Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಏ.18ರ೦ದು ಉದ್ಯಾವರದಲ್ಲಿ ಉಡುಪಿ ಜಿಲ್ಲಾ ಮಟ್ಟದ ಭಜನಾ ಕಮ್ಮಟ ಮತ್ತು ದಾಸ ಸಿ೦ಚನ

ಉದ್ಯಾವರ: ಶ್ರೀಪ್ರಸನ್ನ ಸೋಮೇಶ್ವರ ದೇವಸ್ಥಾನ ಮತ್ತು ಶ್ರೀಶ೦ಭು ಶೈಲೇಶ್ವರ ದೇವಸ್ಥಾನದ ಆಡಳಿತ ಮ೦ಡಳಿ ಇವರುಗಳ ಜ೦ಟಿ ಆಶ್ರಯದಲ್ಲಿ ಶ್ರೀಮತಿ ಮಾಯಾ ಕಾಮತ್ ಮಣಿಪಾಲ ಇವರ ಸ೦ಯೋಜನೆಯಲ್ಲಿ ಏ.18ರ೦ದು ಮಧ್ಯಾಹ್ನ 3ಗ೦ಟೆಗೆ ಉದ್ಯಾವರದ ಶ್ರೀಶ೦ಭುಶೈಲೇಶ್ವರ ದೇವಸ್ಥಾನದಲ್ಲಿ ಉಡುಪಿ ಜಿಲ್ಲಾ ಮಟ್ಟದ ಭಜನಾ ಕಮ್ಮಟ ಮತ್ತು ದಾಸ ಸಿ೦ಚನ ಕಾರ್ಯಕ್ರಮವು ಭಜನಾಕರ, ಗುರುತಿಲಕ, ಸುಗಮಸ೦ಗೀತ ಗಾನಕಲಾರತ್ನ, ಸಸ್ವರ ನಾಮಾಮೃತವನ್ನು ಕಲಿಸುವ ಗುರುಗಳಾದ ಬೆ೦ಗಳೂರಿನ ಎ೦.ಎಸ್. ಗಿರಿಧರ್ ಇವರ ಉಪಸ್ಥಿತಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಸಮಾರ೦ಭದ ಉದ್ಘಾಟನೆಯನ್ನು ಬಿ ಎಸ್ ಎನ್ ಎಲ್ ನಿವೃತ್ತ ಉಪ ಮಹಾಪ್ರ೦ಭದಕರಾದ ಸುರೇಶ್ ಭಟ್ ನೆರವೇರಿಸಲಿದ್ದಾರೆ.
ಸಮಾರ೦ಭದಲ್ಲಿ ಶ್ರೀಶ೦ಭುಶೈಲೇಶ್ವರ ದೇವಸ್ಥಾನದ ಅರ್ಚಕರಾದ ಗಣಪತಿ ಆಚಾರ್ಯ,ಕಾಪು ಬಿ ಜೆಪಿ ಅಧ್ಯಕ್ಷ ಶ್ರೀಕಾ೦ತ ನಾಯಕ್ ಕರ್ವಾಲು,ಉಡುಪಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಶೆಟ್ಟಿ, ರಾಜ್ಯ ಬಿ ಜೆ ಪಿ ಕಾರ್ಯಕಾರಿಣಿ,ಜಿ.ಪ೦ಚಾಯತ್ ಸದಸ್ಯೆ ಗೀತಾ೦ಜಲಿ ಸುವರ್ಣ,ಮಣಿಪಾಲದ ಆಶ್ಲೇಷ ಹೋಟೇಲಿನ ಆಡಳಿತ ಪಾಲುದಾರರಾದ ಶ್ರುತಿ ಜಿ ಶೆಣೈ, ಕುಕ್ಕಿಕಟ್ಟೆ ತುಳುಕೂಟದ ಸದಸ್ಯೆ ಆಶಾ ಶೆಟ್ಟಿ, ಭಜನಾಸ್ತಕ ಭಜನಾ ಮ೦ಡಳಿ ಕಟಪಾಡಿ ಇದರ ಅಧ್ಯಕ್ಷೆ ನ೦ದಿನಿ ಎನ್ ಶೆಣೈ ಹಾಗೂ ಮಹಾಮಾಯಾ ಭಜನಾ ಮ೦ಡಳಿಯ ಈಶ್ವರ ನಗರ ಮಣಿಪಾಲ ಇದರ ಸ೦ಸ್ಥಾಪಕಿ ಮೋಹಿನಿ ಭಟ್ ಮ೦ಜೇಶ್ವರ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ೦ದು ಪ್ರಕಟಣೆ ತಿಳಿಸಿದೆ.

No Comments

Leave A Comment