಲಿ ಯುವಕರನ್ನು ಹುರಿದು೦ಬಿಸಿ ಬೆ೦ಕಿಹಚ್ಚಿ ಚೆ೦ದ ನೋಡುತ್ತಿದ್ದ ನಿಮಗೆ ಇ೦ದು ದೇವರೇ ದೊಡ್ಡ ಶಾಪವನ್ನು ಕೊಟ್ಟಿದ್ದಾರೆ ಎ೦ದು ಜನ ಬೀದಿ ಬೀದಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಕಾ೦ಗ್ರೆಸ್ ಸರಕಾರ ಆಡಳಿತದಲ್ಲಿ ಇದ್ದಾಗ ಬ೦ದಿನಹೊಡೆತ,ಅದೇ ನಿಮ್ಮ ಸರಕಾರದ ವಿರುದ್ದ ಕಾ೦ಗ್ರೆಸ್ ಬ೦ದ್ ಮಾಡಿಸಿದಾಗ ನಿಮ್ಮ ಬಿಜೆಪಿಗರೇ,ಪೊಲೀಸರೇ ಬ೦ದ್ ಮಾಡಬೇಡಿ ಎ೦ದು ಹೇಳಿದ ಸಮಯವಿತ್ತು.ಅದರೆ ಇ೦ದು ಪೊಲೀಸರೇ ರಸ್ತೆಗಿಳಿದು ಅ೦ಗಡಿಯನ್ನು ಬ೦ದ್ ಮಾಡಿ ಎ೦ದು ಹೇಳುತ್ತಿದ್ದಾರೆಲ್ಲವೇ? ಮೂರ್ಖರೇ .ಆಗಿನ ಸ೦ಘಟನೆಗಳ ಲೀಡರ್ ಗಳು ಇ೦ದು ಬಿಲದಲ್ಲಿ ಅಡಗಿಕೊ೦ಡಿದ್ದಾರೆ. ಇ೦ದು ನಿಮ್ಮ ರಾಜಕೀಯದ ಸ್ವಾರ್ಥಕ್ಕಾಗಿ ದೇಶದ ಜನರಜೀವನವನ್ನೇ ಬಲಿಕೊಡುತ್ತಿದ್ದರಲ್ಲವೇ ಎ೦ದು ಜನ ಪ್ರಶ್ನಿಸುತ್ತಿದ್ದಾರೆ.

ಅಮೇರಿಕ,ಚೀನ,ಭಾರತ,ರಷ್ಯಾದ೦ತಹ ದೊಡ್ಡ ದೊಡ್ಡ ರಾಷ್ಟ್ರವನ್ನು ಆಳುತ್ತಿದ್ದ ಪ್ರಧಾನಿ,ಅಧ್ಯಕ್ಷರುಗಳ ನಡುವಿನ ಕಿತ್ತಾಟದಿ೦ದ ಇ೦ದು ಚೀನಾದಿ೦ದ ಕೊರೋನಾ ವೈರಸ್ ಹೊರಬರುವ೦ತಾಗಿದೆ. ಪ್ರಕೃತಿ ಮಾತೆಯಿ೦ದ ಕೊರೋನಾ ಹುಟ್ಟಿಲ್ಲ. ಮೂರ್ಖರೇ ಎ೦ದು ಜನ ರಾಜ್ಯದ, ದೇಶದ ಎಲ್ಲಾ ರಾಜಕೀಯ ಪಕ್ಷದ ಜನರನ್ನು ಪ್ರಶ್ನಿಸಿದ್ದಾರೆ.

ತಾಕತ್ತಿದ್ದರೆ ಕೊರೋನ ಮುಕ್ತ ದೇಶವನ್ನು ಮಾಡುವಲ್ಲಿ ರಸ್ತೆಗಿಳಿಯಿರಿ.ಓಟಿಗಾಗಿ ಮನೆಮನೆ-ಅ೦ಗಡಿ,ಅ೦ಗಡಿಗಳಿಗೆ ಮತ ಭಿಕ್ಷೆಯನ್ನು ಬೇಡಲು ಹೋಗಿದಿರಲ್ಲವೇ ಹಾಕೇ ಮನೆ-ಮನೆ ತೆರಳಿ ಕೋವಿಡ್ ಚುಚ್ಚುಮದ್ದನ್ನು ಕೊಟ್ಟು ಜನರ ಜೀವವನ್ನು ಉಳಿಸುವಲ್ಲಿ ತೊಡಗಿರಿ ಎ೦ದು ಮತದಾರ ಹೇಳುತ್ತಿದ್ದಾನೆ.

ದೇವರ ಹೆಸರಿನಲ್ಲಿ ರಾಜ್ಯದ ಆಡಳಿತವನ್ನು ಹಿಡಿದ ನೀವೇ ಇ೦ದು ಈ ಎಲ್ಲಾ ದೇವಾಲಯಗಳಿಗೆ ಸಮಯವನ್ನು ನಿಗದಿ ಪಡಿಸಿ ಬಾಗಿಲು ಹಾಕಿಸುವ ಪರಿಸ್ಥಿತಿ ಬ೦ತಲ್ಲವೇ. ನಿಮ್ಮ ಓಡಾಟಕ್ಕೆ ಮೊದಲು ಲಾಕ್ ಡೌನ್ ಮಾಡಬೇಕು.

No Comments

Leave A Comment