Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಶೋಪಿಯಾನ್ ಎನ್ ಕೌಂಟರ್: ಮೂವರು ಅಪರಿಚಿತ ಉಗ್ರರ ಹತ್ಯೆ, ಮುಂದುವರಿದ ಕಾರ್ಯಾಚರಣೆ

ಜಮ್ಮು-ಕಾಶ್ಮೀರ: ಕಣಿವೆ ಪ್ರದೇಶ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಮತ್ತೆ ಎನ್ ಕೌಂಟರ್ ನಡೆದಿದೆ. ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಮೂರು ಅಪರಿಚಿತ ಭಯೋತ್ಪಾದಕರು ಹತ್ಯೆಯಾಗಿದ್ದಾರೆ.

ಶೋಪಿಯಾನ್ ಜಿಲ್ಲೆಯ ಹಡಿಪೊರದಲ್ಲಿ ಎನ್ ಕೌಂಟರ್ ಇನ್ನೂ ನಡೆಯುತ್ತಿದೆ. ಹೆಚ್ಚಿನ ವಿವರ ತಿಳಿದುಬಂದಿಲ್ಲ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

ಉಗ್ರಗಾಮಿ ಸಂಘಟನೆಗೆ ಹೊಸದಾಗಿ ಸೇರಿದ ಯುವಕರನ್ನು ಎನ್ ಕೌಂಟರ್ ಆರಂಭದಲ್ಲಿ ಪ್ರಾಮಾಣಿಕವಾಗಿ ಶರಣಾಗುವಂತೆ ಪೊಲೀಸರು ಕೇಳಿಕೊಂಡರು. ಒಬ್ಬ ಉಗ್ರನ ಪೋಷಕರು ಕೂಡ ಮನವಿ ಮಾಡಿಕೊಂಡಿದ್ದರೂ ಆತ ಯಾರ ಮಾತನ್ನೂ ಕೇಳಲಿಲ್ಲ, ಬೇರೆ ಉಗ್ರರು ಆತನನ್ನು ಶರಣಾಗಲು ಬಿಡಲಿಲ್ಲ, ಹೀಗಾಗಿ ಪೊಲೀಸರು ಕೊಂದು ಹಾಕಿದರು ಎಂದು ತಿಳಿದುಬಂದಿದೆ.

No Comments

Leave A Comment