Log In
BREAKING NEWS >
ಸೋಮವಾರದಿ೦ದ ಚಿನ್ನಾಭರಣದ ಅ೦ಗಡಿ ಅಲ್ ಲಾಕ್ -ಚಿನ್ನ ಖರೀದಿಸಲೊ೦ದು ಅವಕಾಶ...

ಖ್ಯಾತ ವಿಕಿರಣಶಾಸ್ತ್ರಜ್ಞ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಕಾರ್ಕಳ ಸುಬ್ಬರಾವ್ ವಿಧಿವಶ

ಹೈದರಾಬಾದ್: ಖ್ಯಾತ ವಿಕಿರಣಶಾಸ್ತ್ರಜ್ಞ ಹಾಗೂ ನಿಜಾಮ್ ಮೆಡಿಕಲ್ ಸೈನ್ಸ್ ನ ಮೊದಲ ನಿರ್ದೇಶಕ ಡಾ. ಕಾರ್ಕಳ ಸುಬ್ಬರಾವ್ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಸಿಕಂದರಾಬಾದ್ ನ ಕಿಮ್ಸ್ ಆಸ್ಪತ್ರೆಯಲ್ಲಿ  ದಾಖಲಾಗಿದ್ದರು.

ಜನವರಿ 25 1925 ರಂದು  ಆಂಧ್ರಪ್ರದೇಶದ ಮೆಡಿಕಲ್ ಕಾಲೇಜಿನಲ್ಲಿ ಜನಿಸಿದ್ದರು.  ಅವರಿಗೆ ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ದೊರೆತಿತ್ತು.

ಯುಎಸ್ಎಯಿಂದ ಭಾರತಕ್ಕೆ ಮರಳಿದ ನಂತರ ಮತ್ತು ನಿಮ್ಸ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ನಂತರ, ಎಪಿ ಮಾಜಿ ಮುಖ್ಯಮಂತ್ರಿ ಎನ್ ಟಿ ರಾಮರಾವ್  ಕರೆಯಿಂದ ಪ್ರಭಾವಿತರಾದ ಡಾ. ಸುಬ್ಬಾರಾವ್ ಅವರು ನಿಮ್ಸ್ ಅನ್ನು ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

No Comments

Leave A Comment