
ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಯುಗಾದಿ ಸ೦ಭ್ರಮ-ಹಬ್ಬ-ಹರಿದಿನಗಳ ಪಟ್ಟಿ ಬಿಡುಗಡೆ
ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ದಲ್ಲಿ ಮಂಗಳವಾರ ರಾತ್ರಿ ಯುಗಾದಿ ಪ್ರಯುಕ್ತ ದೇವಳದ ಪ್ರಧಾನ ಅರ್ಚಕ ರಾದ ದಯಾಘನ್ ಭಟ್ ಧಾರ್ಮಿಕ ಪೂಜಾ ವಿಧಾನ ಹಾಗೂ ಶ್ರೀದೇವರಿಗೆ ವಿಶೇಷ ಅಲಂಕಾರ ನೆರವೇರಿಸಿದರು.
ರಾತ್ರಿ ಪಲ್ಲಕಿ ಉತ್ಸವ ನೆಡೆಯಿತು ಬಳಿಕ ವಸಂತ ಪೂಜೆ ,ಅಷ್ಟವದಾನ ಸೇವೆ ನೆಡೆಯಿತು ಮಹಾ ಪೂಜೆ ಬಳಿಕ ಪ್ರಸಾದ ವಿತರಣೆ ನೆಡೆಯಿತು.
ದೇವಳದ ಆಡಳಿತ ಮುಕ್ತೇಶ್ವರ ಪಿ ವಿ ಶೆಣೈ ,ವಿನಾಯಕ ಭಟ್ , ಸುರೇಶ ಭಟ್ ,ಗಿರೀಶ ಭಟ್ , ಲಕ್ಷ್ಮೀನಾರಾಯಣ ಭಟ್ , ವಸಂತ ಕಿಣಿ ,ವಿಶಾಲ್ ಶೆಣೈ , ವಿವೇಕ ಶೆಣೈ ಹಾಗೂ ಜಿ ಎಸ್ ಬಿ ಯುವಕ ಮಂಡಳಿ ಸದಸ್ಯರು ಮತ್ತು ಸಾಮಾಜ ಭಾಂದವರು ಉಪಸಿತರಿದ್ದರು.