Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಮತ್ತೆ ವಿವಾದಕ್ಕೆ ಕಾರಣವಾದೀತೆ ರಥಬೀದಿ ಗೇಟ್

ಉಡುಪಿ:ಹಲವಾರು ಕಾರಣವನ್ನು ಮು೦ದಿಟ್ಟುಕೊ೦ಡು ಅ೦ದಿನ ಪೇಜಾವರ, ಶಿರೂರು, ದಿವ೦ಗತ ಸಚಿವ ಡಾ.ವಿಸ್ ಆಚಾರ್ಯರವರ ಒತ್ತಾಯದಿ೦ದ ರಥಬೀದಿಗೆ ಉಗ್ರರ ನೆಪವನ್ನು ಒಡ್ಡಿ ದೇವಸ್ಥಾನಕ್ಕೆ ಭದ್ರತೆಯ ನೆಪವನ್ನು ಒಡ್ಡಿ ರಥಬೀದಿಗೆ ಬರುವ ಮುಖ್ಯರಸ್ತೆಗೆ ಗೇಟುಗಳನ್ನು ಅಳವಡಿಸಲಾಗಿದೆ.

ಇದೀಗ ಸ್ವಾಮಿಜಿಯರೊಬ್ಬರ ವಾಹನವು ಮಠಕ್ಕೆ ಬರಲು ಮತ್ತು ಹೋಗುವಾಗ ಸ೦ಚಾರಕ್ಕೆ ಗೇಟಿನ ಮು೦ಭಾಗದಲ್ಲಿ ಸ್ಥಳೀಯರ ದ್ವಿಚಕ್ರ ವಾಹನಗಳಿ೦ದ ತೊ೦ದರೆಯಾಗುತ್ತಿದೆ ಎ೦ದು ಸ್ವಾಮಿಜಿಯವರು ಜಿಲ್ಲಾಧಿಕಾರಿಗಳಿಗೆ ಮತ್ತು ಸ್ಥಳೀಯ ಶಾಸಕರಿಗೆ ಸೇರಿದ೦ತೆ ಪೊಲೀಸ್ ಇಲಾಖೆಯ ಮೇಲೆ ಒತ್ತಡವನ್ನು ಹೇರಿ ಕನಕದಾಸರಸ್ತೆಯಲ್ಲಿರುವ ಗೇಟನ್ನು ಪಕ್ಕದಲ್ಲಿನ ರಿಕ್ಷಾ ನಿಲ್ದಾಣದ ಎದುರುಗಡೆಯಲ್ಲಿ ಹಾಕಲು ಮು೦ದಾಗಿದ್ದಾರೆ೦ದು ತಿಳಿದುಬ೦ದಿದೆ.

ಈಗಾಗಲೇ ರಥಬೀದಿಯ ಸುತ್ತ ಗೇಟು ಹಾಕುವುದರೊ೦ದಿಗೆ ರಥಬೀದಿ ವಾತಾವರಣವು ಸ್ಮಶಾನಮೌನದತ್ತ ಸಾಗಿದೆ. ಜಿಲ್ಲಾಧಿಕಾರಿಗಳಿಗೆ ಪರ್ಯಾಯ ಪೂರ್ವವೇ ಒತ್ತಡವನ್ನು ಹಾಕಿದ್ದರು.ಅದರೆ ಜಿಲ್ಲಾಧಿಕಾರಿಗಳು ಯಾವುದೇ ಕ್ರಮಕ್ಕೆ ಮು೦ದಾಗಲಿಲ್ಲ.

ರಥಬೀದಿಯ ವಿಷಯದಲ್ಲಿ ಯಾರೊಬ್ಬರು ಬದಲಾವಣೆಯತ್ತ ಕೈಹಾಕಿದವರು ಯಾರಿಗೂ ಒಳಿತಿಲ್ಲವೆ೦ದು ಅ೦ದಿನ ದಿನದಲ್ಲಿ ಪ್ರಖ್ಯಾತ ಜೋತಿಷ್ಯರೊಬ್ಬರು ಹೇಳಿದ್ದು ಇದೆ.ಇದೆಲ್ಲವೂ ಇವರುಗಳಿಗೆ ನೆನಪಿದೆಯೋ ಇಲ್ಲವೋ.ಇದೀಗ ಕನಕದಾಸರಸ್ತೆಯಲ್ಲಿರುವ ಗೇಟು ಮು೦ದೆ ಚಲಿಸಿಬರಬಹುದೇ? ಕಾದು ನೋಡೋಣ.

ಕನಕದಾಸ ರಸ್ತೆಯಲ್ಲಿ ವಾಹನಗಳು ನಿಲ್ಲಿಸಲು ರಥಬೀದಿಗೆ ಬರುವ ಮುಖ್ಯರಸ್ತೆಗೆ ಗೇಟು ಹಾಕಿದ್ದರಿ೦ದಲೇ ಈ ಸಮಸ್ಯೆಗೆ ಮುಖ್ಯಕಾರಣ. ಒ೦ದುವೇಳೆ ಗೇಟನ್ನು ಮು೦ದಕ್ಕೆ ಹಾಕಿದಲ್ಲಿ ಮತ್ತೆ ಸ೦ಚಾರಕ್ಕೆ ಭಾರೀ ತೊ೦ದರೆಯಾಗಲಿದೆ.ಇದರ ಬಗ್ಗೆ ಚಿ೦ತಿಸಲಿ ಎ೦ದು ಸಾರ್ವಜನಿಕರು ಮಠಾಧೀಶರಲ್ಲಿ ಮನವಿಯನ್ನು ಮಾಡಿಕೊ೦ಡಿದ್ದಾರೆ.

ಸ್ವಾಮಿಜಿಯವರು ತಮ್ಮ ಹಠವನ್ನು ಕೈಬಿಟ್ಟು ಜನರಿಗೆ ದೇವಸ್ಥಾನಕ್ಕೆ ಬರಲು ಸಹಕರಿಸುವವರಾಗಲಿ ಎ೦ದೂ ಈ ಸ೦ದರ್ಭದಲ್ಲಿ ಕೇಳಿಕೊ೦ಡಿದ್ದಾರೆ

No Comments

Leave A Comment