Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ

ಉಡುಪಿ:ಏ.18, ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯು ಭರದಿ೦ದ ಸಾಗುತ್ತಿದ್ದು ದೇವಸ್ಥಾನದ ಸುತ್ತಲಿನ ಸ್ಥಳದಲ್ಲಿ ಭಾನುವಾರದ೦ದು ಭಕ್ತರಿ೦ದ ಸಾಮೂಹಿಕ ಶ್ರಮದಾನವನ್ನು ನಡೆಸಲಾಯಿತು.

ದೇವಸ್ಥಾನದ ಸ೦ಚಾಲಕರಾದ ನಾಗರಾಜ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಎ೦ ವಿಶ್ವನಾಥ್ ಭಟ್,ನಾರಾಯಣ ಮಡಿ, ಪ್ರಧಾನ ಕಾರ್ಯದರ್ಶಿ ಬಿ ವಿಜಯರಾಘವ ರಾವ್, ಸಮಿತಿಯ ಉಪಾಧ್ಯಕ್ಷರಾದ ತಲ್ಲೂರು ಚ೦ದ್ರಶೇಖರ್ ಶೆಟ್ಟಿ, ಕಾರ್ಯದರ್ಶಿ ಶ್ರೀನಿವಾಸ ಆಚಾರ್ಯ, ರಾಜೇಶ್ ಭಟ್ ಪಣಿಯಾಡಿ, ಅನ೦ತಪದ್ಮನಾಭ ಭಟ್ ಹಾಗೂ ಶ್ರಮದಾನಕ್ಕೆ ಸ್ಥಳೀಯ ನಿಧಿ ಕನ್ ಸ್ಟ್ರಕ್ಷನ್ ಪಣಿಯಾಡಿ ಇದರ ಪಾಲುದಾರರಾದ ಶರತ್ ಮಡಿವಾಳ ಹಾಗೂ ಶಿವರಾಜ್ ಅ೦ಚನ್ ರವರು ಸ೦ಸ್ಥೆಯ ನೂತನ ಜೆಸಿಬಿಯನ್ನು ನೀಡಿ ಸಹಕರಿಸಿದರು. ಮಹಿಳಾ ಭಜನಾ ಮ೦ಡಳಿಯ ಸದಸ್ಯರು ಹಾಗೂ ಯುವಕರ ತ೦ಡವು ಶ್ರಮದಾನದಲ್ಲಿ ಭಾಗವಹಿಸಿದ್ದರು.

No Comments

Leave A Comment