ಶ್ರೀಕೃಷ್ಣಮಠ ರಾಜಾಂಗಣದ ನರಸಿಂಹತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀಅದಮಾರು ಮಠದ ಆಶ್ರಯದಲ್ಲಿ,೧೫ ದಿನಗಳ ಪರ್ಯಂತ ನಡೆಯುತ್ತಿರುವ”ಶ್ರೀರಾಮ ಹನುಮದುತ್ಸವ”ದ ಸಂದರ್ಭದಲ್ಲಿ,ರಾಮಮಂದಿರದ ಶಂಕುಸ್ಥಾಪನೆ ನೆರವೇರಿಸಿದ ದೈವಜ್ಞ ಪುರೋಹಿತರಾದ ವಿದ್ವಾನ್ ಗಂಗಾಧರ ಪಾಠಕ್ ಇವರು ‘ರಾಮಮಂತ್ರ ಮಹತ್ವದ’ ಕುರಿತು ಮನೋಜ್ಞವಾಗಿ ವೀಡಿಯೋ ಉಪನ್ಯಾಸ ನೀಡಿದರು.ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಅನುಗ್ರಹಿಸಿದರು.ಈ ಕಾರ್ಯಕ್ರಮದಲ್ಲಿ ವಿದ್ವಾಂಸರಾದ ಕೃಷ್ಣರಾಜ ಭಟ್ ಕುತ್ಪಾಡಿ ಇವರು ಕಾರ್ಯಕ್ರಮ ನಿರ್ವಹಿಸಿದರು.