Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಉಡುಪಿ ಇಂಡಸ್ಟ್ರೀಯಲ್ ಸೊಸೈಟಿ ವತಿಯಿಂದ ಜಯ ಕರ ಶೆಟ್ಟಿ ಇಂದ್ರಾಳಿ ರವರಿಗೆ ಅಭಿನಂದನೆ

ಉಡುಪಿ ; ಸಹಕಾರಿ ಕ್ಷೇತ್ರದಲ್ಲಿ ಸಹಕಾರ ವಿದ್ದಲ್ಲಿ ಸಾಧನೆಯೇ ಗುರಿ ಮುಟ್ಟಲು ಸಾಧ್ಯ , ಒಂದು ಸಂಸ್ಥೆ ಉನ್ನತ ಮಟ್ಟಕ್ಕೆ ಏರಲು ಸಿಬ್ಬಂದಿ ಮುಖ್ಯ ,ಸಂಸ್ಥೆ ಗೆ ದೊಡ್ಡ ಕಟ್ಟಡ ಮುಖ್ಯ ಅಲ್ಲ ಅದರ ಸಿಬ್ಬಂಧಿ ಪ್ರಾಮಾಣಿಕ ವಾಗಿ ಸೇವೆ ನೀಡಿದಾಗ ಸಂಸ್ಥೆ ಅಭಿವೃದ್ಧಿ ಈ ನಿಟ್ಟಿನಲ್ಲಿ ಜಯಕರ ಶೆಟ್ಟಿ ಇಂದ್ರಾಳಿ ಉತ್ತಮ ಉದಾಹರಣೆ .

ಉಡುಪಿ ಇಂಡಸ್ಟ್ರೀಯಲ್ ಕೋ ,ಆಪರೇಟಿವ್ ಸೊಸೈಟಿ ವತಿಯಿಂದ ಶನಿವಾರ ಹೋಟೆಲ್ ಓಷನ್ ಪರ್ಲ್ನಲ್ಲಿ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ದ.ಕ. ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ದೆ ಅಭಿನಂದಿಸಿ ಮಾತನಾಡಿದರು.

ನೌಕರರು ಪ್ರಾಮಾಣಿಕತೆಯಿಂದ ಸೇವೆ ಕೊಟ್ಟರೆ ತಾವೂ ಹಾಗೂ ತಮ್ಮ ಸಂಸ್ಥೆ ಉನ್ನತ ಮಟ್ಟಕೆ ಏರುವುದನ್ನು ಕಾಣಲೂ ಸಾಧ್ಯ , ಈ ನಿಟ್ಟಿನಲ್ಲಿ ಹಂತ ಹಂತವಾಗಿ ಬೆಳೆದು ಇಂದು ರಾಜ್ಯ ಸಹಕಾರ ಮಹಾ ಮಂಡಲ ನೂತನ ನಿರ್ದೇಶಕರಾಗಿ ಆಯ್ಕೆ ಗೊಂಡ ಜಯಕರ ಶೆಟ್ಟಿಯವರನ್ನು ಸಂಸ್ಥೆ ಪರವಾಗಿ ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿದ ಜಯ ಕರ ಶೆಟ್ಟಿ ಇಂದ್ರಾಳಿ ಮಾತನಾಡಿ ಪ್ರಾಮಾಣಿಕತೆ ,ಮಾನಸಾಕ್ಷಿ ಪೂರ್ವಕ ದುಡಿದಲ್ಲಿ ಅಧಿಕಾರ ನಮ್ಮನರಸಿ ಬರುತ್ತದೆ , ಸಹಕಾರಿ ಕ್ಷೇತ್ರದ ಸಮಸ್ಯೆ ಗಳನ್ನೂ ಪರಿವಾರಿಸುವುದಾಗಿ ತಿಳಿಸಿದರು. ಉಡುಪಿ ಇಂಡಸ್ಟ್ರೀಯಲ್ ಕೋ ,ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಅರುಣಕುಮಾರ ಶೆಟ್ಟಿ ಸ್ವಾಗತಿಸಿ, ಉಪಧ್ಯಕ್ಷರಾದ ಮಟ್ಟಾರ್ ಗಣೇಶ್ ಕಿಣಿ ವಂದಿಸಿ,ಜನರಲ್ ಮೈನೇಜರ್ ರಾಜೇಶ್ ಹೆಗ್ದೆ ಕಾರ್ಯಕ್ರಮ ನಿರೂಪಿಸಿದರು.

No Comments

Leave A Comment