Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಚೀನಾ ರಾಯಬಾರಿಗಳಿದ್ದ ಪಾಕಿಸ್ತಾನದ ಹೊಟೇಲ್‌‌ನಲ್ಲಿ ಬಾಂಬ್‌ ಸ್ಪೋಟ – ನಾಲ್ವರು ಮೃತ್ಯು

ಇಸ್ಲಾಮಾಬಾದ್‌: ನೈರುತ್ಯ ಪಾಕಿಸ್ತಾನದಲ್ಲಿ ಚೀನಾದ ರಾಯಬಾರಿಗೆ ಆತಿಥ್ಯ ವಹಿಸಿದ್ದ ಹೊಟೇಲ್‌‌‌ನಲ್ಲಿ ಎಪ್ರಿಲ್‌ 21ರ ಬುಧವಾರ ತಡರಾತ್ರಿ ಬಾಂಬ್‌ ಸ್ಪೋಟಗೊಂಡು ನಾಲ್ಕು ಮಂದಿ ಸಾವನ್ನಪ್ಪಿ, ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಳು ತಿಳಿಸಿದ್ದಾರೆ.

ಬಲೂಚಿಸ್ತಾನದ ಕೈಟ್ಟಾ ನಗರದ ಐಶಾರಾಮಿ ಸೆರೆನಾ ಹೊಟೇಲ್‌‌ನಲ್ಲಿ ಈ ದುರಂತ ಸಂಭವಿಸಿದೆ.

“ರಾಯಭಾರಿ ನೇತೃತ್ವದ ಸು,ಆರು ನಾಲ್ಕು ಮಂದಿಯ ಚೀನಾ ನಿಯೋಗವು ಹೊಟೇಲ್‌ನಲ್ಲಿ ತಂಗಿದ್ದರು. ಸ್ಪೋಟ ಸಂಭವಿಸಿದ ವೇಳೆ ರಾಯಭಾರಿಗಳು ಸಭೆಗೆ ಹೋಗಿದ್ದರು” ಎಂದು ಹಿರಿಯ ಪೊಲೀಸ್‌‌ ಅಧಿಕಾರಿ ಅಜರ್‌ ಇಕ್ರಂ ಹೇಳಿದ್ದಾರೆ.

“ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಯಾವುದೇ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ ಎನ್ನಲಾಗಿದೆ.

No Comments

Leave A Comment