Log In
BREAKING NEWS >
ಅಪಾರ ಭಕ್ತಜನಸ್ತೋಮದ ನಡುವೆ ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಮಹೋತ್ಸವದ "ರ೦ಗಪೂಜೆ" ಸ೦ಪನ್ನ...ಏಕಾದಶಿಯ ಪ್ರಯುಕ್ತ ಸೋಮವಾರದ೦ದು ಸ೦ಜೆ 5ಗ೦ಟೆಗೆ ನಗರಭಜನೆ ಆರ೦ಭ...

ಐಪಿಎಲ್‌ನಲ್ಲಿ ಸತತ 3ನೇ ಗೆಲುವು ದಾಖಲಿಸಿದ ಧೋನಿ ಪಡೆ: ಆರ್‌ಸಿಬಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಸಿಎಸ್‌ಕೆ!

ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ 14ನೇ ಆವೃತ್ತಿಯಲ್ಲಿ ಸತತ ಮೂರನೇ ಗೆಲುವು ದಾಖಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರ್‌ಸಿಬಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.

ಮುಂಬೈನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ನಿಗದಿತ ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 220 ರನ್ ಬಾರಿಸಿತ್ತು.

ಚೆನ್ನೈ ನೀಡಿದ 221 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕೋಲ್ಕತ್ತಾ 202 ರನ್ ಗೆ ಆಲೌಟ್ ಆಗಿದ್ದು 18 ರನ್ ಗಳಿಂದ ಚೆನ್ನೈಗೆ ಶರಣಾಗಿದೆ.

ಚೆನ್ನೈ ಪರ ರುತುರಾಜ್ ಗಾಯಕ್ವಾಡ್ 64, ಡುಪ್ಲೆಸಿಸ್ ಅಜೇಯ 95, ಮೊಯಿನ್ ಅಲಿ 25, ಎಂಎಸ್ ಧೋನಿ 17 ರನ್ ಬಾರಿಸಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ಪರ ದಿನೇಶ್ ಕಾರ್ತಿಕ್ 40, ಅಂಡ್ರೆ ರಸೆಲ್ 54 ಮತ್ತು ಪ್ಯಾಟ್ ಕಮೀನ್ಸ್ ಅಜೇಯ 66 ರನ್ ಗಳಿಸಿದ್ದಾರೆ.

2021ರ ಐಪಿಎಲ್ ಟೂರ್ನಿಯಲ್ಲಿ 4 ಪಂದ್ಯಗಳ ಪೈಕಿ 3 ಪಂದ್ಯ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ಅಂಕ ಸಂಪಾದಿಸಿದೆ. ಇನ್ನು ಆರ್ ಸಿಬಿ ಸಹ ಮೂರು ಪಂದ್ಯ ಗೆದ್ದು 6 ಅಂಕ ಸಂಪಾದಿಸಿದ್ದರೂ ಚೆನ್ನೈ ರನ್ ರೇಟ್ ನಿಂದಾಗಿ ಅಗ್ರಸ್ಥಾನಕ್ಕೇರಿದೆ.

No Comments

Leave A Comment